ಶಿವಮೊಗ್ಗ :ಶಿವಮೊಗ್ಗದ ಚಿನ್ನಮನೆ ಬಳಿ ನಿನ್ನೆ( ಭಾನುವಾರ) ಆಕ್ಸಿಡೆಂಟ್ ಅಗಿದ್ದು, ಆ ಘಟನೆಯಲ್ಲಿ ಬೈಕ್ ಸವಾರ ಸ್ಪಾಟ್ ಡೆತ್ ಆಗಿದ್ದಾನೆ. ಬಸ್ ಹಾಗೂ ಬೈಕ್ ನಡುವೆ ಈ ಘಟನೆ ಸಂಭವಿಸಿದೆ.
ಅಪಘಾತದಲ್ಲಿ ಬೈಕ್ ಸವಾರ ಸ್ಥಳದಲ್ಲಿಯೇ ಸಾವನ್ನಪ್ಪಿದ್ದು, ಘಟನೆಯು ಆಯನೂರು ಸಮೀಪದ ಚಿನ್ನಮನೆ ಗ್ರಾಮದಲ್ಲಿ ನಡೆದಿದೆ.
ರಿಪ್ಪನ್‌ಪೇಟೆ ಕಡೆಯಿಂದ ತೆರಳುತಿದ್ದ ಖಾಸಗಿ ಬಸ್ ಹಾಗೂ ಆಯನೂರು ಕಡೆಯಿಂದ ರಿಪ್ಪನ್‌ಪೇಟೆ ಕಡೆಗೆ ತೆರಳುತಿದ್ದ ಬೈಕ್ ನಡುವೆ ಮುಖಾಮುಖಿ ಡಿಕ್ಕಿಯಾಗಿ ಈ ಘಟನೆ ಸಂಭವಿಸಿದೆ, ಕುಂಸಿ ಪೊಲೀಸ್ ಠಾಣೆ ಪೊಲೀಸರು ಮೃತದೇಹ ಶವಾಗಾರಕ್ಕೆ ಸ್ಥಳಾಂತರ ಮಾಡಿದ್ದು, ಪ್ರಕರಣ ದಾಖಲಿಸಿಕೊಂಡಿದ್ದಾರೆ.
ವಿಚಿತ್ರ ಅಂದರೆ, ಮೃತ ನಿವಾಸಿ ಕೂರಂಬಳ್ಳಿಯ 32 ವರ್ಷದ ಮಂಜುನಾಥ್ ಹೆಣ್ಣು ನೋಡಲು ಎಂದು ರಿಪ್ಪನ್‌ಪೇಟೆ ಕಡೆಗೆ ಹೋಗುತ್ತಿದ್ದರು ಎನ್ನಲಾಗಿದೆ. ಮಹಾರಾಷ್ಟ್ರದಲ್ಲಿ ಕೆಲಸ ಮಾಡುತ್ತಿದ್ದ ಅವರು ಮದುವೆ ಸಲುವಾಗಿ ಹೆಣ್ಣು ನೋಡಲು ಊರಿಗೆ ಬಂದಿದ್ದರು. ಆದರೆ ಅಷ್ಟರಲ್ಲಿ ಈ ದುರ್ಘಟನೆ ಸಂಭವಿಸಿದೆ.