ಬೆಂಗಳೂರು; ಬೃಹತ್ ಮರಬಿದ್ದು ಹಲವು ವಾಹನಗಳು ಜಖಂ

Share It

ಬೆಂಗಳೂರು; ಹಳೆಯ ಬೃಹತ್ ಮರವೊಂದು ಉರುಳಿಬಿದ್ದ ಪರಿಣಾಮ ಅನೇಕ ವಾಹನಗಳು ಜಖಂಗೊಂಡಿರುವ ಘಟನೆ ಗುರುವಾರ ರಾತ್ರಿ ನಡೆದಿದೆ

ಜಯನಗರದ ವೆಸ್ಟ್ ಎಂಡ್ ಸರ್ಕಲ್ ಸಮೀಪ ಹಳೆಯ ಕಾಲದ ಮರವೊಂದು ನೆಲಕ್ಕುರುಳಿದೆ. ಈ ವೇಳೆ ಬೃಹತ್ ಮರದ ಕೆಳಗೆ ಅನೇಕ ವಾಹನಗಳು ಜಖಂಗೊಂಡಿರುವ ಕುರಿತು ವರದಿಯಾಗಿದೆ.

ಮರದ ಕೆಳಗೆ ಕಾರೊಂದು ಸಿಲುಕಿದ್ದು, ಆ ಕಾರಿನಲ್ಲಿ ಸಿಲುಕಿದ್ದ ಇಬ್ಬರನ್ನೂ ಸ್ಥಳೀಯರು ರಕ್ಷಣೆ ಮಾಡಿದ್ದಾರೆ. ಬಿಬಿಎಂಪಿ ಅರಣ್ಯ ವಿಭಾಗದ ಸಿಬ್ಬಂದಿ ಸ್ಥಳಕ್ಕೆ ಆಗಮಿಸಿದ್ದು, ಮರದ ಕೊಂಬೆಗಳನ್ನು ತೆರವುಗೊಳಿಸುವ ಕಾರ್ಯ ನಡೆಯುತ್ತದೆ.


Share It

You May Have Missed

You cannot copy content of this page