ಬೈಕ್ ನಲ್ಲಿ ಗಾಂಜಾ ಸಾಗಿಸುತ್ತಿದ್ದ ಆರೋಪಿಗಳ ಬಂಧನ: 10 ಕೆ.ಜಿ. ಗಾಂಜಾ ವಶ
ಚಿಕ್ಕಮಗಳೂರು: ಬೈಕ್ ನಲ್ಲಿ ಅಕ್ರಮವಾಗಿ ಗಾಂಜಾ ಸಾಗಾಟ ಮಾಡುತ್ತಿದ್ದ ಆರೋಪಗಳನ್ನು ಚಿಕ್ಕಮಗಳೂರು ಪೊಲೀಸರು ಬಂಧಿಸಿದ್ದಾರೆ.
ನಗರ ಹೊರವಲಯದ ಬೈಪಾಸ್ ರಸ್ತೆಯಲ್ಲಿ ಇಬ್ಬರು ಆರೋಪಗಳು ಗಾಂಜಾ ಸಾಗಿಸುತ್ತಿದ್ದರು. ಮಾಹಿತಿ ಮೇರೆಗೆ ಅಡ್ಡಗಟ್ಟಿದ ಪೊಲೀಸರು ಆರೋಪಿಗಳಿಂದ 10 ಕೆ.ಜಿ. ಗಾಂಜಾ, ಒಂದು ಬೈಕ್ ಮತ್ತು ಮೊಬೈಲ್ ವಶಕ್ಕೆ ಪಡೆದುಕೊಂಡು, ಆರೋಪಗಳನ್ನು ಬಂಧಿಸಿದ್ದಾರೆ.
ಬಂಧಿತ ಆರೋಪಗಳು ಚಿಕ್ಕಮಗಳೂರು ತಮಿಳು ಕಾಲೋನಿಯ ವಾಸೀಂ ಪಾಷಾ ಮತ್ತು ನಜೀಮಾ ಎಂದು ಗುರುತಿಸಲಾಗಿದೆ. ಚಿಕ್ಕಮಗಳೂರು ಸೈಬರ್, ಆರ್ಥಿಕ ಅಪರಾಧ ಹಾಗೂ ಮಾಧಕ ವಸ್ತು ಅಪರಾಧಗಳ ತಡೆ ಪೋಲಿಸರು ವಿಚಾರಣೆ ಮುಂದುವರೆಸದ್ದಾರೆ.


