ಮೈಸೂರು : ಆರ್ಥಿಕ ಮುಗ್ಗಟ್ಟಿನ ಕಾರಣಕ್ಕೆ ಒಂದೇ ಕುಟುಂಬದ ನಾಲ್ವರು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಮೈಸೂರಿನಲ್ಲಿ ನಡೆದಿದೆ.
ಮೈಸೂರಿನ ಅಪಾರ್ಟ್ಮೆಂಟ್ ವೊಂದರಲ್ಲಿ ವಾಸವಿದ್ದ ಹಾಸನ ಮೂಲ್ ಚೇತನ್ ಎಂನ ಉದ್ಯಮಿಯ ಕುಟುಂಬ ಆತ್ಮಹತ್ಯೆ ಮಾಡಿಕೊಂಡಿದೆ ಎಂದು ಗೊತ್ತಾಗಿದೆ. ಚೇತನ್, ಪತ್ನಿ, ಪುತ್ರ ಹಾಗೂ ತಮ್ಮ ತಾಯಿಗೆ ವಿಷವುಣಿಸಿ ತಾವೂ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಹೇಳಲಾಗುತ್ತಿದೆ.
ಸ್ಥಳಕ್ಕೆ ಆಗಮಿಸಿರುವ ಪೊಲೀಸರು ಮೃತದೇಹಗಳನ್ನು ಮರಣೋತ್ತರ ಪರೀಕ್ಷೆಗಾಗಿ ಕಳುಹಿಸಿದ್ದ, ಸ್ಥಳ ಪರಿಶೀಲನೆ ನಡೆಸುತ್ತಿದ್ದಾರೆ. ಈ ನಡುವೆ ಮನೆಯಲ್ಲಿ ಚೇತನ್ ಹಾಗೂ ಅವರ ಪತ್ನಿ ಬರೆದಿರುವ ಡೆತ್ ನೋಡ್ ಪತ್ತೆಯಾಗಿದೆ ಎಂಬ ಮಾಹಿತಿಯಿದೆ.
ಚೇತನ್ ಹಾಸನ ಜಿಲ್ಲೆಯ ಗೊರೂರು ಮೂಲದವರಾಗಿದ್ದು, ನೆನ್ನೆಯಷ್ಟೇ ಕುಟುಂಬದ ಜತೆಗೆ ತಮ್ಮೂರಿಗೆ ತೆರಳಿ ವಾಪಾಸಾಗಿದ್ದರು. ರಾತ್ರಿ ಕುವೆಂಪು ನಗರದಲ್ಲಿರುವ ಪತ್ನಿಯ ಪೋಷಕರ ಮನೆಯಲ್ಲಿ ಊಟ ಮಾಡಿ ಮನೆಗೆ ವಾಪಾಸಾಗಿದ್ದರು.
ಆದರೆ, ಅನಂತರ ಯಾವ ಕಾರಣಕ್ಕೆ ದಿಡೀರ್ ಆತ್ಮಹತ್ಯೆ ನಿರ್ಧಾರ ತೆಗೆದುಕೊಂಡರು ಎಂಬುದು ಗೊತ್ತಾಗಿಲ್ಲ. ಚೇತನ್ ಕುಟಂಬ ಎರಡು ಪ್ಲಾಟ್ ಗಳಲ್ಲಿ ವಾಸವಾಗಿತ್ತು. ತಾಯಿ ಒಂದು ಪ್ಲಾಟ್ ನಲ್ಲಿದ್ದರೆ, ಮತ್ತೊಂದು ಪ್ಲಾಟ್ ನಲ್ಲಿ ಪತ್ನಿ ಮತ್ತು ಮಗನ ಜತೆ ಚೇತನ್ ವಾಸವಾಗಿದ್ದರು.
ಚೇತನ್ ದುಬೈ ಗೆ ಕಾರ್ಮಿಕರನ್ನು ಕಳುಹಿಸಿಕೊಡುವ ಏಜೆನ್ಸಿ ನಡೆಸುತ್ತಿದ್ದರು ಎನ್ನಲಾಗಿದೆ. ಆತ್ಮಹತ್ಯೆಗೂ ಮೊದಲು ಅಮೇರಿಕದಲ್ಲಿರುವ ತಮ್ಮ ಸಹೋದರನ ಜತೆ ಚೇತನ್ ಮಾತನಾಡಿದ್ದು, ಆತ ಕುಟುಂಬಸ್ಥರಿಗೆ ಮನೆಯ ಬಳಿ ಹೋಗುವಂತೆ ಕರೆ ಮಾಡಿ ತಿಳಿಸಿದ್ದರು. ಕುಟುಂಬಸ್ಥರು ಮನೆ ಬಳಿ ಬಂದಾಗ ಆತ್ಮಹತ್ಯೆ ಮಾಡಿಕೊಂಡಿರುವುದು ಗೊತ್ತಾಗಿದೆ.
ಸ್ಥಳಕ್ಕೆ ಪೊಲೀಸ್ ವರಿಷ್ಠಾಧಿಕಾರಿ ಸೀಮಾ ಲಾಟ್ಕರ್ ಆಗಮಿಸಿದ್ದು, ಆತ್ಮಹತ್ಯೆ ಮಾಡಿಕೊಳ್ಳಲು ಆರ್ಥಿಕ ಸಂಕಷ್ಟ ಕಾರಣ ಎಂಬುದು ಮೇಲ್ನೋಟಕ್ಕೆ ಗೊತ್ತಾಗಿದೆ. ಡೆತ್ ನೋಟ್ ಕೂಡ ಸಿಕ್ಕಿದ್ದು, ಇದರಲ್ಲಿ ಯಾರ ಮೇಲೆಯೂ ಆರೋಪಗಳಿಲ್ಲ. ಆದರೂ, ಅವರಿಗೆ ಯಾರಿಂದಾದರೂ ಬೆದರಿಕೆ ಇತ್ತಾ? ಏನು ಎಂಬ ಕುರಿತು ಮಾಹಿತಿ ಕಲೆ ಹಾಕಲಾಗುತ್ತಿದೆ ಎಂದು ತಿಳಿಸಿದ್ದಾರೆ.