ಹೊಸಕೋಟೆ: ನಗರದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ 52 ಪ್ರತಿಭಾವಂತ ವಿದ್ಯಾರ್ಥಿನಿಯರಿಗೆ ಬೆಂಗಳೂರಿನ ಆಸರೆ ಟ್ರಸ್ಟ್ ₹2.60 ಲಕ್ಷ ಮೊತ್ತದ ವಿದ್ಯಾರ್ಥಿ ವೇತನ ವಿತರಿಸಿತು.
ವಿವಿಧ ವಿಷಯಗಳಲ್ಲಿ ಹೆಚ್ಚು ಅಂಕ ಗಳಿಸಿದ ಕಾಲೇಜಿನ 52 ವಿದ್ಯಾರ್ಥಿನಿಯರಿಗೆ ತಲಾ ₹5 ಸಾವಿರ ಚೆಕ್ ವಿತರಣೆ ಮಾಡಲಾಯಿತು. ಪ್ರಾಂಶುಪಾಲ ಪ್ರೊ.ರಾಮಲಿಂಗಪ್ಪ ಟಿ.ಬೇಗೂರು, ಆಸರೆ ಟ್ರಸ್ಟ್‌ನ ಆಶಾ ಅಗರವಾಲ್, ಅರ್ಚನಾ ಅಗರವಾಲ್, ಪ್ರಾಧ್ಯಾಪಕರಾದ ಕಾವಲ್ಲಯ್ಯ, ವಿಶ್ವೇಶ್ವರಯ್ಯ, ಶರಣಬಸಪ್ಪ ಭಾಗವಹಿಸಿದ್ದರು.
ಶ್ಯಾಮಸುಂದರ ಅಗರವಾಲ್ ಅವರು ಸ್ಥಾಪಿಸಿರುವ ಆಸರೆ ಟ್ರಸ್ಟ್ ಸುಮಾರು 15 ವರ್ಷದಿಂದ ಸರ್ಕಾರಿ ಶಾಲೆ, ಕಾಲೇಜುಗಳ ಪ್ರತಿಭಾವಂತ ಬಡ ವಿದ್ಯಾರ್ಥಿಗಳಿಗೆ ಶಿಷ್ಯವೇತನ ನೀಡುತ್ತಿದೆ.