ಭಾರತೀಯ ಅಂಚೆ ಇಲಾಖೆಯು ತನ್ನ ಪೇಮೆಂಟ್ ಬ್ಯಾಂಕ್ ನಲ್ಲಿ ಖಾಲಿ ಇರುವ 334 ಎಕ್ಸಿಕ್ಯೂಟಿವ್ ಹುದ್ದೆಗಳಿಗೆ ಅರ್ಜಿಯನ್ನು ಹೊರಡಿಸಿದೆ. ಆಸಕ್ತ ಅಭ್ಯರ್ಥಿಗಳು ಅರ್ಜಿಯನ್ನು ಸಲ್ಲಿಸಬಹುದಾಗಿದೆ. ಅರ್ಜಿಯನ್ನು ಸಲ್ಲಿಸಲು ಅಭ್ಯರ್ಥಿಗೆ ಇರಬೇಕಾದ ದಾಖಲೆಗಳು, ಅರ್ಹತೆಗಳು ,ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ ಮುಂತಾದ ಮಾಹಿತಿಯನ್ನು ಈ ಕೆಳಗಿನಂತೆ ತಿಳಿಯೋಣ ಬನ್ನಿ.
ನೀವು ಪದವಿಯನ್ನು ಪೂರ್ಣಗೊಳಿಸಿದ್ದೀರ !!ಆಗಿದ್ರೆ ನಿಮಗಿದು ಸುವರ್ಣ ಅವಕಾಶ. ದೇಶದ ವಿವಿಧ ಭಾಗಗಳಲ್ಲಿ ಉದ್ಯೋಗವನ್ನು ನೀಡಲಾಗುವುದು. ಅರ್ಜಿಯನ್ನು ಆನ್ಲೈನ್ ಮೂಲಕ ಸಲ್ಲಿಸಬೇಕಾಗುತ್ತದೆ. ಅರ್ಹತೆಗಳು ಮತ್ತು ಅರ್ಜಿ ಸಲ್ಲಿಕೆಯ ವಿಧಾನವನ್ನು ನೋಡೋಣ ಬನ್ನಿ.
ಕೆಲಸದ ಸ್ಥಳಗಳು :
ಕರ್ನಾಟಕ: 20
ಬಿಹಾರ : 20
ಆಂಧ್ರಪ್ರದೇಶ: 8
ಅರುಣಾಚಲ ಪ್ರದೇಶ : 5
ದಾದ್ರ ಮತ್ತು ನಾಗರಹಾವೇಲಿ: 1
ಅಂಡಮಾನ್ ನಿಕೋಬಾರ್ ದ್ವೀಪಗಳು: 1
ಗೋವಾ: 1
ಅಸ್ಸಾಂ : 16
ಹರಿಯಾಣ: 10
ಛಂಡೀಗಢ: 2
ಛತ್ತೀಸ್‌ಘಡ: 15
ಜಮ್ಮು ಕಾಶ್ಮೀರ: 4
ದೆಹಲಿ: 6
ಮಣಿಪುರ: 6
ಗುಜರಾತ್ : 29
ಲಡಾಖ್ : 01
ಹಿಮಾಚಲ ಪ್ರದೇಶ : 10
ಮಿಜೋರಾಂ : 3
ಜಾರ್ಖಂಡ್ : 14
ಕೇರಳ: 4
ಒಡಿಶಾ : 11
ಲಕ್ಷ್ಯದ್ವೀಪ: 1
ಮೇಘಾಲಯ: 4
ಪಂಜಾಬ್ : 10
ನಾಗಲ್ಯಾಂಡ್ : 3
ಪುದುಚೇರಿ : 1
ಪಶ್ಚಿಮ ಬಂಗಾಳ: 13
ರಾಜಸ್ಥಾನ : 17
ಸಿಕ್ಕಿಂ: 1
ತೆಲಂಗಾಣ: 15
ತ್ರಿಪುರ: 4
ಉತ್ತರ ಪ್ರದೇಶ: 36
ತಮಿಳುನಾಡು: 13
ವಿದ್ಯಾರ್ಹತೆ:
ಅಭ್ಯರ್ಥಿಗಳು ರಾಜ್ಯ ಸರ್ಕಾರದಿಂದ ಮಾನ್ಯತೆ ಪಡೆದ ವಿಶ್ವ ವಿದ್ಯಾನಿಲಯಗಳಿಂದ ಯಾವುದೇ ಪದವಿಯನ್ನು ತೆರ್ಗಡೆಯಾಗಿರಬೇಕು.
ವಯೋಮಿತಿ :
ಕನಿಷ್ಠ 21 ವರ್ಷ ಹಾಗೂ ಗರಿಷ್ಠ 35 ವರ್ಷದ ಒಳಗಿರಬೇಕು. ಒಬಿಸಿ ಗೆ 38 ವರ್ಷ ಮತ್ತು ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಕ್ಕೆ 40 ವರ್ಷ ವಯಸ್ಸಿನ ಸಡಿಲಿಕೆಯನು ನೀಡಿದೆ.
ಅರ್ಜಿಯ ಶುಲ್ಕ :
ಅರ್ಜಿಯ ಶುಲ್ಕ 100 ರೂ. ಆನ್ಲೈನ್ ಮೂಲಕ ಪಾವತಿಸಬಹುದು. ಹೆಚ್ಚಿನ ಮಾಹಿತಿಗಾಗಿ https://www.ippbonline.com/ ವೆಬ್ ಸೈಟ್ ಗೆ ಭೇಟಿ ನೀಡಿ.
ಮುಖ್ಯ ದಿನಾಂಕ:
ಆನ್ಲೈನ್ ಮೂಲಕ ಅರ್ಜಿಯನ್ನು ಸಲ್ಲಿಸಲು ಪ್ರಾರಂಭದ ದಿನಾಂಕ : 11-10-2024.
ಆನ್ಲೈನ್ ಮೂಲಕ ಅರ್ಜಿಯನ್ನು ಸಲ್ಲಿಸಲು ಕೊನೆಯ ದಿನಾಂಕ; 31 -10-2024. ರಾತ್ರಿ 11.59 ರ ವರೆಗೆ ಅವಕಾಶವಿದೆ.
ಅರ್ಜಿಯಲ್ಲಿರುವ ಮಾಹಿತಿಯನ್ನು ತಿದ್ದು ಪಡಿ ಮಾಡಲು ಕೊನೆಯ ದಿನಾಂಕ: 31-10-2024.
ಅರ್ಜಿಯನ್ನು ಪ್ರಿಂಟ್ ತೆಗೆದುಕೊಳ್ಳಲು ಕೊನೆಯ ದಿನಾಂಕ: 15-11-2014. ರಾತ್ರಿ 11.59 ವರೆಗೆ .
ಆಯ್ಕೆಯ ವಿಧಾನ :
ಪದವಿಯಲ್ಲಿ ಪಡೆದ ಅಂಕಗಳ ಮೇಲೆ ಮೆರಿಟ್ ಲಿಸ್ಟ್ ಅನ್ನು ತಯಾರಿಸಲಾಗುವುದು. ಬಳಿಕ ಸಂದರ್ಶನದ ಮೂಲಕ ನೇಮಕಾತಿ ಮಾಡಲಾಗುವುದು. ಅಭ್ಯರ್ಥಿಗಳನ್ನು ಗುತ್ತಿಗೆಯ ಆಧಾರದ ಮೇಲೆ ಆಯ್ಕೆ ಮಾಡಲಾಗುವುದು. ಆಯ್ಕೆಯಾದ ಅಭ್ಯರ್ಥಿಗಳಿಗೆ 30,000 ರೂ ವೇತನವನ್ನು ನೀಡಲಾಗುವುದು.
ಅರ್ಜಿಯನ್ನು ಸಲ್ಲಿಸುವ ವಿಧಾನ :
ಮೊದಲು https://ibpsonline.ibps.in/ippblsep24// ಕ್ಕೆ ಭೇಟಿ ನೀಡಿ. ತೆರೆದ ಪುಟದಲ್ಲಿ ‘Click Here for New Registration’ ಎಂದಿರುವಲ್ಲಿ ಕ್ಲಿಕ್ ಮಾಡಿ.
ಬಳಿಕ ತೆರೆಯುವ ಪುಟದಲ್ಲಿ ವೈಯಕ್ತಿಕ ಮಾಹಿತಿ ತುಂಬಿ ನೋಂದಣಿ ಮಾಡಿಕೊಳ್ಳಿ. ಮತ್ತೆ ಮೇಲಿನ ಲಿಂಕ್ ಕ್ಲಿಕ್ ಮಾಡಿ ಓಪನ್ ಆಗುವ ಪೇಜ್‌ನಲ್ಲಿ ರಿಜಿಸ್ಟರ್ ನಂಬರ್, ಪಾಸ್‌ವರ್ಡ್ ನೀಡಿ ಲಾಗಿನ್ ಆಗಿ.
ಕೇಳಲಾದ ಮಾಹಿತಿ ನೀಡಿ ಅರ್ಜಿ ಪೂರ್ಣಗೊಳಿಸಿ.