ಶಿವಮೊಗ್ಗ : ದಿವಗಂತ ಸ್ವತಂತ್ರ ಹೋರಾಟಗಾರರಾದ ಶ್ರೀನಿವಾಸರಾವ್ ರವರ ದರ್ಮಪತ್ನಿ ಪದ್ಮಾವತಿ (95) ಶುಕ್ರವಾರದಂದು ಶಿವಮೊಗ್ಗದ ತಮ್ಮ ಸ್ವ ಗೃಹದಲ್ಲಿ ವಯೋ ಸಹಜ ಕಾಯಿಲೆಗಳಿಂದ ದೈವಾಧೀನರಾಗಿದ್ದಾರೆ.
ಆದರೆ ಸಾವಿನ ನಂತರ ಅವರ ಕುಟುಂಬಸ್ಥರು ಅವರ ಎರಡು ಕಣ್ಣುಗಳನ್ನು ಶಿವಮೊಗ್ಗದ ಶಂಕರ ಕಣ್ಣಿನ ಆಸ್ಪತ್ರೆಗೆ ದಾನ ಮಾಡುವ ಮೂಲಕ ಸಾವಿನಲ್ಲೂ ಸಾರ್ಥಕತೆ ಮೆರೆದಿದ್ದಾರೆ. ಇವರ ಸಾವಿಗೆ ಇವರ ಪುತ್ರರಾದ ಶಿವಮೊಗ್ಗದ ಹತ್ವಾರ್ ಮೆಡಿಕಲ್ ಏಜೆನ್ಸಿಯ ಮಾಲೀಕರಾದ ಕೆ.ಎಸ್. ಸದಾನಂದ ಹತ್ವಾರ್ ಹಾಗೂ ಅವರ ಕುಟುಂಬಸ್ಥರು ಕಂಬನಿ ಮಿಡಿದಿದ್ದಾರೆ.

