ಬೆಂಗಳೂರು: ಸಾರಿಗೆ ಇಲಾಖೆಯ ವಾಹನಗಳ Anomalies/ Duplicate Data ಗಳನ್ನು ಸರಿಪಡಿಸುವ ಸಂಬಂಧ ಅಧಿಕಾರ ವಿಕೇಂದ್ರೀಕರಣ ವ್ಯವಸ್ಥೆಯನ್ನು ಜಾರಿ ಮಾಡಿ ಆದೇಶ ಹೊರಡಿಸಲಾಗಿದೆ.
ರಾಜ್ಯದ ಯಾವುದೇ ಸ್ಥಳದಲ್ಲಿ ವಾಹನಗಳ Data Anomalies ಗಳನ್ನು ಸರಿಪಡಿಸುವ ಅಥವಾ Duplicate Data ಸರಿಪಡಿಸಲು ಬೆಂಗಳೂರಿನ ಕೇಂದ್ರ ಕಛೇರಿಗೆ ಬಂದು ಸರಿ ಮಾಡಿಸಬೇಕಾಗಿತ್ತು. ಈ ಬಗ್ಗೆ ಸಾರ್ವಜನಿಕರಿಂದ ದೂರುಗಳು ಬರುತ್ತಿದ್ದು, ಈ ಸಮಸ್ಯೆಯನ್ನು ಗಂಭೀರವಾಗಿ ಪರಿಗಣಿಸಿದ ಸಾರಿಗೆ ಹಾಗೂ ಮುಜರಾಯಿ ಸಚಿವ ರಾಮಲಿಂಗಾ ರೆಡ್ಡಿ ಅವರು, ತುರ್ತು ಕ್ರಮ ತೆಗೆದುಕೊಳ್ಳಲು ಸೂಚನೆ ನೀಡಿದ್ದರು.
ಸಾರಿಗೆ ಸಚಿವರ ಸೂಚನೆಯಂತೆ, ಕೇಂದ್ರ ಸರ್ಕಾರಕ್ಕೆ ಪತ್ರ ಬರೆದು, ಅನುಮತಿ ಪಡೆದು, ಸಾರ್ವಜನಿಕರಿಗೆ ಆಗುತ್ತಿರುವ ತೊಂದರೆ, ವಿನಾಕಾರಣ ವಿಳಂಬ ತಪ್ಪಿಸಲು ಅಧಿಕಾರ ವಿಕೇಂದ್ರೀಕರಣ ಮಾಡಲಾಯಿತು. RTO ಕಚೇರಿ ಕೆಲಸಗಳು ಸಾರ್ವಜನಿಕರಿಗೆ ಇನ್ನು ಹತ್ತಿರವಾಗಿಸುವ ನಿಟ್ಟಿನಲ್ಲಿ ರಾಜ್ಯಾದ್ಯಂತ ಇರುವ 6 ವಿಭಾಗೀಯ ಕಛೇರಿಗಳಿಗೆ ( 6 Joint Commissioners Transport ) ದಾಖಲೆಗಳನ್ನು ಪರಿಶೀಲಿಸಿ ಇತ್ಯರ್ಥಗೊಳಿಸಲು ಅಧಿಕಾರ ನೀಡಲಾಗಿದೆ.
ರಾಜ್ಯದ ಅಧೀನ 67 ಉಪಸಾರಿಗೆ ಆಯುಕ್ತರು ಹಾಗೂ ಹಿರಿಯ / ಪ್ರಾದೇಶಿಕ / ಸಹಾಯಕ ಪ್ರಾದೇಶಿಕ ಸಾರಿಗೆ ಕಚೇರಿ ಗಳಿಂದ ದಿನಂಪ್ರತಿ ವಾಹನಗಳ Data Anomalies ಗಳನ್ನು ಸರಿಪಡಿಸುವ ಸಂಬಂಧ State Admin Application for Approval / Ticket ಗಳು ವಾಹನ್-4 ತಂತ್ರಾಂಶದ ಮೂಲಕ ಸ್ವೀಕೃತವಾಗುತ್ತಿವೆ.
ಪ್ರಾದೇಶಿಕ ಸಾರಿಗೆ ಕಛೇರಿಗಳಲ್ಲಿ ವಾಹನ್-1 ತಂತ್ರಾಂಶದಲ್ಲಿ ನೋಂದಣಿಯಾದ ವಾಹನಗಳನ್ನು ಇತರರು ಖರೀದಿ ಮಾಡಿದ ಸಂದರ್ಭದಲ್ಲಿ ಮೂಲ ಕಛೇರಿಯಿಂದ ಇತರೆ ಕಚೇರಿಗಳಿಗೆ ತೀರುವಳಿ ಮುಖೇನ ಹೋದ ಕಾರಣ ಎರಡು ವಾಹನಗಳ ಮಾಹಿತಿಯು ಮೂಲ ಕಛೇರಿಯಲ್ಲಿ ತೀರುವಳಿ ನೀಡಲಾಗಿದೆಯೆಂದು ಮತ್ತು ಮತ್ತೊಂದು ಕಛೇರಿಯಲ್ಲಿ ಸಕ್ರಿಯೆವಾಗಿರುತ್ತದೆ ಎಂದು ವಾಹನ್ ತಂತ್ರಾಂಶದಲ್ಲಿ Duplicate Data ಗಳು ತೋರಿಸುತ್ತಿರುತ್ತವೆ.
ಮಾಲೀಕರಿಗೆ ವಾಹನಕ್ಕೆ ಸಂಬಂಧಿಸಿದ ಮುಂದಿನ ವಹಿವಾಟುಗಳನ್ನು ನಡೆಸಲು ವಾಹನ್-4 ತಂತ್ರಾಂಶವು ಅನುವು ಮಾಡಿಕೊಡುವುದಿಲ್ಲ.
ಆದಕಾರಣ, ರಾಜ್ಯದ ಅಧೀನ 67 ಉಪಸಾರಿಗೆ ಆಯುಕ್ತರು ಹಾಗೂ ಹಿರಿಯ / ಪ್ರಾದೇಶಿಕ / ಸಹಾಯಕ ಪ್ರಾದೇಶಿಕ ಸಾರಿಗೆ ಕಚೇರಿಗಳಿಗೆ ಸಂಬಂಧಪಟ್ಟ ಜಂಟಿ ಸಾರಿಗೆ ಆಯುಕ್ತರುಗಳಿಗೆ ರಾಜ್ಯದೊಳಗಿರುವ (withinstate) Duplicate Vehicle Records ಗಳನ್ನು ಪರಿಶೀಲಿಸಿ ಸಂಬಂಧಿಸಿದ ದಾಖಲಾತಿಗಳನ್ನು ಆಯಾಯ ವಿಭಾಗದ ಜಂಟಿ ಸಾರಿಗೆ ಆಯುಕ್ತರ ಕಚೇರಿಗಳಲ್ಲಿಯೇ ಪರಿಶೀಲಿಸಿ ಇತ್ಯರ್ಥಗೊಳಿಸಲು ಅಧಿಕಾರ ಪ್ರತ್ಯಾಯೋಜಿಸಲಾಗಿದೆ.

