ಸುದ್ದಿ

ಎರಡು ತಿಂಗಳ ಅತಿಥಿ ಉಪನ್ಯಾಸಕರ ವೇತನ ತಡೆ: ಅನುದಾನ ಬಿಡುಗಡೆ ಮಾಡಿದ ಕಾಲೇಜು ಶಿಕ್ಷಣ ಇಲಾಖೆ !

Share It

ಬೆಂಗಳೂರು: ಸರಕಾರಿ ಕಾಲೇಜುಗಳ ಅತಿಥಿ ಉಪನ್ಯಾಸ ಕರಿಗೆ ನೀಡುವ ವೇತನ ಬಿಡುಗಡೆಗೆ ಕೊರತೆಯಾಗಿದ್ದ ಅನುದಾನವನ್ನು ಸರಕಾರ ಬಿಡುಗಡೆ ಮಾಡಿ ಆದೇಶ ಮಾಡಿದೆ.

ನವೆಂಬರ್ ಮತ್ತು ಡಿಸೆಂಬರ್ ತಿಂಗಳ ವೇತನ ನೀಡಲು ಅನುದಾನದ ಕೊರತೆಯಿದೆ ಎಂದು ಪ್ರಾಂಶುಪಾಲರು ಸರಕಾರಕ್ಕೆ ಪತ್ರ ಬರೆದಿದ್ದರುಮ ಈ ಹಿನ್ನೆಲೆಯಲ್ಲಿ ಅಗತ್ಯವಿರುವ 2.33 ಕೋಟಿ ರು. ಅನುದಾಮ ಬಿಡುಗಡೆಗೊಳಿಸಿ ಸರಕಾರ ಆದೇಶಿಸಿದೆ.

ಕಾಲೇಜು ಶಿಕ್ಷಣೆ ಇಲಾಖೆ ಈ ಕುರಿತು ಸುತ್ತೋಲೆ ಹೊರಡಿಸಿ, ಮನವಿಯ ಮೇರೆಗೆ ಅನುದಾನ ಬಿಡುಗಡೆಯಾಗಿದ್ದು, ಅವಶ್ಯವಿರುವ ವೇತನ ಪಾವತಿಗೆ ಬಳಕೆ ಮಾಡಿಕೊಳ್ಳುವಂತೆ ಪ್ರಾಂಶುಪಾಲರುಗಳಿಗೆ ಸೂಚನೆ ನೀಡಿದೆ.

237 ಕಾಲೇಜುಗಳಲ್ಲಿ ವೇತನ ಪಾವತಿಗೆ ಅನುದಾನ ಕೊರತೆಯಾಗಿರುವ ಕುರಿತು ಮನವಿ ಬಂದಿತ್ತು. ಈ ಹಿನ್ನೆಲೆಯಲ್ಲಿ ಇಲಾಖೆ 2.33 ಕೋಟಿ ಅನುದಾನ ಬಿಡುಗಡೆ ಮಾಡಿದೆ.


Share It

You cannot copy content of this page