KSRTC ಯಿಂದ ಶಬರಿಮಲೆ ಯಾತ್ರಾರ್ಥಿಗಳಿಗೆ ಗುಡ್ ನ್ಯೂಸ್ : ನಿತ್ಯ ಐರಾವತ ಬಸ್ ಗಳ ವ್ಯವಸ್ಥೆ

KSRTC-luxury-buses
Share It


ಬೆಂಗಳೂರು: ಶಬರಿಮಲೆ ಯಾತ್ರಾರ್ಥಿಗಳ ಅನುಕೂಲಕ್ಕಾಗಿ, ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ (KSRTC) 29 ನವೆಂಬರ್ 2024 ರಿಂದ ಬೆಂಗಳೂರು ಮತ್ತು ಕೇರಳದ ಪಂಬೆ ನಡುವೆ ಐರಾವತ್ ವೋಲ್ವೋ ಸಂಚಾರ ನಡೆಸುತ್ತಿದೆ.

ಬೆಂಗಳೂರಿನಿಂದ ಐರಾವತ ವೋಲ್ವೋ ಸೇವೆಯು ಶಾಂತಿನಗರ ಬಸ್ ನಿಲ್ದಾಣ ಮತ್ತು ಮೈಸೂರು ರಸ್ತೆ ಸ್ಯಾಟಲೈಟ್ ಬಸ್ ನಿಲ್ದಾಣದಿಂದ 1:50 ಮತ್ತು ಮೈಸೂರು ರಸ್ತೆ ಸ್ಯಾಟಲೈಟ್ ಬಸ್ ನಿಲ್ದಾಣದಿಂದ 2:20 ಕ್ಕೆ ಹೊರಟು ಮರುದಿನ ಬೆಳಿಗ್ಗೆ 6:45 ಕ್ಕೆ ನಿಲಕ್ಕಲ್ ಬಸ್ ನಿಲ್ದಾಣವನ್ನು ತಲುಪುತ್ತದೆ.

ಈ ಸೇವೆಗಾಗಿ ಪ್ರಯಾಣಿಕರು ಮೈಸೂರಿನಿಂದ ಟಿಕೆಟ್ ಕಾಯ್ದಿರಿಸಬಹುದು, ಮೈಸೂರಿನಿಂದ ಐರಾವತ್ ವೋಲ್ವೋ ಬಸ್ ಸಂಜೆ 5: 10ಕ್ಕೆ ಹೊರಡಲಿದೆ. ನಿಲಕ್ಕಲ್‌ನಿಂದ (ಪಂಪಾ ಶಬರಿಮಲೆ) ಐರಾವತ್ ವೋಲ್ವೋ ಸೇವೆಯು ಪ್ರತಿದಿನ ಸಂಜೆ 6:00 ಗಂಟೆಗೆ ಹೊರಡುತ್ತದೆ ಮತ್ತು ಮರುದಿನ 10:00 ಗಂಟೆಗೆ ಬೆಂಗಳೂರನ್ನು ತಲುಪುತ್ತದೆ.

ನೆರೆಯ ರಾಜ್ಯಗಳಲ್ಲಿನ ಖಾಸಗಿ ಬುಕಿಂಗ್ ಕೌಂಟರ್‌ಗಳಲ್ಲದೆ, ಬೆಂಗಳೂರು ಮತ್ತು ಕರ್ನಾಟಕದ ವಿವಿಧ ಬುಕಿಂಗ್ ಕೌಂಟರ್‌ಗಳಲ್ಲಿ ಟಿಕೆಟ್‌ಗಳನ್ನು ಬುಕ್ ಮಾಡಬಹುದು. ಜತೆಗೆ ಸಂಸ್ಥೆಯ ವೆಬ್‌ಸೈಟ್:-https://www.ksrtc.in/ ಬುಕ್ಕಿಂಗ್ ಮಾಡಿಕೊಳ್ಳಬಹುದು.


Share It

You cannot copy content of this page