ಮೈಸೂರು ಅರಮನೆ ಮೈದಾನದ ಬಳಿ ಸಿಲಿಂಡರ್ ಸ್ಫೋಟ: ಪ್ರಕರಣ ಸಂಬಂಧ ಎಫ್ ಐಆರ್ ದಾಖಲಿಸಿದ ಪೊಲೀಸರು
ಬೆಂಗಳೂರು: ಮೈಸೂರು ಅರಮನೆ ಸಮೀಪದಲ್ಲೇ ಹೀಲಿಯಂ ಸಿಲೀಂಡರ್ ಸ್ಟೋಟಗೊಂಡಿದ್ದು, ಒಬ್ಬ ವ್ಯಕ್ತಿ ಮೃತಪಟ್ಟಿದ್ದು, ನಾಲ್ವರು ಗಾಯಗೊಂಡಿದ್ದು ಪೊಲೀಸರು ಎಫ್ ಐಆರ್ ದಾಖಲಿಸಿದ್ದಾರೆ.
ಗುರುವಾರ ಅರಮನೆ ಮೈದಾನದಲ್ಲಿ ರಜಾ ದಿನವಾದ್ದರಿಂದ ಹೆಚ್ಚಿನ ಜನರಿದ್ದರು. ಈ ವೇಳೆ ಬಲೂನ್ ಮಾರಾಟ ಮಾಡುವ ವ್ಯಕ್ತಿಯ ಬಳಿಯಿದ್ದ ಗಾಳಿ ತುಂಬುವ ಹೀಲಿಯಂ ಸಿಲಿಂಡರ್ ಸ್ಫೋಟಗೊಂಡಿತ್ತು. ಈ ವೇಳೆ ಬಲೂನ್ ಮಾರಾಟಗಾರ ಸಲೀಂ ಮೃತಪಟ್ಟಿದ್ದ.
ಸಲೀಂ ಉತ್ತರಪ್ರದೇಶ ಮೂಲದ ವ್ಯಕ್ತಿಯಾಗಿದ್ದು, ಕಳೆದ ಒಂದು ವಾರದಿಂದ ಮೈಸೂರಿನಲ್ಲಿ ಬಲೂನ್ ಮಾರಾಟ ಮಾಡಿಕೊಂಡಿದ್ದ ಎನ್ನಲಾಗಿದೆ. ಘಟನೆಯಲ್ಲಿ ಆತ ಮೃತಪಟ್ಟಿದ್ದು, ನಾಲ್ವರಿಗೆ ಗಾಯಗಳಾಗಿವೆ. ಹೀಗಾಗಿ, ಪ್ರಕರಣ ಸಂಬಂಧ ಪೊಲೀಸರು ಎಫ್ ಐಆರ್ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.
ಸಿಲಿಂಡರ್ ಅನ್ನು ಬಲೂನ್ ಗೆ ಗಾಳಿ ತುಂಬುವಾಗ ಬಳಕೆ ಮಾಡುತ್ತಿದ್ದು, ಪದೇಪದೆ ಆನ್ ಮತ್ತು ಆಫ್ ಮಾಡಿದಾಗ ಒತ್ತಡ ಹೆಚ್ಚಾಗಿದೆ. ವೇಗವಾಗಿ ಆನ್ ಮಾಡುತ್ತಿದ್ದಂತೆ ಒತ್ತಡ ಹೆಚ್ಚಾಗಿ ಸ್ಫೋಟಗೊಂಡಿದೆ ಎಂದು ಮೇಲ್ನೋಟಕ್ಕೆ ಗೊತ್ತಾಗಿದೆ. ಆದರೆ, ಮೃತಪಟ್ಟ ವ್ಯಕ್ತಿಯ ಮೂಲದ ಬಗ್ಗೆ ಮಾಹಿತಿ ಸಂಗ್ರಹಿಸುವುದರ ಸಂಬಂಧ ಪೊಲೀಸರ ತನಿಖೆ ಮುಂದುವರಿದಿದೆ.


