ರಾಜಕೀಯ ಸುದ್ದಿ

56 ಕೈ ಶಾಸಕರಿಂದ ವಿದೇಶ ಯಾತ್ರೆಗೆ ಅನುಮತಿ ಕೋರಿ ಪತ್ರ: ಇವರೆಲ್ಲರೂ ಕನಕೋತ್ಸವದಲ್ಲಿ ಭಾಗವಹಿಸಿದ್ದ ಶಾಸಕರು !

Share It

ಬೆಂಗಳೂರು: ಇತ್ತೀಚೆಗೆ ‌ಕರ್ನಾಟಕದ ಡಿಸಿಎಂ ಡಿ.ಕೆ ಶಿವಕುಮಾರ್ ಅವರು ಆಯೋಜಿಸಿದ್ದ ತಮ್ಮ ಕನಕಪುರದ ‌ಕನಕೋತ್ಸವದಲ್ಲಿ ಭಾಗವಹಿಸಿದ್ದ ಎಲ್ಲಾ 56 ಕಾಂಗ್ರೆಸ್ ಶಾಸಕರು ಇದೀಗ ವಿದೇಶ ಪ್ರವಾಸಕ್ಕೆ ಹೊರಡಲು ವಿಧಾನಸಭೆಯ ಸ್ಪೀಕರ್ ಯು.ಟಿ ಖಾದರ್ ಅವರ ಅನುಮತಿ ಕೋರಿದ್ದಾರೆ.

ಒಂದು ವೇಳೆ 56 ಕಾಂಗ್ರೆಸ್ ಶಾಸಕರ ವಿದೇಶ ಪ್ರವಾಸಕ್ಕೆ ಸ್ಪೀಕರ್ ಅನುಮತಿ ಕೊಟ್ಟರೆ ಆಗ ಸಿಎಂ ಸಿದ್ದರಾಮಯ್ಯ ‌ಅವರು ಮಾರ್ಚ್ ಮೊದಲ ವಾರದಲ್ಲಿ ಬಜೆಟ್ ಮಂಡಿಸಲು ಕಾಂಗ್ರೆಸ್ ಶಾಸಕರೆಲ್ಲರೂ ಸದನದಲ್ಲಿ ಕಡ್ಡಾಯವಾಗಿ ಹಾಜರಿರಲೇಬೇಕಾಗುತ್ತದೆ.

56 ಕಾಂಗ್ರೆಸ್ ಶಾಸಕರು ವಿದೇಶ ಪ್ರವಾಸ ಕೈಗೊಂಡರೆ ಆಗ ಆಪರೇಷನ್ ಕಮಲದಿಂದ ಡಿ.ಕೆ ಶಿವಕುಮಾರ್ ಸಿಎಂ ಆಗುವ ಬೆದರಿಕೆ ಒಡ್ಡಿ ಕಾಂಗ್ರೆಸ್ ಹೈಕಮಾಂಡ್ ಮೂಲಕ ಸಿಎಂ ಆಗಲು ಪ್ರಯತ್ನಿಸುವ ಸಾಧ್ಯತೆ ಇದೆ.


Share It

You cannot copy content of this page