ಪ್ರೀತಿ ನಿರಾಕರಿಸಿದ ನರ್ಸ್ ಮೇಲೆ ಮಾರಣಾಂತಿಕ ಹಲ್ಲೆ : ಘಟನೆಯಿಂದ ತೀವ್ರ ನೊಂದು ತಂದೆ ಸಾವು

police-karnataka1-13-1473744162
Share It

ಬೆಳಗಾವಿ: ಪ್ರೀತಿ ನಿರಾಕರಿಸಿದ ನರ್ಸ್ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿರುವ ಘಟನೆ ಬೆಳಗಾವಿಯಲ್ಲಿ ಬೆಳಕಿಗೆ ಬಂದಿದೆ.
ಅಕ್ಟೋಬರ್ 30 ರಂದೇ ಘಟನೆ ನಡೆದಿದೆ. ಆದರೆ, ಇದೀಗ ಖಡೇ ಬಜಾರ ಪೊಲೀಸರು ಆರೋಪಿಯನ್ನು ಬಂಧಿಸಿ ಪ್ರಕರಣ ದಾಖಲು ಮಾಡಿಕೊಂಡಿದ್ದಾರೆ. ಪ್ರಕಾಶ ಜಾಧವ ಎಂಬಾತ ನರ್ಸ್ ಬಳಿ ಪ್ರೇಮ ನಿವೇದನೆ ಮಾಡಿಕೊಂಡಿದ್ದ. ಆದರೆ, ಆಕೆ ನಿರಾಕರಿಸಿದ್ದಳು. ಇದರಿಂದ ಆತ ನಿರಾಶೆಗೊಂಡು ಆಕೆ ಕೆಲಸ ಮಾಡುತ್ತಿದ್ದ ಆಸ್ಪತ್ರೆಯಲ್ಲಿ ನರ್ಸ್ ಮೇಲೆ ಹಲ್ಲೆ ಮಾಡಿರುವ ದೃಶ್ಯ ಸಿಸಿಟಿವಿಯಲ್ಲಿ ದಾಖಲಾಗಿದೆ.

ನರ್ಸ್ ತಂದೆ ಸಾವು : ಈ ಘಟನೆಯಿಂದ ನರ್ಸ್ ತಂದೆ ತೀವ್ರ ನೊಂದು ಮೃತಪಟ್ಟಿರುವ ಸಂಗತಿ ಇದೀಗ ಬೆಳಕಿಗೆ ಬಂದಿದೆ. ಮಗಳ ಮೇಲಿನ ದಾಳಿಯಿಂದ ತೀವ್ರ ನೊಂದುಕೊಂಡ ತಂದೆ ಸಾವು ಕಂಡಿದ್ದಾರೆ. ಮಗಳ ಸ್ಥಿತಿ ಹೀಗಾಯ್ತಲ್ಲ ಎಂದು ನೊಂದ ಅವರು, ಘಟನೆ ನಡೆದು 15 ದಿನಗಳ ಬಳಿಕ ಮೃತಪಟ್ಟಿದ್ದಾರೆ.

ಆರೋಪಿಯಿಂದ ಮಗಳಿಗೆ ಜೀವ ಬೆದರಿಕೆ ಇರುವ ಬಗ್ಗೆ ಆತಂಕ ಕೊಳಗಾಗಿದ್ದರು. ಇನ್ನು ಮುಂದೆ ಜೈಲಿನಿಂದ ಹೊರಬಂದ ನಂತರ ದಾಳಿಕೋರ ನಮ್ಮ ಮಗಳ ಮೇಲೆ ಏನಾದರೂ ಮಾಡಬಹುದು ಎಂಬ ಆತಂಕ ಅವರನ್ನು ಕಾಡಿದೆ.

ಇದೇ ನೋವಿನಿಂದ ಅವರು ಮೃತಪಟ್ಟಿರುವುದಾಗಿ ಕುಟುಂಬಸ್ಥರು ಆರೋಪ ಮಾಡಿದ್ದಾರೆ. ತಾಯಿ ಹಾಗೂ ಇಬ್ಬರು ಹೆಣ್ಣು ಮಕ್ಕಳು ತಂದೆಯನ್ನು ಕಳೆದುಕೊಂಡು ಕಂಗಾಲಾಗುವಂತಾಗಿದೆ. ಮನೆಯಲ್ಲಿ ತಾಯಿ ಜೊತೆಗೆ ಆ ಇಬ್ಬರು ಹೆಣ್ಣು ಮಕ್ಕಳು ವಾಸ ಮಾಡುತ್ತಿದ್ದು ಪ್ರಕರಣದ ಬಗ್ಗೆ ಏನೂ ಹೇಳುವುದಿಲ್ಲ ಎಂದು ಸಂತ್ರಸ್ತ ನರ್ಸ್ ಪ್ರತಿಕ್ರಿಯೆ ನೀಡಿದ್ದಾರೆ.


Share It

You cannot copy content of this page