ಕ್ರೀಡೆ ಸುದ್ದಿ

ಮೊಹಮ್ಮದ್ ಶಮಿಗೆ ಮತ್ತೆ ಗಾಯ: ಚಾಂಪಿಯನ್ಸ್ ಟ್ರೋಫಿಗೆ ಅಲಭ್ಯ?

Share It

ಭಾರತವು ಇಂಗ್ಲೆಂಡ್ ವಿರುದ್ಧದ ಮೊದಲ ಟಿ20 ಪಂದ್ಯದಲ್ಲಿ ಭರ್ಜರಿ ಗೆಲುವನ್ನು ಸಾಧಿಸಿದೆ. ಆದರೆ ನಿರೀಕ್ಷೆಯಂತೆ ಮೊದಲ ಪಂದ್ಯದಲ್ಲಿ ಶಮಿ ಆಡದಿರುವುದು ಅನೇಕರಲ್ಲಿ ಪ್ರಶ್ನೆ ಮೂಡಿಸಿದೆ. ಮೊಹಮ್ಮದ್ ಶಮಿ ಆಡದಿರಲು ಕಾರಣವೇನು ಎಂಬುದನ್ನ ನೋಡೋಣ ಬನ್ನಿ.

ಬರೋಬ್ಬರಿ 2 ವರ್ಷದ ಬಳಿಕ ಟೀಂ ಇಂಡಿಯಾಗೆ ಬಂದಿರುವ ಶಮಿ ಯೋಜನೆಯಂತೆ ಪಂದ್ಯದಲ್ಲಿ ಆಡಬೇಕಿತ್ತು. ಪಂದ್ಯದಿಂದ ಹೊರಗುಳಿಯಲು ಕಾರಣವೇನು ಎಂಬುದನ್ನು ತಂಡದ ಯುವ ಆಟಗಾರ ಹಾಗೂ ಓಪನರ್ ಅಭಿಷೇಕ್ ಶರ್ಮಾ ತಿಳಿಸಿದ್ದಾರೆ.

ಪಂದ್ಯ ಮುಗಿದ ನಂತರ ಅಭಿಷೇಕ್ ಶರ್ಮಾ ಮಾತನಾಡಿ ಶಮಿ ತಂಡದಲ್ಲಿ ಸ್ಥಾನವನ್ನು ಕೊಂಡಿದ್ದರು. ಕೊನೆಯ ಕ್ಷಣದಲ್ಲಿ ಗಾಯದ ಕಾರಣದಿಂದ ಆಡಲಿಲ್ಲ. ಈ ಹಿಂದೆ ನಿರ್ಧಾರ ಮಾಡಿದಂತೆ ಇಬ್ಬರು ಸ್ಪಿನ್ನರ್ ಹಾಗೂ ಮೂವರು ವೇಗಿಗಳೊಂದಿಗೆ ಟೀಂ ಹೋಗಬೇಕಿತ್ತು. ಈ ಕಾರಣದಿಂದ ಶಮಿ ಪಂದ್ಯದಲ್ಲಿ ಆಡಲಿಲ್ಲ. ಮುಂದಿನ ಪಂದ್ಯದಲ್ಲಿ ಆಡುವ ಸಾಧ್ಯತೆ ಇದೇ ಎಂದು ಹೇಳಿದ್ದಾರೆ.

ಸದ್ಯ ಶಮಿ 2025 ರ ಚಾಂಪಿಯನ್ಸ್ ಟ್ರೋಫಿ ಗೆ ಆಯ್ಕೆಯಾಗಿದ್ದು ನಿರೀಕ್ಷೆಯನ್ನು ಹೆಚ್ಚಿಸಿದ್ದಾರೆ. ಆದರೆ ಈಗ ಮತ್ತೆ ಗಾಯ ಎಂದು ಹೊರಗೆ ಉಳಿದಿದ್ದಾರೆ. ಇನ್ನು ಚಾಂಪಿಯನ್ಸ್ ಟ್ರೋಫಿ ಗೆ ಒಂದಷ್ಟು ದಿನಗಳು ಬಾಕಿ ಇದೆ. ಸದ್ಯ ಟೀಂ ಇಂಡಿಯಾದ ಸ್ಟಾರ್ ಆಟಗಾರ ಬುಮ್ರಾ ಸಹ ಗಾಯದಿಂದ ಹೊರಗೆ ಉಳಿದಿದ್ದು, ಭಾರತದ ಬೌಲಿಂಗ್ ಕುಸಿದಿದೆ. ಒಂದು ವೇಳೆ ಶಮಿ ಕೂಡ ಫಿಟ್ ಆಗದಿದ್ದರೆ ತಂಡದ ಬೌಲಿಂಗ್ ಕಳಪೆಯಾಗಲಿದೆ.

ಸದ್ಯ ಭಾರತ ತಂಡ ಮೊದಲ ಟಿ 20 ಪಂದ್ಯವನ್ನು ಆರಾಮವಾಗಿ ಗೆದ್ದು ಬೀಗಿದೆ. ಉಳಿದ 4 ಪಂದ್ಯಗಳಲ್ಲಿ ಏನಾಗಲಿದೆ ಎಂದು ನೋಡಬೇಕಿದೆ.


Share It

You cannot copy content of this page