ಕಾಲೆಳೆಯುವ ಕಾರಣವಾಯ್ತು ಸಚಿವ ತಂಗಡಗಿ ಪರದಾಡಿ ಬರೆದ ‘ಶುಭವಾಗಲಿ’ ಶಬ್ದ

Share It

ಬೆಂಗಳೂರು: ಕನ್ನಡ ಮತ್ತು ಸಂಸ್ಕ್ರತಿ ಇಲಾಖೆಯ ಸಚಿವರೇ ಕನ್ನಡ ಬರೆಯಲು ಪರದಾಟ ನಡೆಸಿದ ವಿಡಿಯೋ ಇದೀಗ ವೈರಲ್ ಆಗಿದ್ದು ನೆಟ್ಟಿಗರ ಕೆಟ್ಟಕಣ್ಣಿಗೆ ಗುರಿಯಾಗಿದೆ.

ಶಾಲಾ ಕಾರ್ಯಕ್ರಮವೊಂದರಲ್ಲಿ ಭಾಗವಹಿಸಿದ್ದ ಸಚಿವ ತಂಗಡಗಿ ಕಾರ್ಯಕ್ರಮಕ್ಕೆ ಶುಭವಾಗಲಿ ಎಂದು ಬರೆಯಲು ಮುಂದಾದರು. ಆದರೆ, ಶ ಬರೆದು ಬ ಅಲ್ಪಪ್ರಾಣವನ್ನೇ ಬರೆಯುತ್ತಾ ಮುಂದಿನ ಅಕ್ಷರಗಳ ಕಡೆಗೆ ತೆರಳಿದರು. ನಂತರ ಅದನ್ನು ಗಮನಿಸಿ ಶ ಸರಿಪಡಿಸಿ ಶು ಎಂದು ಬರೆದು ‘ವಾಗಲಿ’ ಪೂರ್ಣಗೊಳಿಸಿದರು.

ಆದರೆ, ಭ ಮಹಾಪ್ರಾಣ ಬಳಸದೆ ಬ ಎಂಬ ಅಕ್ಷರವನ್ನೇ ಬರೆದು ಶುಬವಾಗಲಿ ಎಂದು ಬರೆದು ಮುಗಿಸಿದರು. ನಂತರ ಜತೆಯಲ್ಲಿದ್ದವರು ಭ ಮಹಾಪ್ರಾಣ ವಾಗಬೇಕು ಎಂದು ಹೇಳಿದ ನಂತರ ಮತ್ತೇ ಸರಿಪಡಿಸಲು ಪರದಾಡಿದರು. ಇದೀಗ ಈ ಎಲ್ಲ ಪ್ರಕ್ರಿಯೆಯ ವಿಡಿಯೋ ವೈರಲ್ ಆಗಿದೆ.

ನೆಟ್ಟಿಗರು ತಂಗಡಗಿ ಅವರಿಗೆ ಕನ್ನಡ ಬರೆಯಲು ಬರುವುದಿಲ್ಲ. ಕನ್ನಡ ಮತ್ತು ಸಂಸ್ಕತಿ ಇಲಾಖೆ ಸಚಿವರೇ ಹೀಗಾದರೆ ಹೇಗೆ ಎಂದು ಪ್ರಶ್ನೆ ಮಾಡಿದ್ದಾರೆ. ಈ ಹಿಂದೆ ಪ್ರಾಥಮಿಕ ಶಿಕ್ಷಣ ಸಚಿವರ ಕನ್ನಡ ಭಾಷರಯ ಬಗ್ಗೆಯೂ ಇಂತಹದ್ದೇ ಟೀಕೆಗಳು ಕೇಳಿಬಂದಿದ್ದವು. ಇದೀಗ ಶಿವರಾಜ್ ತಂಗಡಗಿ ಟ್ರೋಲ್ ಆಗುತ್ತಿದ್ದಾರೆ.


Share It

You May Have Missed

You cannot copy content of this page