ಬೆಂಗಳೂರು: ಕೇರಳದ ವಯನಾಡ್ ಗುಡ್ಡ ಕುಸಿತ ಪ್ರಕರಣದಲ್ಲಿ ರಾಜ್ಯದ ನಾಲ್ವರು ಮರಣಹೊಂದಿದ್ದು, 9 ಜನರು ನಾಪತ್ತೆಯಾಗಿದ್ದಾರೆ ಎಂಬ ಮಾಹಿತಿ ಲಭಗಯವಾಗಿದೆ.
ಸರಕಾರದ ಅಧಿಕೃತ ಮಾಹಿತಿ ಪ್ರಕಾರ ರಾಜ್ಯದ ನಾಲ್ವರು ಮರಣವೊಂದಿದ್ದು, ಅವರ ಶವಗಳನ್ನು ರಕ್ಷಣಾ ಕಾರ್ಯದಲ್ಲಿ ಹೊರತೆಗೆಯಲಾಗಿದೆ. ಮೃತರು ಚಾಮರಾಜನಗರ ಜಿಲ್ಲೆಯ ಗುಂಡ್ಲುಪೇಟೆ ತಾಲೂಕಿನ ದಂಪತಿ ಮತ್ತು ಮಂಡ್ಯ ಜಿಲ್ಲೆಯ ಇಬ್ಬರು ಎಂದು ಗುರುತಿಸಲಾಗಿದೆ.
ಘಟನೆಯಲ್ಲಿ ಒಂಬತ್ತು ಜನ ಕನ್ನಡಿಗರು ನಾಪತ್ತೆಯಾಗಿರುವ ಬಗ್ಗೆ ಮಾಹಿತಿ ಲಭ್ಯವಾಗಿದ್ದು, ಅವರು ಯಾವ ಜಿಲ್ಲೆಯವರು ಎಂಬ ಮಾಹಿತಿ ಇನ್ನಷ್ಟೇ ಗೊತ್ತಾಗಬೇಕಿದೆ. ರಕ್ಷಣಾ ಕಾರ್ಯದಲ್ಲಿ ಕೇರಳದ ಜತೆಗೆ ಕರ್ನಾಟಕದ ಇಬ್ಬರು ಅಧಿಕಾರಿಗಳು ಮತ್ತು ಗಡಿ ಭಾಗದ ಕೆಲ ಸಿಬ್ಬಂದಿಯನ್ನು ಬಳಸಿಕೊಳ್ಳಲಾಗುತ್ತಿದೆ.
ವಯನಾಡಿನಲ್ಲಿ ಕೆಲಸ ಮಾಡುತ್ತಿದ್ದ ಕನ್ನಡಿಗರ ಬಗ್ಗೆ ಮಾಹಿತಿ ತಿಳಿಸಲು, ಕಾರ್ಯಾಚರಣೆ ಉಸ್ತುವಾತಿ ನೋಡಿಕೊಳ್ಳಲು ಸರಕಾರ ಇಬ್ಬರು ಐಎಎಸ್ ಅಧಿಕಾರಿಗಳನ್ನು ನೋಡೆಲ್ ಅಧಿಕಾರಿಗಳನ್ನಾಗಿ ನೇಮಿಸಿ ಆದೇಶ ಮಾಡಿದೆ.