ಅಪರಾಧ ಸುದ್ದಿ

3 ವರ್ಷದ ಬಾಲಕಿಯ ಮೇಲೆ ಅತ್ಯಾಚಾರ ಎಸಗಿದ 48 ರ ವೃದ್ಧ!

Share It

ಜೋಧಪುರ: ಚಿಂದಿ ಹಾಯುವವರ ಮೂರು ವರ್ಷದ ಬಾಲಕಿಯನ್ನು ರಾತ್ರಿ ತಾಯಿ ಜೊತೆ ಮಲಗಿದ್ದಾಗ ಅಪಹರಿಸಿ ಅತ್ಯಾಚಾರ ಎಸಗಿರುವ ಘಟನೆ ಜೋಡಪುರದಲ್ಲಿ ನಡೆದಿದೆ.

ತಾಯಿಯೊಂದಿಗೆ ಮಲಗಿದ್ದ ಮಗುವಿಗೆ ಬೆಳ್ಳಗ್ಗೆ ಮೈಯಲ್ಲಿ ಗಾಯಗಳಾಗಿದ್ದದ್ದು ಗಮನಿಸಿ ಪರೀಕ್ಷೆ ನಡೆಸಿದಾಗ ಮಗುವಿನ ಮೇಲೆ ಅತ್ಯಾಚಾರ ನಡೆದಿರುವುದು ಸಾಬೀತಾಗಿದೆ.

ಅದೇ ನಗರದ ಟೀ ಸ್ಟಾಲ್ ನಲ್ಲಿ ಕೆಲಸ ಮಾಡುತ್ತಿದ್ದ ಆರೋಪಿ ಹರೀಶ್ ಸಿಂಧಿ (48) ಪೊಲೀಸರು ಬಂಧಿಸಿದ್ದಾರೆ. ಭಾನುವಾರ ಬೆಳಗ್ಗೆ ದೇವಸ್ಥಾನದ ಮುಂದೆ ಅಂಗಡಿಯನ್ನು ಹಾಕುವ ಮಹಿಳೆಯೊಬ್ಬರು 6:30 ರ ಸುಮಾರಿಗೆ ಮಗುವನ್ನು ನೋಡಿದ್ದಾರೆ. ಮಧ್ಯರಾತ್ರಿ 2 ಗಂಟೆಗೆ ಆರೋಪಿಯು ಮಗುವನ್ನು ಕರೆದುಕೊಂಡು ಹೋಗಿರುವ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ ಎಂದು ಎಸಿಪಿ ಅನಿಲ್ ಕುಮಾರ್ ತಿಳಿಸಿದ್ದಾರೆ.

ಬಾಲಕಿಯ ಪೋಷಕರು ಮೂಲತಃ ಮದ್ಯಪ್ರದೇಶದವರಾಗಿದ್ದು ಅವರು ಕೊಳಗೆರೆ ಪ್ರದೇಶದಲ್ಲಿ ನೆಲೆಸಿದ್ದರು. ಅವರ ತಾಯಿ ಮಾನಸಿಕ ಅಸ್ವಸ್ಥತೆಯಿಂದ ಕುಡಿದ್ದಾರೆ.

ಘಟನೆಯನ್ನು ಖಂಡಿಸಿರುವ ಮಾಜಿ ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್, ಜೋಧ್‌ಪುರದಲ್ಲಿ ಮೂರು ವರ್ಷದ ಬಾಲಕಿಯ ಮೇಲೆ ನಡೆದ ಅತ್ಯಾಚಾರ ತೀವ್ರ ಆತಂಕಕಾರಿಯಾಗಿದೆ. ಈ ಅಪರಾಧವು ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ. ಇಂತಹ ಘಟನೆಗಳು ರಾಜಸ್ಥಾನದ ಜನರಲ್ಲಿ ಭಯದ ವಾತಾವರಣವನ್ನು ಸೃಷ್ಟಿಸುತ್ತಿವೆ.


Share It

You cannot copy content of this page