ಬೆಂಗಳೂರು: ಬಿಜೆಪಿ ವಿರುದ್ದದ 40 ಪರ್ಸೆಂಟ್ ಕಮೀಷನ್ ಆರೋಪಕ್ಕೆ ಸಂಬಂಧಿಸಿದಂತೆ ರಾಹುಲ್ ಗಾಂಧಿ ಅವರಿಗೆ ಜಾಮೀನು ಸಿಕ್ಕಿದೆ ಎಂಬ ಮಾಹಿತಿ ಲಭ್ಯವಾಗಿದೆ.
ಬಿಜೆಪಿ ನೀಡಿದ್ದ ದೂರಿನ ಅನ್ವಯ ರಾಹುಲ್ ಗಾಂಧಿ ಅವರು ಇಂದು 42 ನೇ ಎಸಿಎಂಎಂ ನ್ಯಾಯಾಲಯದ ಮುಂದೆ ಹಾಜರಾಗಿದ್ದರು. ಹೀಗಾಗಿ, ನ್ಯಾಯಾಲಯ ಕೋರ್ಟ್ ಶ್ಯೂರಿಟಿ ಆಧಾರದ ಮೇಲೆ ಜಾಮೀನು ಮಂಜೂರು ಮಾಡಿದೆ.
75 ಲಕ್ಷ ರು.ಗಳ ಬಾಂಡ್ ಪಡೆದು, ಜಾಮೀನು ನೀಡಲಾಗಿದೆ ಎಂಬ ಮಾಹಿತಿಯಿದೆ. ಡಿ.ಕೆ.ಸುರೇಶ್ ಅವರು ಜಾಮೀನು ಬಾಂಡ್ ಗೆ ಸಹಿ ಹಾಕಿದ್ದಾರೆ ಎಂದು ಹೇಳಲಾಗಿದೆ. ಅನಂತರ ನ್ಯಾಯಾಲಯ ಪ್ರಕರಣದ ವಿಚಾರಣೆಯನ್ನು ಜೂನ್ 30 ಕ್ಕೆ ಮುಂದೂಡಿದೆ.
ರಾಹುಲ್ ಗಾಂಧಿ ವಿಚಾರಣೆಗೆ ಹಾಜರಾಗಿದ್ದ ವೇಳೆ ಸಾವಿರಾರು ಕಾರ್ಯಕರ್ತರು ನ್ಯಾಯಾಲಯದ ಸಂಕೀರ್ಣ ಕ್ಕೆ ಆಗಮಿಸಿದ್ದರು. ಕಾರ್ಯಕರ್ತರು ರಾಹುಲ್ ಪರ ಘೋಷಣೆ ಕೂಗಿದರು. ನ್ಯಾಯಾಲಯದ ಆದೇಶದ ಮೇರೆಗೆ ರಾಹುಲ್ ಗಾಂಧಿ ವಿಚಾರಣೆಗಾಗಿ ದೆಹಲಿಯಿಂದ ಆಗಮಿಸಿ, ವಿಚಾರಣೆ ಎದುರಿಸಿದರು.
updating…

