ಬೆಂಗಳೂರು: ರಾಜಧಾನಿಯಲ್ಲಿ ವಿವಿಧ ಅಭಿವೃದ್ಧಿ ಕಾಮಗಾರಿ ಮಾಡಿದ್ದ ಬಿಬಿಎಂಪಿ ಗುತ್ತಿಗೆದಾರರಿಗೆ ಪಾಲಿಕೆ ಬಾಕಿ ಉಳಿಸಿಕೊಂಡಿದ್ದರಿಂದ ಗುತ್ತಿಗೆದಾರರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಈ ಹಿನ್ನೆಯಲ್ಲಿ ಗುತ್ತಿಗೆದಾರರು ಇಂದಿನಿಂದ ಕಾಮಗಾರಿ ಸ್ಥಗಿತಗೊಳಿಸಿ ಪ್ರತಿಭಟನೆಯ ಹಾದಿ ಹಿಡಿದಿದ್ದಾರೆ.
2 ವರ್ಷದಿಂದ ಬರೋಬ್ಬರಿ 1600 ಕೋಟಿ ರೂ. ಹಣವನ್ನ ಪಾಲಿಕೆ ಬಾಕಿ ಉಳಿಸಿಕೊಂಡಿದೆ ಎಂದು ಆರೋಪಿಸಿರೋ ಗುತ್ತಿಗೆದಾರರು, ಶೇ.25 ರಷ್ಟು ಕಾಮಗಾರಿ ಬಿಲ್ ಮಾತ್ರ ಪಾಲಿಕೆ ಪಾವತಿಸಿದ್ದು, ಉಳಿದ ಶೇಕಡಾ 25 ರಷ್ಟು ಬಿಲ್ ಪಾವತಿಗೆ ಗುತ್ತಿಗೆದಾರರು ಪಟ್ಟುಹಿಡಿದಿದ್ದಾರೆ.
ಪಾಲಿಕೆಯಿಂದ ಕೈಗೊಂಡಿರುವ ಎಲ್ಲಾ ಕಾಮಗಾರಿಗೆ ಬ್ರೇಕ್ ಹಾಕಲು ಸಜ್ಜಾಗಿರೋ ಗುತ್ತಿಗೆದಾರರು, ಬಾಕಿ ಬಿಲ್ ಕ್ಲಿಯರ್ ಆಗೋ ತನಕ ಅನಿರ್ಧಿಷ್ಟಾವಧಿ ಪ್ರತಿಭಟನೆ ನಡೆಸೋಕೆ ಸಿದ್ಧತೆ ನಡೆಸಿದ್ದಾರೆ