ಬೆಂಗಳೂರು: ಮಾಲಿನ್ಯ ತಡೆಯುವ ನಿಟ್ಟಿನಲ್ಲಿ ಪದ್ಮನಾಭ ನಗರದ ಸಾರ್ವಜನಿಕರಿಗೆ ಜಾಗೃತಿ ಮೂಡಿಸುವ ಜತೆಗೆ ಮಣ್ಣಿನ ಗಣಪನ ವಿತರಣೆ ಮಾಡಲಾಯಿತು.
ಕಾಂಗ್ರೆಸ್ ಮುಖಂಡ ಹಾಗೂ ಬಿಬಿಎಂಪಿ ಗ್ಯಾರಂಟಿ ಅನುಷ್ಠಾನ ಸಮಿತಿಯ ಪದ್ಮನಾಭ ನಗರ ಕ್ಷೇತ್ರದ ಅಧ್ಯಕ್ಷ ಪ್ರಮೋದ್ ಶ್ರೀನಿವಾಸ್ ನೇತೃತ್ವದಲ್ಲಿ ನಡೆದ ಕಾರ್ಯಕ್ರಮದಲ್ಲಿ 1001 ಗಣೇಶ ವಿಗ್ರಹಗಳನ್ನು ವಿತರಣೆಮಾಡಲಾಯಿತು.
ಮಣ್ಣಿನ ಗಣೇಶನ ಬಳಕೆಯಿಂದ ಪರಿಸರದ ಮೇಲಾಗುವ ದುಷ್ಪರಿಣಾಮ ತಡೆಯಬಹುದು. ಹಬ್ಬ ಅಚರಣೆ ನಮ್ಮ ನಾಡಿನ ಸಂಸ್ಕೃತಿ, ಆದರೆ, ಆಚರಣೆಯಿಂದ ಪರಿಸರದ ಮೇಲೆ ಕೆಟ್ಟ ಪರಿಣಾಮ ಬೀರಬಾರದು. ಹೀಗಾಗಿ, ಪರಿಸರ ಸ್ನೇಹಿ ಹಬ್ಬಗಳ ಆಚರಣೆ ಬಹುಮುಖ್ಯವಾದುದು ಎಂದು ಪ್ರಮೋದ್ ಶ್ರೀನಿವಾಸ್ ತಿಳಿಸಿದರು.
ಮಣ್ಣು ಪಂಚಭೂತಗಳಲ್ಲಿ ಒಂದು, ಜೀವಂತಿಕೆ ತುಂಬಿರುವ ಮಣ್ಣಿನಿಂದ ಮಾಡಿದ ಗಣೇಶ ಪರಿಸರ ಸ್ನೇಹಿ ಆಗಿರುತ್ತದೆ. ಹೀಗಾಗಿ, ಕ್ಷೇತ್ರದ ಜನರಿಗೆ ಮಣ್ಣಿನ ಗಣೇಶ ವಿಗ್ರಹಗಳ ವಿತರಣೆ ಮಾಡಿ ಪರಿಸರ ಸ್ನೇಹಿ ಹಬ್ಬ ಆಚರಣೆಗೆ ಅವಕಾಶ ಮಾಡಿಕೊಡಲಾಗಿದೆ ಎಂದರು.
ಎಲ್ಲಾ ಹಿರಿಯ ಕಾಂಗ್ರೆಸ್ ಮುಖಂಡರು, ಕಾರ್ಯಕರ್ತರು, ಹಿತೈಷಿಗಳು ಆಗಮಿಸಿ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.