ಪ್ರಧಾನಿ ನರೇಂದ್ರ ಮೋದಿ ಅವರ ಬ್ರೂನಿ, ಸಿಂಗಾಪುರ ಪ್ರವಾಸ

Share It

ಬೆಂಗಳೂರು: ಪ್ರಧಾನಿ ನರೇಂದ್ರ ಮೋದಿ ಮೂರುದಿನಗಳ ವಿದೇಶ ಪ್ರವಾಸ ಕೈಗೊಂಡಿದ್ದು ಇಂದು (ಸೆ.4) ಬ್ರೂನಿಗೆ ತೆರಳಿದ್ದಾರೆ. ಬ್ರೂನಿಯ ಸುಲ್ತಾನ್ ಹಸನಲ್ ಬೊಲ್ಕಿಯಾ ಅವರೊಂದಿಗೆ ಮಾತುಕತೆ ನಡೆಸಲಿದ್ದಾರೆ.

ಇದು ಬ್ರೂನಿಗೆ ಭಾರತದ ಪ್ರಧಾನಿಯ ಮೊದಲ ದ್ವಿಪಕ್ಷೀಯ ಭೇಟಿಯಾಗಿದೆ. ಇದಾದ ನಂತರ ಪ್ರಧಾನಿ ಮೋದಿ ಬ್ರೂನಿಯಿಂದ ಸಿಂಗಾಪುರಕ್ಕೆ ಭೇಟಿ ನೀಡಲಿದ್ದಾರೆ. ಸಿಂಗಾಪುರದೊAದಿಗೆ ಮುಕ್ತ ವ್ಯಾಪಾರ ಒಪ್ಪಂದಕ್ಕೆ ಸಹಿ ಹಾಕುವ ನಿರೀಕ್ಷೆಯಿದೆ.

ಆಸಿಯಾನ್ ಚೌಕಟ್ಟಿನಡಿಯಲ್ಲಿ ಭಾರತ ಮತ್ತು ಸಿಂಗಾಪುರ ನಡುವಿನ ಮುಕ್ತ ವ್ಯಾಪಾರ ಒಪ್ಪಂದವನ್ನು ಪರಿಶೀಲಿಸುವ ಸಾಧ್ಯತೆಯಿದೆ ಎಂದು ವಿದೇಶಾಂಗ ವ್ಯವಹಾರಗಳ ಸಚಿವಾಲಯ ತಿಳಿಸಿದೆ.

ವ್ಯಾಪಾರ ಮತ್ತು ಹೂಡಿಕೆ, ಇಂಧನ, ಬಾಹ್ಯಾಕಾಶ ತಂತ್ರಜ್ಞಾನ, ಆರೋಗ್ಯ, ಸಾಮರ್ಥ್ಯ ನಿರ್ಮಾಣ, ಸಂಸ್ಕೃತಿ ಸೇರಿದಂತೆ ಹಲವು ವಿಚಾರಗಳ ಕುರಿತು ಚರ್ಚೆ ನಡೆಯಲಿದೆ.

ಭಾರತ ಮತ್ತು ಬ್ರೂನಿ ರಾಜತಾಂತ್ರಿಕ ಸಂಬಂಧದಲ್ಲಿ 4೦ ವರ್ಷಗಳನ್ನು ಪೂರೈಸುತ್ತಿವೆ. ನಾನು ಸಿಂಗಾಪುರದಲ್ಲಿ ಸುಲ್ತಾನ್ ಹಾಜಿ ಹಸನಲ್ ಅವರನ್ನು ಭೇಟಿಯಾಗಲು ಎದುರು ನೋಡುತ್ತಿದ್ದೇನೆ, ನಾನು ಅಧ್ಯಕ್ಷ ಥರ್ಮನ್ ಷಣ್ಮುಗರತ್ನಂ, ಪ್ರಧಾನ ಮಂತ್ರಿ ಲಾರೆನ್ಸ್ ವಾಂಗ್, ಹಿರಿಯ ಸಚಿವ ಲೀ ಹ್ಸೆನ್ ಲೂಂಗ್ ಮತ್ತು ಇತರ ಹಿರಿಯ ಸಚಿವರನ್ನು ಭೇಟಿಯಾಗುತ್ತೇನೆ. ನಾವು ಅನೇಕ ಪ್ರಮುಖ ಕ್ಷೇತ್ರಗಳಲ್ಲಿ ಸಂಬಂಧಗಳನ್ನು ಬಲಪಡಿಸಲು ಎದುರು ನೋಡುತ್ತಿದ್ದೇವೆ ಎಂದು ಮೋದಿ ಹೇಳಿದ್ದಾರೆ.

ಪ್ರಧಾನಿ ಮೋದಿಯವರ ಈ ಭೇಟಿಯಲ್ಲಿ ವ್ಯಾಪಾರ ಸಂಬಂಧಗಳನ್ನು ಹೆಚ್ಚಿಸುವುದರ ಜೊತೆಗೆ ಬಾಹ್ಯಾಕಾಶ ಮತ್ತು ರಕ್ಷಣಾ ಕ್ಷೇತ್ರಗಳಲ್ಲಿ ಸಹಕಾರವನ್ನು ಹೆಚ್ಚಿಸಲಿದ್ದಾರೆ. ಭಾರತವು ಈಗಾಗಲೇ ಬಾಹ್ಯಾಕಾಶ ಕ್ಷೇತ್ರದಲ್ಲಿ ಬ್ರೂನಿಯೊಂದಿಗೆ ಹಲವು ಮಹತ್ವದ ಒಪ್ಪಂದಗಳಿಗೆ ಸಹಿ ಹಾಕಿದೆ.

ಇದರೊಂದಿಗೆ, ಈ ಭೇಟಿಯು ಕಚ್ಚಾ ತೈಲ ಮತ್ತು ಹೈಡ್ರೋಕಾರ್ಬನ್ ಕ್ಷೇತ್ರದಲ್ಲಿ ಉಭಯ ದೇಶಗಳ ನಡುವಿನ ಸಂಬಂಧವನ್ನು ಬಲಪಡಿಸುತ್ತದೆ.
ಈ ಪ್ರವಾಸವು ಸೆಮಿಕಂಡಕ್ಟರ್ ಮತ್ತು ಹೈಡ್ರೋಕಾರ್ಬನ್ ಆಮದುಗಳ ಮೇಲೆ ಕೇಂದ್ರೀಕರಿಸುವ ನಿರೀಕ್ಷೆಯಿದೆ.

ಈ ಪ್ರದೇಶದಲ್ಲಿ ಕೆಲವು ಒಪ್ಪಂದಗಳೂ ಇರಬಹುದು. ಭಾರತದ ಆಕ್ಟ್ ಈಸ್ಟ್ ಪಾಲಿಸಿ ಮತ್ತು ಇಂಡೋ ಪೆಸಿಫಿಕ್ ದೃಷ್ಟಿಗೆ ಸಂಬAಧಿಸಿದAತೆ ಬ್ರೂನಿಯನ್ನು ಬಹಳ ಮುಖ್ಯವಾದ ದೇಶವೆಂದು ಪರಿಗಣಿಸಲಾಗಿದೆ.
ಮೋದಿ ಅವರು ಸೆಪ್ಟೆಂಬರ್ 4 ರಂದು ಎರಡು ದಿನಗಳ ಸಿಂಗಾಪುರ ಪ್ರವಾಸಕ್ಕೆ ತೆರಳಲಿದ್ದಾರೆ.

ಇದು ಪ್ರಧಾನಿ ಮೋದಿಯವರ ಸಿಂಗಾಪುರಕ್ಕೆ ಐದನೇ ಭೇಟಿಯಾಗಿದೆ. ಪ್ರಧಾನಿ ಲಾರೆನ್ಸ್ ವಾಂಗ್ ಅವರ ಆಹ್ವಾನದ ಮೇರೆಗೆ ಅವರು ಸಿಂಗಾಪುರಕ್ಕೆ ತೆರಳುತ್ತಿದ್ದಾರೆ. ಈ ವೇಳೆ ಪ್ರಧಾನಿ ಮೋದಿ ಅವರು ಸಿಂಗಾಪುರ ಅಧ್ಯಕ್ಷ ಥರ್ಮನ್ ಷಣ್ಮುಗರತ್ನಂ ಅವರನ್ನು ಭೇಟಿ ಮಾಡಲಿದ್ದಾರೆ.


Share It

You May Have Missed

You cannot copy content of this page