ಸಿನಿಮಾ ಸುದ್ದಿ

ಯಶ್ ಅಭಿನಯದ ಪ್ಯಾನ್ ವರ್ಲ್ಡ್ ಸಿನಿಮಾ ‘ಟಾಕ್ಸಿಕ್ ‘ ಚಿತ್ರತಂಡಕ್ಕೆ ಎಂಟ್ರಿ ಕೊಟ್ರ ಬ್ರಿಟಿಷ್ ನಟ?

Share It

ಕೆಜಿಎಫ್ ಸೀರಿಸ್ ನಂತರ ಪ್ಯಾನ್ ಇಂಡಿಯಾ ಮಟ್ಟದಲ್ಲಿ ಸಿನಿ ಪ್ರೇಕ್ಷಕರ ಹೃದಯ ಗೆದ್ದಿರುವ ರಾಕಿಂಗ್ ಸ್ಟಾರ್ ಯಶ್ ಅಭಿನಯದ ‘ಟಾಕ್ಸಿಕ್’ ಆಕ್ಷನ್ ಥ್ರಿಲ್ಲರ್ ಚಿತ್ರವಾಗಿದೆ.

ಮಲಯಾಳಂನ ಖ್ಯಾತ ನಿರ್ದೇಶಕಿ ಗೀತು ಮೋಹನ್ ದಾಸ್ ನಿರ್ದೇಶನದಲ್ಲಿ ಮತ್ತು ಕರ್ನಾಟಕದ ಹೆಸರಾಂತ KVN ಪ್ರೊಡಕ್ಷನ್ ಹೌಸ್ನಲ್ಲಿ ಮೂಡಿಬರುತ್ತಿರುವ ಚಿತ್ರಕ್ಕೆ ಈಗ ಬಇಂಗ್ಲಿಷ್ ಸಿನಿಮಾಗಳಲ್ಲಿ ನಟಿಸಿದ್ದ ಬ್ರಿಟಿಷ್ ನಟ ‘ಬೆನಿಡಿಕ್ಟ್ ಗ್ಯಾರೇಟ್ ‘ ಅವರು ತಮ್ಮ ಇನ್ಸ್ಟಾಗ್ರಾಮ್ ಪೋಸ್ಟ್ ಕೆಳಗೆ ಅಭಿಮಾನಿಯೊಬ್ಬರ ಕಾಮೆಂಟ್ಗೆ ಪ್ರತಿಕ್ರಿಯಿಸಿ ನಾನು ಯಶ್ನೊಂದಿಗೆ ನಟಿಸುತ್ತಿದ್ದೇನೆ ಎಂದು ಪ್ರತಿಯಾಗಿ ರಿಪ್ಲೈ ಹಾಕಿದ್ದಾರೆ.

ಇದನ್ನು ಇನ್ನೂ ಚಿತ್ರತಂಡ ಅಧಿಕೃತವಾಗಿ ದೃಢಪಡಿಸಿಲ್ಲ.ಈ ಹಿಂದೆ ‘ಟಾಕ್ಸಿಕ್’ ಚಿತ್ರದಲ್ಲಿ ಕರೀನಾ ಕಪೂರ್ ಖಾನ್ ಬದಲಿಗೆ ತಮಿಳು ಮತ್ತು ತೆಲುಗು ಸಿನಿಮಾಗಳಲ್ಲಿ ದೊಡ್ಡ ಮಟ್ಟದ ಅಭಿಮಾನಿಗಳನ್ನು ಹೊಂದಿರುವ ನಟಿ ನಯನತಾರಾ ಪ್ರಮುಖ ಪಾತ್ರದಲ್ಲಿ ಮೂವಿಟೀಮ್ಗೆ ಸೇರಿಕೊಂಡಿದ್ದರು.

ವಿಶ್ವದ ಎಲ್ಲೆಡೆ ಯಶ್ ಅವರ ಅಭಿಮಾನಿಗಳು ಮತ್ತು ಇಡೀ ಭಾರತೀಯ ಚಿತ್ರರಂಗ ಕೆಜಿಫ್ -2 ನಂತರ ಅಂದರೆ 2022 ಏಪ್ರಿಲ್ 14ರಿಂದ ರಾಕಿ ಬಾಯ್ ಮುಂದಿನ ಸಿನಿಮಾವನ್ನು ಬೆಳ್ಳಿ ಪರದೆಯ ಮೇಲೆ ನೋಡಲು ಕಾತುರದಿಂದ ಕಾಯುತ್ತಿದ್ದಾರೆ.

ಈಗ ಸದ್ಯಕ್ಕೆ ಗಾಂಧಿನಗರದಲ್ಲಿ ಓಡಾಡುತ್ತಿರುವ ಸುದ್ಧಿಯ ಪ್ರಕಾರ ಮುಂದಿನ ವರ್ಷದ ಏಪ್ರಿಲ್ ತಿಂಗಳಲ್ಲಿ ತೆರೆಗೆ ಬರುವ ಎಲ್ಲ ಲಕ್ಷಣಗಳು ಇವೆ.
ಹೊಂಬಾಳೆ ಬಿಟ್ಟರೆ ಕರ್ನಾಟಕದ ಅತಿ ದೊಡ್ಡ ಪ್ರೊಡಕ್ಷನ್ ಹೌಸ್ ಎಂದೇ ಹೆಸರು ಪಡೆದಿರುವ KVN ಸಂಸ್ಥೆಯು ಮೂವಿ ಪ್ರಮೋಷನ್ ವಿಚಾರದಲ್ಲಿ ತುಂಬಾ ಫ್ಯಾಸಿನೆಟ್ ಆಗಿ ಕೆಲಸ ಮಾಡುತ್ತಿದೆ.


Share It

You cannot copy content of this page