ನಿಮ್ಮಂಥ ಅಭಿಮಾನಿಗಳಿಂದಲೇ ದರ್ಶನ್‌ಗೆ ಕೆಟ್ಟ ಹೆಸರು !
ಬೆಂಗಳೂರು: ನಟ ದರ್ಶನ್ ಜೈಲಿನಲ್ಲಿದ್ದರೂ ಅಭಿಮಾನಿಗಳ ಆರ್ಭಟ ನಿಂತಿಲ್ಲ. ಇದೀಗ ನಿಮ್ಮಂಥಹ ಅಬಿಮಾನಿಗಳಿಂದಲೇ ದರ್ಶನ್ ಹೀಗೆ ಆಗಿದ್ದು ಎಂದು ಪೊಲೀಸರು ಅಭಿಮಾನಿಗಳಿಗೆ ಕ್ಲಾಸ್ ತೆಗೆದುಕೊಂಡಿದ್ದಾರೆ.
ದರ್ಶನ್ ಬಳ್ಳಾರಿಯ ಸೆಂಟ್ರಲ್ ಜೈಲಿನಲ್ಲಿ ಮೊದಲ ದಿನ ಕಳೆದಿದ್ದಾರೆ. ಇದೇ ದಿನ ದರ್ಶನ್ ಅಭಿನಯದ ಕರಿಯಾ ಸಿನಿಮಾ ಮರುಬಿಡುಗಡೆಯಾಗಿದೆ. ಇದೇ ಹೊತ್ತಿನಲ್ಲಿ ಅಭಿಮಾನಿಗಳ ನಡೆಗೆ ಪೊಲೀಸರು ಅಸಮಧಾನ ವ್ಯಕ್ತಪಡಿಸಿದ್ದು, ವಿಡಿಯೋ ವೈರಲ್ ಆಗಿದೆ.
ಕರಿಯಾ ಸಿನಿಮಾ ರಿಲೀಸ್ ವೇಳೆ ಮಾಗಡಿ ರಸ್ತೆಯ ಪ್ರಸನ್ನ ಥಿಯೇಟರ್ ಬಳಿ ಜಮಾಯಿಸಿದ್ದ ಅಭಿಮಾನಿಗಳು ಕಾನೂನು ಸುವ್ಯವಸ್ಥೆಗೆ ಭಂಗ ತರುವ ನಡವಳಿಕೆ ಅನುಸರಿಸಿದ್ದರು. ಇದಕ್ಕಾಗಿ ಮೈಕ್ ಹಿಡಿದ ಪೊಲೀಸ್ ಒಬ್ಬರು, ಶಾಂತಿಯಿAದ ಇರುವಂತೆ ಸೂಚನೆ ನೀಡಿದ್ದರು.
ಪೊಲೀಸ್ ಮೈಕ್ ಹಿಡಿದು ಮಾತನಾಡಲು ನಿಲ್ಲುತ್ತಿದ್ದಂತೆ ಪಟಾಕಿ ಸಿಡಿಸಿ, ಘೋಷಣೆ ಕೂಗುತ್ತಾ ಅಡ್ಡಿಪಡಿಸಿದ ಅಭಿಮಾನಿಗಳ ನಡೆಗೆ ಬೇಸರ ವ್ಯಕ್ತಪಡಿಸಿ, ನಿಮ್ಮಂತಹವರಿAದಲೇ ದರ್ಶನ್ ಈ ಸ್ಥೀತಿಗೆ ಬಂದಿರುವುದು, ನಿಮ್ಮ ಅಭಿಮಾನ ತೋರಿಸಿ ಆದರೆ, ಕಾನೂನು ಮೀರಿ ನಡೆದುಕೊಂಡರೆ ನಿಮ್ಮ ವಿರುದ್ಧ ಕ್ರಮ ತೆಗೆದುಕೊಳ್ಳುತ್ತೇವೆ ಎಂದು ಎಚ್ಚರಿಕೆ ನೀಡಿದ್ದಾರೆ.
ದರ್ಶನ್ ಪರಪ್ಪನ ಅಗ್ರಹಾರ ಜೈಲಿನಲ್ಲಿ ರೌಡಿಶೀಟರ್ ಗಳ ಜತೆ ಕುಳಿತ ಫೋಟೋ ವೈರಲ್ ಆಗುತ್ತಿದ್ದಂತೆ ಅವರನ್ನು ಬಳ್ಳಾರಿ ಜೈಲಿಗೆ ಶಿಫ್ಟ್ ಮಾಡಲಾಗಿದೆ. ಅಲ್ಲಿಗೆ ಶಿಫ್ಟ್ ಆಗಿದ್ದನ್ನೂ ಅಭಿಮಾನಿಗಳು ಸಂಭ್ರಮಿಸುವ ರೀತಿ ವರ್ತಿಸುತ್ತಿದ್ದಾರೆ. ಅಲ್ಲಿನ ಹೊಸ ಖೈದಿ ಸಂಖ್ಯೆ ಇದೀಗ ಟ್ರೆಂಡ್ ಆಗುತ್ತಿದೆ. ಇಂತಹ ವರ್ತನೆ ದರ್ಶನ್‌ಗೆ ಮುಳುವಾಗುತ್ತಿದೆ ಎಂಬುದು ಸಾರ್ವಜನಿಕ ಅಭಿಪ್ರಾಯವೂ ಕೂಡ ಹೌದು. ಇದೀಗ ಪೊಲೀಸರು ಕೂಡ ಅದೇ ಅಭೀಪ್ರಾಯ ವ್ಯಕ್ತಪಡಿಸಿ. ದರ್ಶನ್ ಅಭಿಮಾನಿಗಳೀಗೆ ಎಚ್ಚರಿಕೆ ನೀಡಿದ್ದಾರೆ.


