ಅಕ್ರಮ ಕಟ್ಟಡಗಳಿಗೆ ಕರೆಂಟ್ ಶಾಕ್ ಕೊಡಲು ಮುಂದಾದ ಬೆಸ್ಕಾಂ

electricity
Share It

ಬೆಂಗಳೂರು: ರಾಜಧಾನಿಯಲ್ಲಿ ನಿಯಾಮವಳಿಗಳನ್ನು ಮೀರಿ ನಿರ್ಮಾಣವಾಗುತ್ತಿರುವ ಕಟ್ಟಡಗಳಿಗೆ ಶಾಕ್ ನೀಡಲು ಬೆಸ್ಕಾಂ ತೀರ್ಮಾನಿಸಿದ್ದು, ಇಂತಹ ಕಟ್ಟಡಗಳ ವಿದ್ಯುತ್ ಸಂಪರ್ಕ ಕಡಿತಗೊಳಿಸುವ ಕ್ರಮಕ್ಕೆ ಮುಂದಾಗಲಿದೆ.

ಬಿಬಿಎAಪಿಯಿAದ ಅನುಮತಿ ಪಡೆಯದೆ, ಬಿಬಿಎಂಪಿ ವಿಧಿಸಿರುವ ನಿಯಮಾವಳಿಗಳನ್ನು ಅಳವಡಿಸಿಕೊಳ್ಳದೆ ಕಟ್ಟಡಗಳ ನಿರ್ಮಾಣಗಳು ನಡೆಯುತ್ತಿವೆ. ಇಂತಹವುಗಳಿಗೆ ಅನುಮತಿ ನೀಡಬಾರದು ಎಂಭ ಮನವಿಗಳು ಬಂದಿದ್ದವು. ಈ ಹಿನ್ನೆಲೆಯಲ್ಲಿ ಬೆಸ್ಕಾಂ ನಿರ್ಧಾರಕ್ಕೆ ಬಂದಿದ್ದು, ಬೆಸ್ಕಾಂ ವ್ಯಾಪ್ತಿಯ ಎಲ್ಲ ಕ್ಷೇತ್ರ ಅಧಿಕಾರಿಗಳಿಗೆ ಸುತ್ತೋಲೆ ಹೊರಡಿಸಲಾಗಿದೆ.

ಸಂಬAಧಪಟ್ಟ ಅಧಿಕಾರಿಗಳು, ಪಂಚಾಯತ್ ರಾಜ್ ಇಲಾಖೆ, ಬಿಬಿಎಂಪಿತAತಹ ಶಾಸನಬದ್ಧ ಇಲಾಖೆಗಳು ಈ ಸಂಬAಧ ಮನವಿ ಮಾಡಿಕೊಂಡರೆ ಅಕ್ರಮ ಕಟ್ಟಡಗಳ ವಿದ್ಯುತ್ ಸಂಪರ್ಕವನ್ನು ಕಡಿತಗೊಳೀಸಲಾಗುವುದು. ಈ ಸಂಬAಧ ಏಳು ದಿನಗಳ ನೋಟಿಸ್ ನೀಡಲು ತೀರ್ಮಾನಿಸಿದ್ದು, ನೊಟೀಸ್‌ಗೆ ಯಾವುದೇ ಪ್ರತಿಕ್ರಿಯೆ ಬರದಿದ್ದರೆ, ವಿದ್ಯುತ್ ಸಂಪರ್ಕ ಕಡಿತವೊಂದೇ ಅಸ್ತçವಾಗಿರಲಿದೆ ಎಂದು ಬೆಸ್ಕಾಂ ತಿಳಿಸಿದೆ.

ಬಾಬು ಸಾಬ್ ಪಾಳ್ಯದಲ್ಲಿ ಕಟ್ಟಡ ಕುಸಿದು ೯ ಜನರ ಮೃತಪಟ್ಟ ಪ್ರಕರಣಕ್ಕೆ ಸಂಬAಧಿಸಿದAತೆ ಲೋಕಾಯುಕ್ತರು ಸಂಬAಧಪಟ್ಟ ಇಲಾಖೆಗಳ ಮೇಲೆ ಗರಂ ಆಗಿದ್ದರು. ಎಲ್ಲ ಇಲಾಖೆಯ ಮುಖ್ಯಸ್ಥರಿಗೆ ಪತ್ರ ಬರೆದು, ಇಂತಹ ಕಟ್ಟಡಗಳಿಗೆ ಅನುಮತಿ ನೀಡುವಾಗ ಕೈಗೊಂಡ ಕ್ರಮಗಳ ಬಗ್ಗೆ ವಿವರಣೆ ಕೇಳಿದ್ದರು. ಈ ಹಿನ್ನೆಲೆಯಲ್ಲಿ ಬೆಸ್ಕಾಂ ವಿದ್ಯುತ್ ಸಂಪರ್ಕ ಕಡಿತಕ್ಕೆ ಮುಂದಾಗಿದೆ.

ಎಲ್ಲ ಇಲಾಖೆಗಳ ಎನ್‌ಒಸಿ ಸಿಗದೆ ಬ್ಯಾಂಕ್‌ಗಳು ಕಟ್ಟಡ ನಿರ್ಮಾಣಕ್ಕೆ ಸಾಲ ನೀಡುವಂತಿಲ್ಲ ಎಂದು ಸುಪ್ರೀಂ ಕೋರ್ಟ್ ಇತ್ತೀಚೆಗೆ ತೀರ್ಪು ನೀಡಿದೆ. ಕಟ್ಟಡ ನಿರ್ಮಾಣದಲ್ಲಿ ಅಗ್ನಿಶಾಮಕ ಇಲಾಖೆ, ಒಳಚರಂಡಿ, ವಿದ್ಯುತ್ ಸಂಪರ್ಕದ ವಿಷಯದಲ್ಲಿ ಎನ್‌ಒಸಿ ಪಡೆಯುವುದು ಕಡ್ಡಾಯ. ಆದರೆ, ಇಂತಹದ್ದೆಲ್ಲ ಪಡೆಯದೆ ಕಟ್ಟಡ ನಿರ್ಮಾಣಕ್ಕೆ ಮುಂದಾಗುವವರಿಗೆ ವಿದ್ಯುತ್ ಸಂಪರ್ಕ ಕಡಿತದ ಮೂಲಕ ಬಿಸಿಮುಟ್ಟಿಸಬಹುದು. ಈ ನಿಟ್ಟಿನಲ್ಲಿ ಬೆಸ್ಕಾಂ ನಡೆ ಸವಾಗತಾರ್ಹ ಎಂದು ನಾಗರಿಕರು ಸಂತಸಪಟ್ಟಿದ್ದಾರೆ.


Share It

You cannot copy content of this page