ಅಪರಾಧ ಸುದ್ದಿ

ಶೀಲ ಶಂಕಿಸಿ ಪತ್ನಿಯ ತಲೆ ಕತ್ತರಿಸಿ ಪೊಲೀಸ್ ಠಾಣೆಗೆ ತಂದ‌ ಪತಿ

Share It

ಬಿಹಾರ: ಪತ್ನಿಯ ಶೀಲ ಶಂಕಿಸಿ ವ್ಯಕ್ತಿಯೊಬ್ಬ ತನ್ನ ಪತ್ನಿಯ ರುಂಡ ಕತ್ತರಿಸಿ ಕೈಯಲ್ಲಿ ಹಿಡಿದು ಊರುರು ಸುತ್ತುತ್ತಿದ್ದಾತನನ್ನು ಪೊಲೀಸರು ಬಂಧಿಸಿರುವ ಘಟನೆ ಮಾಧೇಪುರದ ಶ್ರೀನಗರ ಪೊಲೀಸ್ ಠಾಣೆ ವ್ಯಾಪ್ತಿಯ ಪೊಖಾರಿಯಾದಲ್ಲಿ ಘಟನೆ ನಡೆದಿದೆ.

ಪತ್ನಿಯನ್ನು ಕೊಲೆ ಮಾಡಿ, ಆಕೆಯ ತಲೆಯನ್ನು ಕೈಯಲ್ಲಿ ಹಿಡಿದು ಊರೂರು ಸುತ್ತುತ್ತಿದ್ದ ಇದನ್ನು ಗಮನಿಸಿದ ಸ್ಥಳೀಯರು ಬೆಚ್ಚಿ ಬಿದಿದ್ದಾರೆ.
ಆರೋಪಿ ಅರ್ಜುನ್ ಶರ್ಮಾನನ್ನು ಬಂಧಿಸಿದ್ದಾರೆ. ಪೂಜಾದೇವಿ ಕೊಲೆಯಾದಕೆ ಎಂದು ಡಿಎಸ್​ಪಿ ಮನೋಜ್ ಮೋಹನ್ ತಿಳಿಸಿದ್ದಾರೆ.

ಮೃತದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ಸದರ್ ಆಸ್ಪತ್ರೆಗೆ ರವಾನಿಸಲಾಗಿದೆ ಎಂದು ತಿಳಿಸಿದ್ದಾರೆ. ಅಲ್ಲದೆ, ಘಟನೆಗೆ ಬಳಸಿದ್ದ ಆಯುಧ ಹಾಗೂ ಪೆಟ್ಟಿಗೆಯನ್ನು ವಶಪಡಿಸಿಕೊಳ್ಳಲಾಗಿದೆ.

ಆರೋಪಿ ಅರ್ಜುನ್ ಕೈಯಲ್ಲಿ ಬ್ಯಾಗ್ ಹಿಡಿದು ಪೊಲೀಸ್ ಠಾಣೆಗೆ ಬರುತ್ತಿದ್ದ ಎಂದು ನಜೀರ್ ತಿಳಿಸಿದ್ದಾನೆ. ಚೀಲದಿಂದ ರಕ್ತ ಸೋರುತ್ತಿತ್ತು. ಅಷ್ಟರಲ್ಲಿ ಒಬ್ಬ ಪೋಲೀಸ್ ಅವನನ್ನು ತಡೆದಿದ್ದರು, ಆಗ ಬ್ಯಾಗ್ ನಲ್ಲಿ ತುಂಡರಿಸಿದ ತಲೆ ನೋಡಿ ಎಲ್ಲರೂ ಬೆಚ್ಚಿಬಿದ್ದರು. ಇದಾದ ಬಳಿಕ ಪೊಲೀಸರು ಆತನನ್ನು ಬಂಧಿಸಿದ್ದಾರೆ.


Share It

You cannot copy content of this page