ಚಿಕ್ಕಮಗಳೂರು: ಸಿಎಂ ಕಚೇರಿಯಲ್ಲಿ ಬಂದು ಶರಣಾದ ನಕ್ಸಲರನ್ನು ಇಂದು ಚಿಕ್ಕಮಗಳೂರಿಗೆ ಶಿಫ್ಟ್ ಮಾಡಲಾಗಿದ್ದು, ಎಸ್‌ಪಿ ನೇತೃತ್ವದ ತಂಡದಿAದ ಇಂದು ವಿಚಾರಣೆ ನಡೆಯಲಿದೆ.
ಸರಕಾರದ ಸೂಚನೆಯ ಮೇರೆಗೆ ಆರು ನಕ್ಸಲರ ತಂಡ ಶರಣಾಗಿತ್ತು. ಶರಣಾದ ನಕ್ಸಲರನ್ನು ಪರಪ್ಪನ ಅಗ್ರಹಾರ ಜೈಲಿನಲ್ಲಿಡಲಾಗಿತ್ತು. ಇದೀಗ ಶಸ್ತ್ರಾಸ್ತ್ರ ಸಂಗ್ರಹ ಹಾಗೂ ಇನ್ನಿತರೆ ಹಳೆಯ ಪ್ರಕರಣಗಳ ವಿಚಾರಣೆ ಸಂಬAಧ ಅವರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.
ಗುರುವಾರ ತಡರಾತ್ರಿ ನಕ್ಸಲರನ್ನು ಚಿಕ್ಕಮಗಳೂರಿನ ಪೊಲೀಸ್ ಕ್ವಾಟ್ರಸ್‌ಗೆ ಕರೆತರಲಾಗಿದ್ದು, ಶುಕ್ರವಾರ ಚಿಕ್ಕಮಗಳೂರಿನ ಎಸ್‌ಪಿ ನೇತೃತ್ವದಲ್ಲಿ ವಿಚಾರಣೆ ನಡೆಯಲಿದೆ. ನಕ್ಸಲ್ ತಂಡದ ಮುಂಡಗೋಡು ಲತಾ, ಸುಂದರಿ, ವನಜಾಕ್ಷಿ, ಜಯಣ್ಣ, ಜೀಶಾ ಹಾಗೂ ವಸಂತ ಅವರ ವಿಚಾರಣೆ ನಡೆಯಲಿದೆ.
ಶಸ್ತ್ರಾಸ್ತ್ರ ಸಂಗ್ರಹ ಸೇರಿ ಹಳೆಯ ಪ್ರಕರಣಗಳ ವಿಚಾರಣೆ ನಡೆಯಲಿದ್ದು, ಈ ನಕ್ಸಲರನ್ನು
ಜ.೨೩ರವರೆಗೆ ಪೊಲೀಸ್ ಕಸ್ಟಡಿಗೆ ನೀಡಿರುವ ನ್ಯಾಯಾಲಯ, ಎನ್‌ಐಎ ವಿಚಾರಣೆಗೂ ಅವಕಾಶ ನೀಡಿದೆ.