ಬೆಂಗಳೂರು: ಕೊಮ್ಮಘಟ್ಟದ ಕಾರ್ಮಿಕರ ಶೆಡ್‌ಗೆ ರಾಜಕಾಲುವೆಯ ನೀರು ಏಕಾಏಕಿ ನುಗ್ಗಿದ್ದು, ೯ ಕಾರ್ಮಿಕರು ಪ್ರಾಣಾಪಾಯದಿಂದ ಪಾರಾಗಿದ್ದಾರೆ.
ಬೆಂಗಳೂರಿನಲ್ಲಿ ಸುರಿಯುತ್ತಿರುವ ಭಾರಿ ಮಳೆಯಿಂದಾಗಿ ನಗರದ ಅನೇಕ ಬಡಾವಣೆಗಳಲ್ಲಿ ನೀರು ನುಗ್ಗಿ ಅವಾಂತರ ಸೃಷ್ಟಿಯಾಗಿದೆ. ಯಶವಂತಪುರ ವಿಧಾನಸಭಾ ಕ್ಷೇತ್ರದ ಕೊಮ್ಮಘಟ್ಟ ಬಳಿಯ ಭೈರಹಳ್ಳಿ ಗ್ರಾಮದ ಹಾಲೋಬ್ಲಾಕ್ ಫ್ಯಾಕ್ಟರಿಗೆ ರಾಜಕಾಲುವೆಯ ನೀರು ನುಗ್ಗಿದೆ.
ರಾಯಚೂರು ಮತ್ತು ಬಿಹಾರ ಮೂಲದ ಕಾರ್ಮಿಕರಿಗೆ ಮೂರು ಶೆಡ್‌ಗಳನ್ನು ನಿರ್ಮಾಣ ಮಾಡಲಾಗಿತ್ತು. ರಾತ್ರಿ ಮೂರು ಗಂಟೆ ಸುಮಾರು ಏಕಾಏಕಿ ನುಗ್ಗಿದ ನೀರಿನ ರಭಸಕ್ಕೆ ಮನೆ ಪೂರ್ಣ ಮುಳುಗಿಹೋಗಿದೆ. ಎಚ್ಚರಗೊಂಡ ಕಾರ್ಮಿಕನೊಬ್ಬ ನೀರನ್ನು ಕಂಡು ಗಾಬರಿಯಿಂದ ಕುಟುಂಬ ಸಮೇತ ಹೊರಗೆ ಓಡಿ ಬಂದಿದ್ದಾನೆ.
ಘಟನೆಯಿAದ ಸಣ್ಣಪುಟ್ಟ ವಡವೆಗಳು ಕೊಚ್ಚಿಹೋಗಿದ್ದು, ಮನೆಯ ಎಲ್ಲ ಸಾಮಾನುಗಳು ನೀರಿನಲ್ಲಿ ಕೊಚ್ಚಿಹೋಗಿವೆ. ಕಾರ್ಮಿಕರಿಗೆ ಪರ್ಯಾಯ ವ್ಯವಸ್ಥೆ ಕಲ್ಪಿಸಲು ಮನವಿ ಮಾಡಲಾಗಿದ್ದು, ಪ್ರಣಾಪಾಯದಿಂದ ಬಚಾವಾದ ಕಾರ್ಮಿಕರು ನಿಟ್ಟುಸಿರು ಬಿಟ್ಟಿದ್ದಾರೆ.

