ಬೆಂಗಳೂರು: ಪತಿ ಪತ್ನಿಯ ನಡುವೆ ಶುರುವಾದ ಕೌಟುಂಬಿಕ ಕಲಹ ವಿಕೋಪಕ್ಕೆ ತಿರುಗಿ ಪತಿ ತನ್ನ ಪತ್ನಿಯನ್ನೆ ಪೆಟ್ರೋಲ್ ಸುರಿದು ವೆಂಕಿಹಚ್ಚಿ ಸುಟ್ಟು ಹಾಕಿರುವ ಘಟನೆ ಡಾಬಸ್ ಪೇಟೆಯಲ್ಲಿ ನಡೆದಿದೆ.
ವರಮಹಾಲಕ್ಷ್ಮೀ ಹಬ್ಬಕ್ಕೆ ಬಟ್ಟೆ ಕೊಡಿಸುವ ಕಾರಣಕ್ಕೆ ಪತಿ ಪತ್ನಿಯ ನಡುವೆ ಜಗಳ ಶುರುವಾಗಿದೆ. ಜಗಳ ವಿಕೋಪಕ್ಕೆ ತಿರುಗಿ ಪತಿ, ಪತ್ನಿಯನ್ನು ಪೆಟ್ರೋಲ್ ಸುರಿದು ಬೆಂಕಿ ಹಚ್ಚಿ ಕೊಲೆ ಮಾಡಿದ್ದಾನೆ.
ಕಾವ್ಯಾ ಎಂಬ ಗೃಹಿಣಿ 6 ವರ್ಷದ ಹಿಂದೆ ಶಿವಾನಂದ ಎಂಬಾತನನ್ನು ಮದುವೆ ಆಗಿದ್ದಳು. ಅವರಿಗೆ ಇಬ್ಬರು ಮಕ್ಕಳಿದ್ದು, ಶಿವಾನಂದ ಖಾಸಗಿ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದ. ಆದರೆ, ಆರು ತಿಂಗಳ ಹಿಂದೆ ಅನಾರೋಗ್ಯದ ಕಾರಣ ಕೆಲಸ ಬಿಟ್ಟಿದ್ದ.
ಈ ಹಿಂದೆಯೂ ಜಗಳ ಮಾಡಿಕೊಂಡು ತವರಿಗೆ ತೆರಳಿದ್ದ ಪತ್ನಿ ವಾರದ ಹಿಂದೆ ವಾಪಸ್ ಬಂದಿದ್ದರು. ವರಮಹಾಲಕ್ಷ್ಮಿ ಹಬ್ಬಕ್ಕೆ ಬಟ್ಟೆ ಕೊಡಿಸುವಂತೆ ಪತಿಗೆ ಬೇಡಿಕೆಯಿಟ್ಟಿದ್ದಳು. ಬಟ್ಟೆಕೊಡಿಸದಿದ್ದರೆ ತವರಿಗೆ ತೆರಳುವ ಬೆದರಿಕೆ ಹಾಕಿದ್ದರು ಎನ್ನಲಾಗಿದೆ.
ಇದರಿಂದ ಶುರುವಾದ ಜಗಳ ಕೊನೆಗೆ ಪತ್ನಿಯ ಕೊಲೆಯಲ್ಲಿ ಅಂತ್ಯವಾಗಿದ್ದು, ಶವವನ್ನು ಪೆಟ್ರೋಲ್ ಸುರಿದು ಬೆಂಕಿ ಸುಟ್ಟುಹಾಕಿ,ಅನಂತರ ಅತ ಪರಾರಿಯಾಗಿದ್ದ. ರಮ್ಯಾ ಸಹೋದರಿ ಕರೆ ಮಾಡಿ, ಸ್ವೀಕರಿಸದಿದ್ದಾಗ ಅನುಮಾನಗೊಂಡು ಮನೆಗೆ ಬಂದು ನೋಡಿದಾಗ ಕೊಲೆ ನಡೆದಿರುವುದು ಬೆಳಕಿಗೆ ಬಂದಿದೆ.
ಕರೆ ಸ್ವೀಕರಿಸದೆ ಪರಾರಿಯಾಗಿದ್ದ ಆರೋಪಿಯನ್ನು ದಾಬಸ್ ಪೇಟೆ ಪೊಲೀಸರು ಬಂಧಿಸಿದ್ದು, ನೆಲಮಂಗಲ ಡಿವೈಎಸ್ ಪಿ ಜಗದೀಶ್ ನೇತೃತ್ವದಲ್ಲಿ ತನಿಖೆ ನಡೆಯುತ್ತಿದ್ದು, ಆರೋಪಿಯ ಜತೆಗೆ ತಜ್ಞರ ತಂಡವನ್ನು ಕರೆತಂದು ಪರಿಶೀಲನೆ ನಡೆಸಿದ್ದಾರೆ.

