ಬೆಂಗಳೂರು: ಈ ವಾರದ ಎಲಿಮಿನೇಷನ್ ಪ್ರಕ್ರಿಯೆ ಮುಗಿದಿದ್ದು, ನಟಿ ಐಶ್ವರ್ಯಾ ಸಿಂಧೋಗಿ ಮನೆಯಿಂದ ಹೊರಬಂದಿದ್ದಾರೆ. ಇದೀಗ ಅವರು ಸುದೀಪ್ ಮುಂದೆ ದೊಡ್ಡ ಬೇಡಿಕೆಯೊಂದನ್ನಿಟ್ಟಿದ್ದು, ಕಿಚ್ಚ ಎಸ್ ಎಂದಿದ್ದಾರೆ.
ಮನೆಯಿಂದ ಹೊರಬಂದ ಐಶ್ವರ್ಯ, ತಮ್ಮ ಜರ್ನಿ ವಿಡಿಯೋ ನೋಡಿ ಬಹಳ ಖುಷಿಪಟ್ಟರು. ಸುದೀಪ್ ಅವರು ಐಶ್ವರ್ಯ ಅವರ ಮುಂದಿನ ಜೀವನಕ್ಕೆ ಶುಭಾಶಯ ಕೋರಿದ ನಂತರ ಭವಿಷ್ಯದ ಆಸೆಯ ಬಗ್ಗೆ ಕೇಳಿದರು. ಆಗ ಸುದೀಪ್ ಜತೆ ಸಿನಿಮಾ ಮಾಡುವ ಆಸೆಯನ್ನು ಹೊರಹಾಕಿದ್ದಾರೆ.
ಸರ್, ನಿಮ್ಮ ಜತೆ ಸಿನಿಮಾ ಮಾಡಬೇಕು ಎಂಬುದು ನನ್ನ ಬದುಕಿನ ಆಸೆ. ನೀವು ಮನಸ್ಸು ಮಾಡಿದ್ರೆ ಯಾವುದೇ ಪಾತ್ರವಾದರೂ ಸರಿ, ನಾನು ಮಾಡ್ತೇನೆ ಎಂದು ಮನವಿ ಮಾಡಿಕೊಂಡರು. ಇದಕ್ಕೆ ಕಿಚ್ಚ ನಗುತ್ತಲೇ ಎಸ್ ಎಂದುಬಿಟ್ಟರು. ಇದು ಐಶ್ವರ್ಯ ಖುಷಿಗೆ ಕಾರಣಾಯ್ತು ಎನ್ನಬಹುದು.
ಈ ನಡುವೆ ಐಶ್ವರ್ಯ, ತಂದೆ ತಾಯಿ ಕಳೆದುಕೊಂಡಿರುವ ಹುಡುಗಿ ಎಂಬ ಕಾರಣಕ್ಕೆ ಬಿಗ್ ಬಾಸ್ ಮನೆಯಲ್ಲಿ ಅನುಕಂಪ ಗಿಟ್ಟಿಸಿಕೊಂಡಿದ್ದರು. ವೀಕ್ಷಕರಲ್ಲಿಯೂ ಆಕೆಯ ಬಗ್ಗೆ ಅಂತಹದ್ದೇ ಒಂದು ಅಭಿಮಾನವಿತ್ತು. ಬಿಗ್ ಬಾಸ್ ತಂಡ ಕೂಡ ಅಂತಹದ್ದೇ ಒಂದು ಭರವಸೆಯನ್ನು ಐಶ್ವರ್ಯ ಗೆ ನೀಡಿ ಕಳಿಸಿದ್ದಾರೆ.