ಭಾರತೀಯ ಪ್ರತಿಷ್ಠಿತ ಕಂಪನಿಗಳಲ್ಲಿ ಒಂದಾದ ಬಿಇಎಲ್ ಕಂಪನಿಯು ತಾಂತ್ರಿಕ ಪದವಿಯನ್ನು ಮುಗಿಸಿರುವ ಅಭ್ಯರ್ಥಿಗಳನ್ನು ನೇಮಕ ಮಾಡಿಕೊಳ್ಳಲು ಮುಂದಾಗಿದೆ. ಈಗಾಗಲೇ ಅರ್ಜಿ ಸಲ್ಲಿಕೆಯು ಆರಂಭವಾಗಿದ್ದು ಅಭ್ಯರ್ಥಿಗಳು ಆನ್ಲೈನ್ ಮೂಲಕ ಅರ್ಜಿಯನ್ನು ಸಲ್ಲಿಸಬೇಕಾಗಿದೆ. ಅಷ್ಟಕ್ಕೂ ಅವಶ್ಯಕ ದಾಖಲೆಗಳು ಮತ್ತು ಅರ್ಹತೆಗಳೇನು ಎಂಬುದನ್ನ ನೋಡೋಣ ಬನ್ನಿ.
ಒಟ್ಟು 300 ಹುದ್ದೆಗಳಿಗೆ ಅರ್ಜಿಯನ್ನು ಕರೆದಿರುವ ಬಿಇಎಲ್ ಕಂಪನಿಯು ಅಭ್ಯರ್ಥಿಗಳನ್ನು ಪರೀಕ್ಷೆ ನಡೆಸುವ ಮೂಲಕ ಹಾಗೂ ನೇರವಾಗಿ ಸಂದರ್ಶನವನ್ನು ನಡೆಸುವ ಮೂಲಕ ಆಯ್ಕೆ ಮಾಡಲಾಗುತ್ತದೆ. ಅಭ್ಯರ್ಥಿಗಳು ವಿಜ್ಞಾನ ವಿಭಾಗದಲ್ಲಿ ಪದವಿಯನ್ನು ಮುಗಿಸಿದ್ದರೆ ಸಾಕು. ಸಾಮಾನ್ಯವಾಗಿ ಅಭ್ಯರ್ಥಿಗೆ ಸರ್ಕಾರದ ಎಲ್ಲ ಸೌಕರ್ಯಗಳು ದೊರೆಯುತ್ತವೆ.
ಹುದ್ದೆಗಳನ್ನು ವರ್ಗದ ಆಧಾರದ ಮೇಲೆ ವರ್ಗೀಕರಣ ಮಾಡಲಾಗಿದೆ. ಸಾಮಾನ್ಯ 143 ಹುದ್ದೆಗಳು, ಇಡಬ್ಲುಎಸ್ 35, ಒಬಿಸಿ 94 ಹುದ್ದೆಗಳು, ಎಸ್ ಟಿ 26 ಹಾಗೂ ಎಸ್ ಸಿ 52 ಹುದ್ದೆಗಳು ಮೀಸಲಿವೆ.
ಹುದ್ದೆಗಳು ಮತ್ತು ಆಯ್ಕೆ ಪ್ರಕ್ರಿಯೆ : ಪ್ರೊಬೇಷನರಿ ಇಂಜಿನಿಯರ್,ಪ್ರೊಬೇಷನರಿ ಇಂಜಿನಿಯರ್ (ಎಲೆಕ್ಟ್ರಾನಿಕ್ಸ್),ಪ್ರೊಬೇಷನರಿ ಇಂಜಿನಿಯರ್ (ಮೆಕನಿಕಲ್) ಅಭ್ಯರ್ಥಿಗಳನ್ನು ಕಂಪ್ಯೂಟರ್ ಜ್ಞಾನದ ಮೇಲೆ ಹಾಗೂ ಸಂದರ್ಶನ ಹಾಗೂ ವೈದ್ಯಕೀಯ ಪರೀಕ್ಷೆಯನ್ನು ನಡೆಸಿ ಆಯ್ಕೆ ಮಾಡಲಾಗುವುದು.
ವೇತನ ಮತ್ತು ಅರ್ಹತೆ : ಆಯ್ಕೆಯಾದ ಅಭ್ಯರ್ಥಿಗಳಿಗೆ ಮಾಸಿಕವಾಗಿ 40,000- 1,40,000 ಬಿಇ, ಬಿಟೆಕ್, ಬಿಎಸ್ಸಿ, (ಎಲೆಕ್ಟ್ರಾನಿಕ್ಸ್ ಆ್ಯಂಡ್ ಕಮ್ಯುನಿಕೇಶನ್, ಮೆಕನಿಕಲ್) ಅರ್ಜಿಯನ್ನು ಸಲ್ಲಿಸಲು ಈ ತಿಂಗಳು 31 ಅಂತಿಮ ದಿನವಾಗಿದೆ.
ಅರ್ಜಿ ಶುಲ್ಕ : ಸಾಮಾನ್ಯ (ಯುಆರ್), ಇಡಬ್ಲುಎಸ್, ಒಬಿಸಿ ಅಭ್ಯರ್ಥಿಗಳು- ಜಿಎಸ್ಟಿ ಸೇರಿ 1180 ರೂಪಾಯಿ. ಎಸ್ಸಿ, ಎಸ್ಟಿ, ವಿಶೇಷ ಚೇತನರು, ಮಾಜಿ ಸೈನಿಕರಿಗೆ ಯಾವುದೇ ಶುಲ್ಕ ಇರುವುದಿಲ್ಲ.