ಸಿ.ಪಿ.ಯೋಗೇಶ್ವರ್ ನಿರ್ಧಾರದ ಹಿಂದಿದೆ ಅಭಿವೃದ್ಧಿ ಅಜೆಂಡಾ?
ಬೆಂಗಳೂರು: ಬಿಜೆಪಿ ಟಿಕೆಟ್ ಸಿಗದೆ ಚನ್ನಪಟ್ಟಣದ ಬಿಜೆಪಿ ನಾಯಕ ಸಿ.ಪಿ.ಯೋಗೇಶ್ವರ್ ಕಾಂಗ್ರೆಸ್ ಕದ ತಟ್ಟಿದ್ದಾರೆ. ಇಷ್ಟಕ್ಕೂ ಅವರು ಜೆಡಿಎಸ್ನಿಂದ ಸ್ಪರ್ಧೆಯ ಆಫರ್ ಇದ್ದರೂ, ಕಾಂಗ್ರೆಸ್ ಸೇರಿದ್ದೇಕೆ ಎಂಬುದೀಗ ಚರ್ಚೆಗೆ ಕಾರಣವಾಗಿದೆ.
ಮೈತ್ರಿ ಧರ್ಮದ ಪಾಲನೆಗೆ ಮುಂದಾದ ರಾಜ್ಯ ಬಿಜೆಪಿ ಚನ್ನಪಟ್ಟಣವನ್ನು ಜೆಡಿಎಸ್ಗೆ ಬಿಟ್ಟಿಕೊಡಲು ತೀರ್ಮಾನಿಸಿತ್ತು. ಆದರೆ, ಚನ್ನಪಟ್ಟಣ ಕ್ಷೇತ್ರದ ಟಿಕೆಟ್ ಮೇಲೆ ಕಣ್ಣಿಟ್ಟಿದ್ದ ಸಿ.ಪಿ.ಯೋಗೇಶ್ವರ್, ಬಿಜೆಪಿ ಟಿಕೆಟ್ಗಾಗಿ ಒತ್ತಡ ಹಾಕಲು ಶುರು ಮಾಡಿದ್ದರು. ಆದರೆ, ಜೆಡಿಎಸ್ ಯಾವುದೇ ಕಾರಣಕ್ಕೂ ಚನ್ನಪಟ್ಟಣ ಕ್ಷೇತ್ರವನ್ನು ಬಿಜೆಪಿಗೆ ಬಿಟ್ಟುಕೊಡಲು ಸಿದ್ದವಿರಲಿಲ್ಲ. ಹೀಗಾಗಿ, ಯೋಗೇಶ್ವರ್ಗೆ ಹಿನ್ನಡೆಯಾಗಿದೆ ಎನ್ನಬಹುದು.
ಎನ್ಡಿಎ ಮೈತ್ರಿ ಪಕ್ಷಗಳಾದ ಬಿಜೆಪಿ ಮತ್ತು ಜೆಡಿಎಸ್ ಹೊಂದಾಣಿಕೆಯ ಮೂಲಕ ಸೀಟು ಹಂಚಿಕೆ ಮಾಡಿಕೊಂಡಿದ್ದು, ಸಂಡೂರು ಮತ್ತು ಶಿಗ್ಗಾವಿ ಕ್ಷೇತ್ರಗಳಲ್ಲಿ ಬಿಜೆಪಿಗೆ ಟಿಕೆಟ್ ಕೊಡಲಾಗಿದೆ. ಚನ್ನಪಟ್ಟಣ ಕ್ಷೇತ್ರದಲ್ಲಿ ಜೆಡಿಎಸ್ ಸ್ಪರ್ಧೆ ಮಾಡಲು ತೀರ್ಮಾನಿಸಿದೆ. ಆದರೆ, ಯೋಗೇಶ್ವರ್ ಪಟ್ಟುಹಿಡಿದು, ಬಿಜೆಪಿ ಟಿಕೆಟ್ಗಾಗಿ ಲಾಭಿ ನಡೆಸಿದ್ದರು. ಆದರೆ, ಆ ಲಾಭಿ ಯಾವುದೇ ಪ್ರಯೋಜನಕ್ಕೆ ಬರಲಿಲ್ಲ.
ಈ ನಡುವೆ ಜೆಡಿಎಸ್ಗೆ ಹಿನ್ನಡೆಯಾಗುವ ಕಾರಣದಿಂದ ಎಚ್.ಡಿ.ಕುಮಾರಸ್ವಾಮಿ, ಜೆಡಿಎಸ್ನಿಂದಲೇ ಸ್ಪರ್ಧೆ ಮಾಡುವಂತೆ ಯೋಗೇಶ್ವರ್ಗೆ ಆಫರ್ ನೀಡಿದ್ದರು ಎನ್ನುತ್ತಿವೆ ಮೂಲಗಳು. ಆದರೆ, ಜೆಡಿಎಸ್ ಆಫರ್ ತಿರಸ್ಕರಿಸಿದ್ದ ಯೋಗೇಶ್ವರ್ ಇದೀಗ ಅಧಿಕೃತವಾಗಿ ಕಾಂಗ್ರೆಸ್ ಸೇರ್ಪಡೆಯಾಗಿದ್ದು, ಚನ್ನಪಟ್ಟಣದ ಕಾಂಗ್ರೆಸ್ನ ಅಧಿಕೃತ ಅಭ್ಯರ್ಥಿಯಾಗಿ ಘೋಷಣೆಯಾಗಿದ್ದಾರೆ.
ಇಷ್ಟಕ್ಕೂ ಯೋಗೇಶ್ವರ್ ಅವರ ಈ ನಿರ್ಧಾರದ ಹಿಂದಿರುವ ರಹಸ್ಯವೇನು ಎಂಬುದನ್ನು ನೋಡಿದರೆ, ವಿಧಾನ ಪರಿಷತ್ ಸದಸ್ಯರಾಗಿ ಇನ್ನೂ ಮೂರು ವರ್ಷದ ಅವಧಿ ಹೊಂದಿದ್ದ ಯೋಗೇಶ್ವರ್ ಗೆ ಬಿಜೆಪಿ ಟಿಕೆಟ್ ಕೊಡುವುದಿಲ್ಲ ಎಂಬುದು ಮೊದಲೇ ಗೊತ್ತಿತ್ತು. ಚನ್ನಪಟ್ಟಣದಿಂದ ಕುಮಾರಸ್ವಾಮಿ ಅವರನ್ನು ಹೊರಗಟ್ಟಬೇಕು ಎಂಬ ಡಿಕೆ ಬ್ರರ್ಸ್ ಕನಸು ನನಸಾಗಲು ಯಾರೂದರೂ ಬೇಕಿತ್ತು. ಯೋಗೇಶ್ವರ್ ಗೂ ಇಂತಹದ್ದೇ ಪರಿಸ್ಥಿತಿ ನಿರ್ಮಾಣವಾಗಬೇಕಿತ್ತು. ಹೀಗಾಗಿ, ಎಲ್ಲವೂ ಅಂದುಕೊAಡAತೆಯೇ ನಡೆದಿದೆ ಎನ್ನಬಹುದು.
ಬಿಜೆಪಿಯಲ್ಲಿ ಯೋಗೇಶ್ವರ್ ಅವರನ್ನು ಈಗಾಗಲೇ ವಿಧಾನ ಪರಿಷತ್ ಸದಸ್ಯರನ್ನಾಗಿ ಮಾಡಿ ಮೂಲೆ ಗುಂಪು ಮಾಡಿದ್ದಾರೆ. ಎರಡು ವರ್ಷ ಎಮ್ಮೆಲ್ಸಿಯಿಂದ ಪ್ರಯೋಜನ ಏನಿಲ್ಲ. ಅದರ ಬದಲು ಆಡಳಿತಾರೂಢ ಕಾಂಗ್ರೆಸ್ ಸೇರಿದಂತೆ ಗೆಲುವು ಸುಲಭವಾಗಲಿದೆ. ಜತೆಗೆ, ಕುಮಾರಸ್ವಾಮಿ ವಿರುದ್ಧ ಸೇಡು ತೀರಿಸಿಕೊಂಡAತೆಯೂ ಆಗಲಿದೆ. ಕಾಂಗ್ರೆಸ್ ಇನ್ನೂ ನಾಲ್ಕು ವರ್ಷಗಳ ಕಾಲ ರಾಜ್ಯದಲ್ಲಿ ಆಡಳಿತದಲ್ಲಿದ್ದರೂ, ಡಿಕೆ ಶಿವಕುಮಾರ್ ತಮ್ಮ ಪ್ರತಿಷ್ಠೆಗಾದರೂ ಚೆನ್ನಪಟ್ಟಣದ ಅಭಿವೃದ್ಧಿಗೆ ಕೆಲಸ ಮಾಡಲಿದ್ದಾರೆ. ಇದು ಮುಂದೆ ಯೋಗೇಶ್ವರ್ ಗೆ ಅನುಕೂವಾಗಲಿದೆ. ಈ ಹಿನ್ನೆಲೆಯಲ್ಲಿಯೇ ಅವರು ಕಾಂಗ್ರೆಸ್ ಆಯ್ಕೆ ಮಾಡಿಕೊಂಡಿದ್ದಾರೆ.

