ಹಾಸನ: ಮೇಕೆಗಳನ್ನು ಕದಿಯುವ ಸಲುವಾಗಿ ವ್ಯಕ್ತಿಯೊಬ್ಬನನ್ನು ಕೊಲೆ ಮಾಡಿದ್ದ ಆರೋಪಿಯನ್ನು ಅರಸೀಕರೆ ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಅರಸೀಕರೆ ಪೊಲೀಸ್ ಠಾಣೆ ವ್ಯಾಪ್ತಿಯ ಮೇಕೆಗಳನ್ನು ಕದಿಯುವ ಸಲುವಾಗಿ ನರಸಿಂಹಪ್ಪ ಎಂಬುವವರನ್ನು ಆರೋಪಿ ಕೊಲೆ ಮಾಡಿದ್ದಾರೆ. ಆರೋಪಿಯನ್ನು ಅದೇ ಗ್ರಾಮದ ಮಣಿಕಂಠ ಎಂದು ಗುರುತಿಸಲಾಗಿದ್ದು, ಕೊಲೆಯ ನಂತರ ಶವವನ್ನು ಅರಣ್ಯ ಪ್ರದೇಶದಲ್ಲಿ ಸುಟ್ಟು ಹಾಕಿದ್ದ ಎನ್ನಲಾಗಿದೆ.
ಅನಂತರ ಕದ್ದ ಮೇಕೆಗಳನ್ನು ಸಂತೆಯಲ್ಲಿ ಮಾರಾಟ ಮಾಡಲು ಮುಂದಾಗಿದ್ದ ಈ ವೇಳೆ ಮೇಕೆಗಳನ್ನು ಗುರುತಿಸಿದ ಕೊಲೆಯಾದ ನರಸಿಂಹಪ್ಪನ ಪುತ್ರ, ಆರೋಪಿಯನ್ನು ಪೊಲೀಸರಿಗೆ ಒಪ್ಪಿಸಿದ್ದಾರೆ. ಆತನನ್ನು ಬಂಧಿಸಿರುವ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದಾರೆ.