ಮಂಗಳ ಮುಖಿಯರ ಅಟ್ಟಹಾಸ: ಬಟ್ಟೆ ಅಂಗಡಿಗೆ ನುಗ್ಗಿ ಗಲಾಟೆ
ಬೆಂಗಳೂರು: ಹೊಸ ಬಟ್ಟೆ ಅಂಗಡಿ ಉದ್ಘಾಟನೆ ವೇಳೆ ಹಣ ನೀಡುವಂತೆ ಡಿಮ್ಯಾಂಡ್ ಮಾಡಿದ ಮಂಗಳಮುಖಿಯರು ಮಾಲೀಕರ ಜತೆಗೆ ಕಿರಿಕ್ ಮಾಡಿಕೊಂಡಿರುವ ಘಟನೆ ವಿಜಯನಗರದಲ್ಲಿ ನಡೆದಿದೆ.
ಬಟ್ಟೆ ಅಂಗಡಿಯ ಪೂಜೆ ಸಮಯಕ್ಕೆ ಆಗಮಿಸಿ ೧೦ ಸಾವಿರ ಹಣಕ್ಕೆ ಡಿಮ್ಯಾಂಡ್ ಮಾಡಿದರು. ಮಾಲೀಕರು ೨ ಸಾವಿರ ನೀಡಿ ಕಳುಹಿಸಲು ಮುಂದಾದರೂ, ಒಪ್ಪದ ಮಂಗಳಮುಖಿಯರ ಗುಂಪು ಮಾಲೀಕರು ಸೇರಿದಂತೆ ಅವರ ಕುಟುಂಬಸ್ಥರ ಮೇಲೆ ದಾಳಿ ನಡೆಸಿದೆ ಎನ್ನಲಾಗಿದೆ.
ಮಂಗಳಮುಖೀಯರ ಅಟ್ಟಹಾಸದ ವಿಡಿಯೋ ಇದೀಗ ವೈರಲ್ ಆಗಿದ್ದು, ಈ ಸಂಬAಧ ದೂರು ನೀಡಲಾಗಿದೆ.