ವಿರಾಟ್ ಕೊಹ್ಲಿ ಜಗತ್ತು ಕಂಡ ಶ್ರೇಷ್ಠ ಆಟಗಾರ ಐಪಿಎಲ್ ಶುರುವಾದ 2008 ರಿಂದಲೂ ಈಗಿನ ವರೆಗೂ ರಾಯಲ್ ಚಾಲೆಂಜರ್ಸ್ ಬೆಂಗಳೂರು ಪರ ಬಿಟ್ಟರೆ ಇನ್ನು ಯಾವ ತಂದಕ್ಕೂ ಆಡಿಲ್ಲ. ಈಗ ಮುಗಿದಿರುವ 16 ಸೀಸನ್ ಗಳಲ್ಲಿಯೂ ಆರ್ ಸಿಬಿ ಗೆ ತನ್ನದೇ ಆದಂಥಹ ಕೊಡುಗೆ ನೀಡಿದ್ದಾರೆ.
ಈ ಸಮಯದಲ್ಲಿ ಮಾತನಾಡಿರುವ ಹರಾಜುಗಾರ ಹ್ಯೂ ಎಡ್ಮೀಡ್ಸ್, ರಾಟ್ ಕೊಹ್ಲಿ ಏನಾದರೂ ಆರ್ ಸಿಬಿ ಬಿಟ್ಟು ಮುಂಬರುವ 2025ರ ಮೆಗಾ ಹರಾಜಿನಲ್ಲಿ ಕಾಣಿಸಿಕೊಂಡರೆ ಅವರಗೆ ಬರೋಬ್ಬರಿ 30 ಕೋಟಿ ಕೊಟ್ಟು ಖರೀದಿಸುತ್ತೇವೆ ಎಂದು ತಮ್ಮ ಸಾಮಾಜಿಕ ಜಾಲತಾಣದ ಖಾತೆಯೊಂದರಲ್ಲಿ ಬರೆದುಕೊಂಡಿದ್ದಾರೆ.
ಕಳೆದ 16 ಅವೃತ್ತಿಗಳಲ್ಲಿಯೂ ಆರ್ ಸಿಬಿ ಪರ ವಿರಾಟ್ ಕೊಹ್ಲಿ ಸುಮಾರು 250 ಪಂದ್ಯಗಳನ್ನು ಆಡಿದ್ದು, ಸರಾಸರಿ 38 ರಲ್ಲಿ 8 ಸಾವಿರಕ್ಕೂ ಹೆಚ್ಚು ರನ್ ಗಳನ್ನು ಕಲೆ ಹಾಕಿದ್ದಾರೆ. ಇದರಲ್ಲಿ ಒಟ್ಟು 8 ಶತಕಗಳು ಮತ್ತು 55 ಅರ್ಧ ಶತಕಗಳು ಸೇರಿವೆ. ಒಂದೇ ತಂಡಕ್ಕೆ ಇಷ್ಟು ಪಂದ್ಯಗಳನ್ನು ಆಡಿರುವ ಆಟಗಾರ ಯಾರಾದರೂ ಇದ್ದಾರೆ ಅದು ವಿರಾಟ್ ಕೊಹ್ಲಿ ಮಾತ್ರ.
ಆರ್ ಸಿಬಿ ಬಿಟ್ಟು ಇನ್ನು ಯಾವುದೇ ತಂಡದ ಪರವಾಗಿ ಐಪಿಎಲ್ ನಲ್ಲಿ ಆಡುವುದಿಲ್ಲ. ನಾನು ನಿವೃತ್ತಿಗೊಳ್ಳುವವರೆಗೂ ಸಹ ಆರ್ ಸಿಬಿಯಲ್ಲೇ ಉಳಿದುಕೊಳ್ಳುತ್ತೇನೆ, ನನ್ನ ಕೊನೆಯ ಪಂದ್ಯ ಅದು ಆರ್ ಸಿಬಿ ಪರವಾಗಿಯೇ ಇರುತ್ತದೆ ಎಂದು ಸ್ವತ್ಹ ವಿರಾಟ್ ಕೊಹ್ಲಿಯವರೇ ಹಲವಾರು ಸಂದರ್ಶನಗಳಲ್ಲಿ ಹೇಳಿಕೊಂಡಿರುವುದರಿಂದ ಕೊಹ್ಲಿ ಯಾವುದೇ ಕಾರಣಕ್ಕೂ ಹರಾಜಿಗೆ ಬರುವುದಿಲ್ಲ ಎಂದು ಹೇಳಬಹುದು.