ಫ್ಲೈಓವರ್​​ನಿಂದ ಕೆಳಗೆ ಬಿದ್ದ ಕಾರು: ತಮಿಳುನಾಡ ಮೂಲದ ಓರ್ವ ಸಾವು

Share It

ಬೆಂಗಳೂರು : ಇಂದು ಮುಂಜಾನೆ ಯಶವಂತಪುರ ಸರ್ಕಲ್​ನಲ್ಲಿ ಕಾರು ಬೈಕ್​ಗೆ ಡಿಕ್ಕಿಯಾಗಿ ಕಾರು ಮೆಲ್ಸೆತುವೆಯಿಂದ ಬಿದ್ದು ಗಂಭೀರ ಗಾಯಗೊಂಡಿದ್ದವರಲ್ಲಿ ಓರ್ವ ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ. ಶಬರೀಶ್​(29) ಮೃತ ದುರ್ದೈವಿ.

ಮೃತ ಶಬರೀಶ್​​ ತಮಿಳುನಾಡಿನ ಸೇಲಂ ಮೂಲದ ನಿವಾಸಿ. ಈತ ವೀಸಾ ಪಡೆಯಲು ಸೋಮವಾರ ಸ್ನೇಹಿತ ಮಿಥುನ್​​ ಜೊತೆ ಬೆಂಗಳೂರಿಗೆ ಬಂದಿದ್ದ. ಇದೇ ವೇಳೆ ಬೆಂಗಳೂರಲ್ಲಿ ವಾಸವಿದ್ದ ಶಂಕರ್ ಮತ್ತು ಆತನ ಸೋದರಿ ಅನುಶ್ರೀ ಇಬ್ಬರನ್ನೂ ಭೇಟಿ ಮಾಡಿದ್ದ.

ನಾಲ್ವರು ಸ್ನೇಹಿತರು ಸೇರಿಕೊಂಡು ಊಟಕ್ಕೆಂದು ಕಾರಿನಲ್ಲಿ ತುಮಕೂರು ರಸ್ತೆ ಕಡೆ ಬರುತ್ತಿದ್ದ ವೇಳೆ ಯಶವಂತಪುರ ಸರ್ಕಲ್​ ಫ್ಲೈಓವರ್​​ ಮೇಲೆ ಕಾರು ಅಪಘಾತವಾಗಿದೆ.

ಉಳಿದ ಶಂಕರ್ ರಾಮ್ (29), ಅನುಶ್ರೀ(23), ಮಿಥುನ್ (28) ಹಾಗೂ ಬೈಕ್ ನಲ್ಲಿದ್ದ ವ್ಯಕ್ತಿ ಮಂಜುನಾಥ್ (38)ಗೆ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.


Share It

You May Have Missed

You cannot copy content of this page