ರಾಣಿ ಪೇಟೆ: ಬೀದಿ ನಾಯಿಗಳ ದಾಳಿಗೆ 4 ವರ್ಷದ ಬಾಲಕ ತುತ್ತಾದ ಹಿನ್ನೆಲೆಯಲ್ಲಿ ಬಾಲಕ ರೇಬಿಸ್ ನಿಂದ ಸಾವನ್ನಪ್ಪಿರುವ ಘಟನೆ ಅರಕ್ಕೋಣಂ ನಲ್ಲಿ ನಡೆದಿದೆ.
ಮೃತ ದುರ್ದೈವಿಯ ತಂದೆ ಖಾಸಗಿ ಕಂಪನಿ ಯೊಂದರಲ್ಲಿ ಕೆಲಸ ಮಾಡುತ್ತಿದ್ದು , ಅವರ ಪುತ್ರ ಬಿ. ನಿರ್ಮಲ್ ಎಂಬಾತ ಮನೆಯ ಮುಂದೆ ಗೆಳೆಯರೊಂದಿಗೆ ಆಟವಾಡುತ್ತಿರುವ ಸಮಯದಲ್ಲಿ ನಾಯಿಗಳು ದಾಳಿ ನಡೆಸಿವೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.
ಆಟವಾಡುವ ಸಂದರ್ಭದಲ್ಲಿ ನಿರ್ಮಲ್ ನ ಮುಖಕ್ಕೆ ನಾಯಿಯು ಕಚ್ಚಿದೆ. ಮಗ ಕಿರುಚಿದ್ದು ಕೇಳಿಸಿಕೊಂಡ ಪೋಷಕರು ಹೋರ ಬಂದು ನಾಯಿಯನ್ನು ಓಡಿಸಿದ್ದಾರೆ. ಬಳಿಕ ಆಂಬುಲೆನ್ಸ್ ಗೆ ಫೋನ್ ಮಾಡಿ ಕಾಂಚೀಪುರಂ ಸರ್ಕಾರಿ ಜನರಲ್ ಆಸ್ಪತ್ರೆಗೆ ಪ್ರಥಮ ಚಿಕಿತ್ಸೆಯನ್ನು ಕೊಡಿಸಿದ್ದಾರೆ. ಹೆಚ್ಚಿನ ಚಿಕಿತ್ಸೆಗೆ ಚೆಂಗಪೇಟ್ ಜಿಎಚ್‌ಗೆ ಆಸ್ಪತ್ರೆಗೆ ಸೇರಿಸಿದ್ದರು.
ಬಾಲಕನ ಮುಖಕ್ಕೆ ಪ್ಲಾಸ್ಟಿಕ್ ಸರ್ಜರಿಯನ್ನು ಮಾಡಿ 10 ದಿನಗಳ ನಂತರ ಆಸ್ಪತ್ರೆಯಿಂದ ಮನೆಗೆ ಮರಳಿದರು. ಬಳಿಕ ಬಾಲಕನಲ್ಲಿ ತೀವ್ರ ಜ್ವರ ಕಾಣಿಸಿಕೊಂಡ ರೇಬಿಸ್ ಲಕ್ಷಣಕ್ಕೆ ಮಾರ್ಪಾಡಾಗಿ ಬಾಲಕ ಸಾವನ್ನಪ್ಪಿದ್ದಾನೆ.