ಬೆಂಗಳೂರು: ಪಿಜಿಯೊಂದರ ಊಟದಲ್ಲಿ ಇಲಿ ಪಾಷಾಣ ಬೆರಕೆಯಾಗಿದ್ದು, 50 ಕ್ಕೂ ಹೆಚ್ಚು ವಿದ್ಯಾರ್ಥಿಗಳು ಅಸ್ವಸ್ಥಗೊಂಡಿದ್ದು, ಆಸ್ಪತ್ರೆಗೆ ದಾಖಲಿಸಲಾಗಿದೆ.
ಜ್ಞಾನಭಾರತಿ ಬಡಾವಣೆಯ ಅಮ್ಮ ಆಶ್ರಮದ ಬಳಿಯಿರುವ ಹಾಸ್ಟೆಲ್ ನಲ್ಲಿನ ಊಟಕ್ಕೆ ಇಲಿ ಪಾಷಾಣ ಬೆರಕೆಯಾಗಿತ್ತು. ಇದರಿಂದಾಗಿ ಐವತ್ತು ವಿದ್ಯಾರ್ಥಿಗಳು ಮತ್ತು ಸಿಬ್ಬಂದಿ ಅಸ್ವಸ್ಥಗೊಂಡಿದ್ದರು.
ತಕ್ಷಣವೇ ವಿದ್ಯಾರ್ಥಿಗಳನ್ನು ಆಸ್ಪತ್ರೆಗೆ ದಾಖಲಿಸಿದ್ದು, ಚಿಕಿತ್ಸೆ ಕೊಡಸಲಾಗಿದೆ. ಇರದಲ್ಲಿ ಜಯಾನ್ ವರ್ಗೀಸ್, ದಿಲೀಶ್ ಮತ್ತು ಜೋಮನ್ ಎಂಬ ಮೂವರು ವಿದ್ಯಾರ್ಥಿಗಳ ಪರಿಸ್ಥಿತಿ ಗಂಭೀರವಾಗಿದೆ.
ಘಟನೆಯ ಬಗ್ಗೆ ಜ್ಞಾನಭಾರತಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದ್ದು, ಹಾಸ್ಟೆಲ್ ನೆಲಮಹಡಿಯಲ್ಲಿನ ಇಲಿಗಳ ಕಾಟಕ್ಕೆ ಇಲಿ ಪಾಷಷ ಸಿಂಪಡಿಸಲಾಗಿತ್ತು. ಇಲಿ ಪಾಷಾಣ ಸಿಂಪಡಣೆ ಮಾಡಿದವರ ವಿರುದ್ಧ ಪ್ರಕರಣ ದಾಖಲಿಸಿಕೊಂಡು ವಿಚಾರಣೆ ನಡೆಸಲು ಪೊಲೀಸರು ತೀರ್ಮಾನಿಸಿದ್ದಾರೆ.

