ಫ್ಯಾಷನ್ ಸಿನಿಮಾ

ಮೋಸದಿಂದ ಕ್ಯಾಪ್ಟನ್ ಆದ ಭವ್ಯಾ, ತನ್ನ ಸ್ಥಾನ ಬಿಟ್ಟು ಕೊಡ್ತಾಳಾ ?

Share It

ಬೆಂಗಳೂರು: ಬಿಗ್ ಬಾಸ್ 92 ನೇ ದಿನಕ್ಕೆ ಕಾಲಿಟ್ಟಿದೆ. ಆದರೆ, ಈ ಬಾರಿಯ ಸ್ಪರ್ಧಿಗಳು ತಮ್ಮ ಆಟದಲ್ಲಾಗಲೀ, ತಮ್ಮ ನಡವಳಿಕೆಯಲ್ಲಾಗಲೀ ಸ್ವಲ್ಪವೂ ಸುಧಾರಣೆ ಮಾಡಿಕೊಂಡಿಲ್ಲ. ಅದರಲ್ಲೂ, ಮೋಸದಾಟದ ವಿಚಾರದಲ್ಲಿ ಈ ಬಾರಿಯ ಬಿಗ್ ಬಾಸ್ ಮನೆಮಂದಿ ಎತ್ತಿದ ಕೈ ಎನ್ನಬಹುದು.

ಈ ವಾರದ ಕ್ಯಾಪ್ಟನ್ಸಿ ಟಾಸ್ಕ್ನಲ್ಲಿ ಭವ್ಯಾ ಗೌಡ ಸತತ ಎರಡನೇ ಬಾರಿಗೆ ಕ್ಯಾಪ್ಟನ್ ಆಗಿ ಆಯ್ಕೆಯಾಗಿ, ಬೀಗಿ ಕುಣಿದಾಡಿದರು. ಆದರೆ, ಆಕೆಯ ಆಟದಲ್ಲಿ ಮೋಸ ನಡೆದಿರುವುದು ಇಡೀ ನಾಡಿನ ಜನತೆಗೆ ಗೊತ್ತಾಗಿತ್ತು. ಈ ವಿಷಯ ಎಷ್ಟೋ ಜನ ಸ್ಪರ್ಧಿಗಳಿಗೂ ಗೊತ್ತಿತ್ತು. ಆದರೆ, ಅರ‍್ಯಾರೂ ಬಾಯ್ಬಿಟ್ಟು ಮಾತನಾಡಲಿಲ್ಲ, ಭವ್ಯಾ ಮಾತ್ರ ಕ್ಯಾಪ್ಟನ್ ಕೋಣೆಯಲ್ಲಿ ಮಲಗಿ ಖುಷಿಪಟ್ಟರು.

ವೀಕೆಂಡ್‌ನಲ್ಲಿ ಸುದೀಪ್, ಕ್ಯಾಪ್ಟನ್ಸಿ ಟಾಸ್ಕ್ನಲ್ಲಿ ನಡೆದ ಮೋಸದ ಬಗ್ಗೆ ಮತ್ತು ಅದನ್ನು ಪ್ರಶ್ನಿಸದ ಉಸ್ತುವಾರಿಗಳು ಹಾಗೂ ಸ್ಪರ್ಧಿಗಳ ಬಗ್ಗೆ ಸರಿಯಾಗಿಯೇ ಕ್ಲಾಸ್ ತೆಗೆದುಕೊಂಡರು. ಇದರಿಂದ ಚೈತ್ರಾ, ಮಂಜು ಮತ್ತು ರಜತ್‌ಗೆ ತಮ್ಮ ತಪ್ಪಿನ ಅರಿವಾದರೂ, ಭವ್ಯಾ ಗೌಡ ಮಾತ್ರ ಕಣ್ಣೀರಿಟ್ಟರು. ಆದರೂ, ಮೋಕ್ಷಿತಾ ಇದನ್ನು ಪ್ರಶ್ನೆ ಮಾಡದೆ ಇದ್ದದ್ದೇ ತಪ್ಪು ಎಂಬ ಕಾರಣ ನೀಡಿ, ಆಕೆ ಮನೆಯಲ್ಲಿರಲು ಅರ್ಹಳಲ್ಲ ಎಂಬ ಹೇಳಿಕೆ ನೀಡಿದರು. ಇದು ಮತ್ತಮ್ಮೆ ಕಿಚ್ಚನ ಕೋಪಕ್ಕೆ ಕಾರಣವಾಯ್ತು.

ಅಷ್ಟಕ್ಕೂ ಆಗಿದ್ದೇನು?: ಕ್ಯಾಪ್ಟನ್ಸಿ ಆಟದಲ್ಲಿ ಬಾಲ್ ಬುಟ್ಟಿಗೆ ಎಸೆಯುವ ಮೂಲಕ ಕ್ಯಾಪ್ಟನ್ಸಿ ಓಟದಿಂದ ಕೆಲವರನ್ನು ಹೊರಗಿಡುವ ಪ್ರಯತ್ನ ಮಾಡಬೇಕಿತ್ತು. ಆದರೆ, ತಾವು ಎಸೆಯುವ ಬಾಲ್ ಬಿಗ್ ಬಾಸ್ ಸೂಚಿಸುವ ನಿರ್ದಿಷ್ಟ ಸಂಖ್ಯೆಯ ಗೊಂಚಲಿನಿAದ ಪಡೆಯಬೇಕಿತ್ತು. ಆದರೆ, ಬೇರೆಡೆಯಿಂದ ಬಿದ್ದ ಬಾಲ್ ಎಸೆದು ಭವ್ಯಾ, ಮೋಕ್ಷಿತಾ ಅವರನ್ನು ಮೊದಲನೇ ಸುತ್ತಿನಲ್ಲಿಯೇ ಹೊರಗಿಟ್ಟರು. ಇದನ್ನು ಗಮನಿಸಿದ ರಜತ್ ಕೂಡ ಚಕಾರವೆತ್ತಲಿಲ್ಲ.

ಈ ಟಾಸ್ಕ್ ನಡೆಸಲು ಚೈತ್ರಾ ಕುಂದಾಪುರ ಮತ್ತು ಉಗ್ರಂ ಮಂಜು ಎಂಬ ಘಟಾನುಘಟಿ ಉಸ್ತುವಾರಿಗಳಿದ್ದರೂ, ಭವ್ಯಾ ಗೌಡ ಆಟಕ್ಕೆ ತಡೆ ನೀಡಲಿಲ್ಲ. ತಮಗೆ ಯಾವುದೇ ಕ್ಲಾರಿಟಿ ಇಲ್ಲ ಎಂಬುದಾಗಿ ಜಾರಿಕೊಂಡರು. ಪರಿಣಾಮವಾಗಿ ಭವ್ಯಾ ಗೌಡ ಅಂತಿಮವಾಗಿ ಕ್ಯಾಪ್ಟನ್ಸಿ ಓಟದಲ್ಲಿ ಅಂತಿಮ ಸುತ್ತಿನಲ್ಲಿ ಧನರಾಜ್ ಆಚಾರ್ ವಿರುದ್ಧ ಗೆದ್ದು ಎರಡನೇ ಬಾರಿಗೆ ಕ್ಯಾಪ್ಟನ್ ಆಗಿ ಆಯ್ಕೆಯಾದರು.

ಆದರೆ,ವೀಕೆಂಡ್‌ನಲ್ಲಿ ಈ ಬಗ್ಗೆ ಸುದೀರ್ಘ ಚರ್ಚೆ ನಡೆಸಿದ ಸುದೀಪ್, ಭವ್ಯಾ ಮಾಡಿದ ಮೋಸ, ಅದನ್ನು ನೋಡಿಯೂ ಸುಮ್ಮನಾದ ರಜ ನ ನೈತಿಕತೆ, ಉಸ್ತುವಾರಿಗಳಿಬ್ಬರ ಬದ್ಧತೆ, ಮೋಕ್ಷಿತಾ ಅವರ ಪ್ರಶ್ನಿಸುವ ಗುಣವನ್ನು ಪ್ರಶ್ನೆ ಮಾಡಿದರು. ಈಗ ಭವ್ಯಾ ಗೌಡಗೆ ತಾನು ಗೆದ್ದಿದ್ದೇಕೆ ಎಂಬುದು ಸಂಪೂರ್ಣ ಅರಿವಿಗೆ ಬಂದಿದ್ದರೂ, ಆಕೆಯ ನಡವಳಿಕೆಯಲ್ಲಿ ಯಾವುದೇ ಬದಲಾವಣೆ ಕಂಡಿಲ್ಲ. ಹೀಗಾಗಿ, ಆಕೆ ವೀಕೆಂಡ್ ಎಪಿಸೋಡ್ ನಂತರ ತನ್ನ ಕ್ಯಾಪ್ಟೆನ್ಸಿ ತೊರೆಯುತ್ತಾರಾ? ಅಥವಾ ನೈತಿಕತೆಯನ್ನು ಮರೆತು ಕ್ಯಾಪ್ಟನ್ ಆಗಿಯೇ ಮುಂದುವರಿಯುತ್ತಾರಾ ಎಂಬ ಪ್ರಶ್ನೆ ಬಿಗ್ ಬಾಸ್ ವೀಕ್ಷಕರದ್ದು.


Share It

You cannot copy content of this page