ನವಲಗುಂದ: ನವಲಗುಂದ ಪುರಸಭೆಗೆ ಕಾಂಗ್ರೇಸ್ ಪಕ್ಷದ ಅಧ್ಯಕ್ಷರಾಗಿ ಶಿವಾನಂದ ತಡಸಿ ಉಪಾಧ್ಯರಾಗಿ ಶ್ರೀಮತಿ ಫರೀದಾಬೇಗಂ ಬಬರ್ಚಿ ಆಯ್ಕೆಯಾದರು.
ಇಂದು ನವಲಗುಂದ ಶಾಸಕ ಎನ್.ಹೆಚ್. ಕೋನರಡ್ಡಿ ನೇತ್ರತ್ವದಲ್ಲಿ ಹಾಗೂ ವೀಕ್ಷಕರಾಗಿ ಪ್ರಕಾಶ ಕೋಳಿವಾಡ, ಧಾರವಾಡ ಜಿಲ್ಲಾ ಗ್ರಾಮೀಣ ಅಧ್ಯಕ್ಷ ಅನಿಲಕುಮಾರ ಪಾಟೀಲ, ಧಾರವಾಡ ಜಿಲ್ಲಾ ಯುವ ಕಾಂಗ್ರೇಸ್ ಅಧ್ಯಕ್ಷ ವಿನೋದ ಅಸೂಟಿ, ನವಲಗುಂದ ಬ್ಲಾಕ್ ಕಾಂಗ್ರೇಸ್ ಅಧ್ಯಕ್ಷ ವರ್ದಮಾನಗೌಡ ಹಿರೇಗೌಡ್ರ ಇವರೆಲ್ಲರೂ ಸೇರಿ ಸಭೆಯಲ್ಲಿ ಕಾಂಗ್ರೇಸ್ ಪಕ್ಷದ ಪುರಸಭೆ ಸರ್ವ ಸದಸ್ಯರು ಸಭೆ ಸೇರಿ ಒಮ್ಮತದಿಂದ ಚರ್ಚಿಸಿ ಆಯ್ಕೆ ಮಾಡಲಾಯಿತು.
ನಂತರ ನೂತನ ಅಧ್ಯಕ್ಷ, ಉಪಾಧ್ಯಕ್ಷರಿಗೆ ನವಲಗುಂದ ವಿಧಾನಸಭಾ ಕ್ಷೇತ್ರದ ಶಾಸಕ ಎನ್.ಹೆಚ್. ಕೋನರಡ್ಡಿ, ಸನ್ಮಾನಿಸಿ ಶುಭ ಕೋರಿದರು. ಜೊತೆಗೆ ನವಲಗುಂದ ಅಭಿವೃದ್ಧಿಗಾಗಿ ನನ್ನ ಸಹಾಯ ಮತ್ತು ಸಹಕಾರ ನಿಮ್ಮೊಂದಿಗೆದ್ದು ನವಲಗುಂದ ನಗರವನ್ನು ಮಾದರಿ ನಗರವನ್ನಾಗಿ ಮಾಡಲು ಶ್ರಮಿಸೋಣ ಎಂದರು.
ಈ ಸಂದರ್ಭದಲ್ಲಿ ನವಲಗುಂದ ತಹಶೀಲ್ದಾರ, ಸುಧೀರ ಸಾವಕಾರ, ಪುರಸಭೆ ಮುಖ್ಯಾಧಿಕಾರಿ, ಎಸ್.ಪಿ ಪೂಜಾರ, ನವಲಗುಂದ ಪುರಸಭೆ ಮಾಜಿ ಅಧ್ಯಕ್ಷರ ಜೀವನ ಪವಾರ, ಅಪ್ಪಣ್ಣ ಹಳ್ಳದ, ಮಂಜುನಾಥ ಜಾಧವ, ಮೊದಿನಸಾಬ ಶಿರೂರ, ಚೇರಮನ್ ಮಾಂತೇಶ ಭೋವಿ ಸದಸ್ಯರು ಪ್ರಕಾಶ ಶಿಗ್ಲಿ, ಸುರೇಶ ಮೇಟಿ, ಗಬ್ಬರ ಮಕಾನದಾರ, ಹನಮಂತ ವಾಲಿಕಾರ, ಹುಸೇನಬಿ ಧಾರವಾಡ, ಪದ್ಮಾವತಿ ಪೂಜಾರ, ಖೈರುಣಬಿ ನಾಶಿಪುಡಿ, ಮುದಕವ್ವ ಬೆಂಡಿಗೇರಿ, ಮಂಜುಳಾ ಜಾಧವ, ಅನ್ನಪೂರ್ಣ ಸುಣಗಾರ ಹಾಗೂ ಕಾಂಗ್ರೇಸ್ ಪಕ್ಷದ ಮುಖಂಡರಾದ ಡಿ.ಕೆ. ಹಳ್ಳದ, ಉಸ್ಮಾನ ಬಬರ್ಚಿ, ಸಂತೋಷ ಪಾಟೀಲ, ಆನಂದ ಹವಳಕೋಡ, ಶಿವಾನಂದ ಭಂಡಿವಾಡ, ಯಲ್ಲಪ್ಪ ಗಾಣಿಗೇರ ಹಾಗೂ ಕಾರ್ಯಕರ್ತರು ಉಪಸ್ಥಿತರದ್ದರು.

