ಅಪರಾಧ ಸುದ್ದಿ

ಬಿಬಿಎಂಪಿ ಕೌನ್ಸಿಲ್ ಕಟ್ಟಡ ಹತ್ತಿ ಕುಳಿತ ಮಹಿಳೆ : ಆತ್ಮಹತ್ಯೆ ಹೈಡ್ರಾಮ!

Share It

ಬೆಂಗಳೂರು: ತಾನು ಆತ್ಮಹತ್ಯೆ ಮಾಡಿಕೊಳ್ಳುತ್ತೇನೆಂದು ಬೆದರಿಕೆಯೊಡ್ಡಿ ಬಿಬಿಎಂಪಿ ಮುಖ್ಯಕಚೇರಿಯ ಕಟ್ಟಡ ಹತ್ತಿ ನಿಂತಿರುವ ಮಹಿಳೆ ಹೈಡ್ರಾಮ ಮಾಡಿದ ಪ್ರಸಂಗ ಬೆಂಗಳೂರಿನ ಬಿಬಿಎಂಪಿ ಕಚೇರಿ ಬಳಿ ನಡೆದಿದೆ.

ಈ ರೀತಿ ಆತ್ಮಹತ್ಯೆ ಬೆದರಿಕೆ ಒಡ್ಡಿದ ಮಹಿಳೆಯನ್ನು ನಗರದ ವಿಜಯನಗರ ನಿವಾಸಿ ಉಮಾ ಎಂದು ಗುರುತಿಸಲಾಗಿದೆ. ತನಗೆ ಆಪರೇಷನ್ ಆಗಿದೆ, ಅದಕ್ಕಾಗಿ ಸಹಾಯ ಧನಕ್ಕಾಗಿ ಹಲವು ದಿನಗಳಿಂದ ಬಿಬಿಎಂಪಿ ಕಚೇರಿಗೆ ಅಲೆದಾಡಿದರೂ ಪಾಲಿಕೆ ಅಧಿಕಾರಿಗಳಿಂದ ಯಾವುದೇ ಪ್ರತಿಕ್ರಿಯೆ ಬಂದಿಲ್ಲ. ಆದ್ದರಿಂದ ನಾನು ಇಂದು ಬೇಸತ್ತು ಸ್ವತಃ ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದೇನೆ, ಮುಖ್ಯಮಂತ್ರಿ ಸಿದ್ದರಾಮಯ್ಯನವರು ಬರೋವರೆಗೂ ನಾನು ಕೆಳಗೆ ಇಳಿಯಲ್ಲ ಎಂದು ವಿಜಯನಗರ ನಿವಾಸಿ ಉಮಾ ಎಂಬ ಮಹಿಳೆ ಹಠ ಮಾಡಿದ್ದಾರೆ.

ವಿಷಯ ತಿಳಿದ ಕೂಡಲೇ ಸ್ಥಳಕ್ಕೆ ಆಗಮಿಸಿದ ಹಲಸೂರ್ ಗೇಟ್ ಠಾಣೆ ಪೊಲೀಸರು ತಕ್ಷಣವೇ ಕೆಳಗಿಳಿಯಮ್ಮ ನಾವು ನಿನಗೆ ಸಹಾಯ ಮಾಡಿಸ್ತಿವಿ ಎಂದು ಪರಿ ಪರಿಯಾಗಿ ವಿನಂತಿಸಿಕೊಂಡಿದ್ದಾರೆ. ಆದರೆ ಅದಕ್ಕೊಪ್ಪದ ಉಮಾ ಅವರು ತನಗೆ ಬದುಕೋಕೆ ದಿಕ್ಕಿಲ್ಲ ಅಂತ ಸಹಾಯ ಮಾಡಿ ಅಂತ ಎಷ್ಟೇ ಮನವಿ ಮಾಡಿದರೂ ಬಿಬಿಎಂಪಿ ಆರೋಗ್ಯಾಧಿಕಾರಿ ನಿರ್ಮಲಾ ಬುಗ್ಗಿ ಸಹಾಯ ಮಾಡಿಲ್ಲ. ಬದಲಿಗೆ ನೀನು ಬದುಕೋಕೆ ಆಗಿಲ್ಲ ಅಂದ್ರೆ ಸಾಯಿ ಅಂತ ನಿರ್ಮಲಾ ಬುಗ್ಗಿ ಬೈದು ಕಳಿಸಿದ್ರು. ನಂತರ ಮುಖ್ಯಮಂತ್ರಿ ಸಿದ್ದರಾಮಯ್ಯನವರ ಮನೆಗೂ ಹತ್ತಾರು ಬಾರಿ ಹೋಗಿದ್ದೇನೆ, ಆದರೆ ಅಲ್ಲಿ ಸೆಕ್ಯೂರಿಟಿಗಳು ಮುಖ್ಯಮಂತ್ರಿ ಮನೆ ಒಳಗೆ ಬಿಟ್ಟಿಲ್ಲ, ಹೀಗಾದ್ರೆ ಬಡವರು ಏನು ಮಾಡಬೇಕು ಎಂದು ಉಮಾ ಕೂಗಿ ಹೇಳಿ ಆತ್ಮಹತ್ಯೆ ಬೆದರಿಕೆ ಹಾಕಿದ್ದಾರೆ.

ಆಗ ಹಲಸೂರ್ ಗೇಟ್ ಪೊಲೀಸರು ಆ ಮಹಿಳೆಯನ್ನು ಬಿಬಿಎಂಪಿ ಕಚೇರಿ ಕಟ್ಟಡದಿಂದ ಹೇಗೊ ಕೆಳಗಿಳಿಸಿದ್ದಾರೆ. ಇಷ್ಟಾದರೂ ಮಹಿಳಾ ಪೊಲೀಸರು ಇಲ್ಲದೆ ಸ್ಥಳದಲ್ಲಿ ಹಲಸೂರ್ ಗೇಟ್ ಪೊಲೀಸರೇ ಪರಿಸ್ಥಿತಿ ನಿಭಾಯಿಸಲು ಪೇಚಾಡಿದರು.

ಒಟ್ಟಾರೆ ಈ ಪ್ರಕರಣ ಬಡ ಮತ್ತು ಅನಾರೋಗ್ಯಪೀಡಿತ ಮಹಿಳೆಗೆ ಸ್ಪಂದಿಸದ ಬಿಬಿಎಂಪಿ ಆರೋಗ್ಯಾಧಿಕಾರಿ ನಿರ್ಮಲಾ ಬುಗ್ಗಿ ಅವರ ಕಾರ್ಯಕ್ಷಮತೆಯನ್ನು ಪ್ರಶ್ನೆ ಮಾಡಿದಂತಾಗಿದೆ. ರಾಜ್ಯದ ಕಾಂಗ್ರೆಸ್ ಸರ್ಕಾರವೂ ಸಹ ಪ್ರತಿ ಚುನಾವಣೆ ಬಂದಾಗ ಗೃಹಲಕ್ಷ್ಮೀ ಯೋಜನೆ ಸೇರಿದಂತೆ ಬಡವರಿಗೆ ಸಹಾಯ ಮಾಡುವ ಯೋಜನೆಗಳಿವೆ ಎಂದು ಪ್ರಚಾರ ನಡೆಸಿ ವೋಟ್ ಗಿಟ್ಟಿಸಲು ಪ್ರಯತ್ನಿಸಿತ್ತಿದೆಯೇ ಹೊರತು ಅನ್ಯಾಯಕ್ಕೊಳಗಾದ ಉಮಾರಂತಹ ಮಹಿಳೆಯರ ನೆರವಿಗೆ ಧಾವಿಸುತ್ತಿಲ್ಲ ಎಂದು ಈ ಪ್ರಸಂಗ ತಾಜಾ ನಿದರ್ಶನವಾಗಿತ್ತು.


Share It

You cannot copy content of this page