ಯಾದಗಿರಿ:ನೀರು ಕುಡಿಯಲು ಹೋಗಿದ್ದ ಮೂವರು ಬಾಲಕರು ನೀರಿನ ಹೊಂಡಕ್ಕೆ ಬಿದ್ದು ದುರ್ಮರಣ ಹೊಂದಿದ (Drowned) ಧಾರುಣ ಘಟನೆ ಜಿಲ್ಲೆಯಲ್ಲಿ ಭಾನುವಾರ (ಮೇ 4) ನಡೆದಿದೆ (Yadagiri News). ಯಾದಗಿರಿ ತಾಲೂಕಿನ ಅಚೋಲಾದಲ್ಲಿ ಈ ಘಟನೆ ನಡೆದಿದ್ದು, ಮೃತರನ್ನು ಅಚ್ಚೊಲಾ ತಾಂಡಾದ ನಿವಾಸಿಗಳಾದ ಅಮರ್ (12) ಜಯ ರಾಠೋಡ (14) ಕೃಷ್ಣ ರಾಠೋಡ್(10) ಎಂದು ಗುರುತಿಸಲಾಗಿದೆ.
ಕುರಿ ಕಾಯಲು ಹೋಗಿದ್ದ ಬಾಲಕರು ನೀರು ಕುಡಿಯಲೆಂದು ತೆರಳಿದ್ದ ವೇಳೆ ಈ ಅನಾಹುತ ಸಂಭವಿಸಿದೆ.
ಬೇಸಗೆ ಹಿನ್ನೆಲೆಯಲ್ಲಿ ಬಾಲಕರು ದಾಹ ತಣಿಸಿಕೊಳ್ಳಲು ನೀರು ಕುಡಿಯಲು ಹೋಗಿದ್ದರು ಎಂದು ಮೂಲಗಳು ತಿಳಿಸಿವೆ. ನೀರಿನ ಹೊಂಡಕ್ಕೆ ನೀರು ಕುಡಿಯಲು ಹೋಗಿದ್ದ ಬಾಲಕರು ಕಾಲು ಜಾರಿ ಬಿದ್ದಿರುವ ಸಾಧ್ಯತೆ ಇದೆ. ಮೃತ ಬಾಲಕರ ಕುಟುಂಬಸ್ಥರ ಅಕ್ರಂದನ ಮುಗಿಲು ಮುಟ್ಟಿದೆ. ಯಾದಗಿರಿ ಗ್ರಾಮೀಣ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ. ಪೊಲೀಸರು ಸ್ಥಳ ಪರಿಶೀಲನೆ ನಡೆಸಿದ್ದಾರೆ.