ಬೆಂಗಳೂರು: ನಗರಾಭಿವೃದ್ಧಿ ಹಾಗೂ ನಗರ ಯೋಜನೆ ಸಚಿವ ಬೈರತಿ ಸುರೇಶ್ ಅವರ ತಾಯಿ ಸುಶೀಲಮ್ಮ ರವರು ಶನಿವಾರ ಬೆಳಿಗ್ಗೆ ನಿಧನರಾಗಿದ್ದಾರೆ.
ಅವರಿಗೆ 85 ವರ್ಷ ವಯಸ್ಸಾಗಿತ್ತು. ಹೆಬ್ಬಾಳ ವಿಧಾನಸಭಾ ಕ್ಷೇತ್ರದ ಎಲ್ಲರ ನೆಚ್ಚಿನ ಅಮ್ಮ ಎಂದೇ ಪರಿಚಿತರಾಗಿದ್ದ ಸುಶೀಲಮ್ಮ ಅವರು ಪುತ್ರ ಸಚಿವ ಬೈರತಿ ಸುರೇಶ್ ಮತ್ತು ಪುತ್ರಿ ಬಿ.ಎಸ್.ರಮಾದೇವಿ, ಮೊಮ್ಮಕ್ಕಳು ಹಾಗೂ ಅಸಂಖ್ಯಾತ ಅಭಿಮಾನಿ ಬಳಗವನ್ನು ಅಗಲಿದ್ದಾರೆ.
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಸುರೇಶ್ ನಿವಾಸದಲ್ಲಿ ಸುಶೀಲಮ್ಮ ಅವರ ಪಾರ್ಥಿವ ಶರೀರದ ಅಂತಿಮ ದರ್ಶನ ಪಡೆದು ಸುರೇಶ್ ಕುಟುಂಬಕ್ಕೆ ಸಾಂತ್ವನ ಹೇಳಿದರು. ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್, ಸಚಿವರಾದ ದಿನೇಶ್ ಗುಂಡೂರಾವ್, ರಹೀಂ ಖಾನ್, ಶಾಸಕರಾದ ಎಸ್. ಆರ್. ವಿಶ್ವನಾಥ್, ರಿಜ್ವಾನ್ ಅರ್ಷದ್, ಬೈರತಿ ಬಸವರಾಜ್ ಸೇರಿ ಅನೇಕ ಗಣ್ಯರು ಸುಶೀಲಮ್ಮ ಅವರಿಗೆ ಅಂತಿಮ ನಮನ ಸಲ್ಲಿಸಿದರು.
ಹೆಬ್ಬಾಳ ವಿಧಾನಸಭಾ ಕ್ಷೇತ್ರದ ಸಾವಿರಾರು ಮಂದಿ ಅಗಲಿದ ಚೇತನದ ದರ್ಶನ ಪಡೆದರು.
ಸಂಜೆ ಬೈರತಿಯಲ್ಲಿರುವ ತೋಟದ ರುದ್ರಭೂಮಿಯಲ್ಲಿ ಅಂತ್ಯಕ್ರಿಯೆಯನ್ನು ನೆರವೇರಿಸಲಾಯಿತು.