ನವಲಗುಂದ : ಐದು ಗ್ಯಾರೆಂಟಿ ನೀಡಿ ನುಡಿದಂತೆ ನಡೆದು ನವಲಗುಂದ ವಿಧಾನಸಭಾ ಕ್ಷೇತ್ರದಲ್ಲಿ ಚಕ್ಕಡಿ ರಸ್ತೆಗಳನ್ನು ಅಗಲೀಕರಣ ಮಾಡಿ ಹೆದ್ದಾರಿ ತರಹ ರಸ್ತೆ ನಿರ್ಮಿಸಿದ್ದು ರಾಜ್ಯಕ್ಕೆ ಮಾದರಿ ಕ್ಷೇತ್ರವನ್ನಾಗಿ ಮಾಡಲು ನಿರ್ಧರಿಸಿದ್ದೇನೆ ಎಂದು ಸ್ವತಂತ್ರ್ಯೋತ್ಸವದ ಶುಭಾಷಯ ಮೂಲಕ ತಿಳಿಸಿದ ನವಲಗುಂದ ಶಾಸಕ ಎನ್.ಹೆಚ್. ಕೋನರಡ್ಡಿ ನವಲಗುಂದ ಮಾಡಲ್ ಹೈಸ್ಕೂಲ್ ಮೈದಾನದಲ್ಲಿ 78 ನೇ ಸ್ವಾತಂತ್ರ್ಯೋತ್ಸವದ ಧ್ವಜಾರೋಹರಣ ನೆರವೇರಿಸಿ ಮಾತನಾಡಿದರು.
ಜನತೆ ಆಶೀರ್ವಾದದಿಂದ 136 ಶಾಸಕರನ್ನು ಕಾಂಗ್ರೆಸ್ ಪಕ್ಷದಿಂದ ಗೆಲ್ಲಿಸಿ ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ ನೇತೃತ್ವದಲ್ಲಿ ಜೋಡೆತ್ತುಗಳಾಗಿ ಹೋರಾಟ ಮಾಡಿ ಅಧಿಕಾರಕ್ಕೆ ಬಂದ ನಮ್ಮ ಸರ್ಕಾರ ಚುನಾವಣಾ ಪೂರ್ವದಲ್ಲಿ ಘೋಷಣೆ ಮಾಡಿದಂತೆ ಶಕ್ತಿಯೋಜನೆ, ಗೃಹಲಕ್ಷ್ಮೀ, ಅನ್ನಭಾಗ್ಯ, ಗೃಹಜ್ಯೋತಿ, ಯುವನಿಧಿ ಅಂತಹ ಐದು ಗ್ಯಾರೆಂಟಿಗಳನ್ನು ನೀಡಿ 6ನೇ ಗ್ಯಾರೆಂಟಿಯಾಗಿ ಸರ್ಕಾರಿ ನೌಕರರಿಗೆ 7ನೇ ವೇತನ ಯತಾವಥಾಗಿ ಜಾರಿ ಮಾಡಿ ನುಡಿದಂತೆ ನಡೆದಿದ್ದೇವೆ ಎಂದರು.
ನವಲಗುಂದ ಕ್ಷೇತ್ರದ ನವಲಗುಂದ ನಗರದಲ್ಲಿ ನೂತನ ಆಶ್ರಯ ಬಡಾವಣೆಗಾಗಿ 41 ಎಕರೆ ಜಮೀನು 2013 ರಲ್ಲಿ ಖರೀದಿಸಿದ್ದು ಈಗ ಮತ್ತೇ 31 ಎಕರೆ ಜಮೀನು ಖರೀದಿಸಲು ರೂ. 5.50 ಕೋಟಿ ಅನುದಾನ ಬಂದಿದ್ದು ನೂತನ ಹೈಟೆಕ್ ಆಶ್ರಯ ಬಡಾವಣೆ ರಚಿಸಿ ಅಂದಾಜು 3000 ಮನೆ ಹಾಗೂ ಅಣ್ಣಿಗೇರಿ ನಗರದಲ್ಲಿ 19.5 ಎಕರೆ ಜಮೀನು ಖರೀದಿಸಿದ್ದು ಅಂದಾಜು 1000 ಮನೆಗಳನ್ನು ನಿರ್ಮಾಣ ಮಾಡಲು ತೀರ್ಮಾನಿಸಿದ್ದೇನೆ. ನವಲಗುಂದ ಹಾಗೂ ಹುಬ್ಬಳ್ಳಿ ತಾಲ್ಲೂಕಿಗೆ ಸೇರಿ 500 ಹಾಗೂ ಅಣ್ಣಿಗೇರಿ ತಾಲ್ಲೂಕಿಗೆ 500 ಬಸವ ವಸತೆ ಯೋಜನೆ ಮೂಲಕ 1000 ಮನೆಗಳನ್ನು ಗ್ರಾಮೀಣ ಜನತೆಗೋಸ್ಕರ ಮಂಜೂರಾಗಿವೆ ಎಂದರು.
ನವಲಗುಂದ ನಗರದ ಒಳಚರಂಡಿ ಯೋಜನೆಗೆ 33.5 ಕೋಟಿ ಅನುದಾನ ಬಿಡುಗಡೆಯಾಗಿದ್ದು ಟೆಂಡರ್ ಹಂತದಲ್ಲಿದೆ. ಗುಡ್ಡದ ಹಿಂದುಗಡೆ ಇರುವ ರಸ್ತೆಯನ್ನು ಮಂಜುನಾಥ ನಗರ, ಶ್ಯಾನವಾಡ ರಸ್ತೆ, ಹುಗ್ಗಿ ಅವರ ಓಣಿ, ರಾಮಲಿಂಗ ಕಾಮಣ್ಣ, ಹಳ್ಳದವರ ಓಣಿ, ಕಳ್ಳಿಮಠ, ಮೆಹಬೂಬನಗರ, ರೋಣ ರಸ್ತೆ ಕಮಾನವರೆಗೆ ನೂತನ ಬೈಪಾಸ್ ರಾಷ್ಟ್ರೀಯ ಹೆದ್ದಾರಿ ತರಹ ನಿರ್ಮಿಸಲಾಗಿದೆ ಎಂದರು. ಗ್ರಾಮೀಣ ಪ್ರದೇಶದಲ್ಲಿ 76 ಚಕ್ಕಡಿ ರಸ್ತೆಗಳನ್ನು ಹೆದ್ದಾರಿ ತರಹ ಅಗಲೀಕರಣ ಮಾಡಿ ಗಟ್ಟಿಗೊಳಿಸಿ ಮೊರಂ ಹಾಕಿ ಅಂದಾಜು 200 ಕೀ.ಮೀ. ಪೂರ್ಣಗೊಳಿಸಲಾಗಿದೆ ಎಂದರು.
ಶಿಕ್ಷಣಕ್ಕೆ ಹೊಸ ಮೆರಗು ನೀಡಲು ಶಾಲಾ ವಿದ್ಯಾರ್ಥಿಗಳಿಗೆ ಗುಣಮಟ್ಟದ ಶಿಕ್ಷಣ ನೀಡುವುದಕ್ಕಾಗಿ ಹೆಚ್ಚುವರಿ ಕೊಠಡಿಗಳು, ಮೈದಾನ ಅಭಿವೃದ್ಧಿ, ಸ್ಮಾರ್ಟ್ ಕ್ಲಾಸ್, ಕಂಪ್ಯೂಟರ್ ಶಿಕ್ಷಣ, ಡೆಸ್ಕ್, ಕುಡಿಯುವ ನೀರು ಮುಂತಾದ ಸೌಲಭ್ಯಗಳನ್ನು ಒದಗಿಸುವ ಮೂಲಕ ಶಿಕ್ಷಣಕ್ಕೆ ಹೆಚ್ಚು ಒತ್ತು ನೀಡಲಾಗಿದೆ. ಇನ್ನೂ ಅನೇಕ ಅಭಿವೃದ್ಧಿ ಕೆಲಸಗಳನ್ನು ಮಾಡಲು ಜನಸೇವೆ ಮಾಡಲು ತಮ್ಮ ಆಶೀರ್ವಾದ ಸದಾ ಇರಲಿ ಎಂದು ಹೇಳಿದರು.
ಇದೇ ವೇಳೆಯಲ್ಲಿ ನವಲಗುಂದ ಪುರಸಭೆಯ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ ಎ.ಎಸ್. ಬಾಗಿ, ಅಶೋಕ ಮಜ್ಜಿಗುಡ್ಡ, ಉಸ್ಮಾನ ಬಬರ್ಚಿ, ಎನ್.ಬಿ. ಅಸುಂಡಿ, ಬಿ.ಎ. ಬಸೆಗೊಣ್ಣವರ, ಡಿ.ಕೆ. ಹಳ್ಳದ, ಜೀವನ ಪವಾರ, ಶ್ರೀಮತಿ ಅನಸೂಯಾ ಹನಮಂತಪ್ಪ ಭೋವಿ, ಶಶಿರೇಖಾ ಈರಪ್ಪ ಶಿಡಗಂಟಿ, ಅಪ್ಪಣ್ಣ ಹಳ್ಳದ, ಮೋದೀನಸಾಬ ಶಿರೂರ ಅವರುಗಳನ್ನ ಶಾಲು ಹೊದಿಸಿ ಸನ್ಮಾನಿಸಿ ನನ್ನ ಆಡಳಿತ ಅವಧಿಯಲ್ಲಿ ನವಲಗುಂದ ನಗರದ ಅಭಿವೃದ್ಧಿಗಾಗಿ ತಮ್ಮ ಸಲಹೆ ಸೂಚನೆಗಳನ್ನು ಎಲ್ಲರು ನೀಡಿ ಸಹಕರಿಸಬೇಕೆಂದು ಹೇಳಲಾಯಿತು.
ಇನ್ನು ವಿವಿಧ ಕ್ಷೇತ್ರದಲ್ಲಿ ಸಾಧನೆ ಮಾಡಿರುವ ಮಹಾಂತಪ್ಪ ಮಲ್ಲಪ್ಪ ಹಳ್ಳದ, ನಿಂಗಪ್ಪ ದೇಸಾಯಿ, ಶಂಕರಯ್ಯ ರಾಚಯ್ಯ ಸುಬೇದಾರಮಠ, ಶ್ರೀಮತಿ ರತ್ನಾ ಸಂಗಟಿ ಅವರುಗಳಿಗೂ ಸಹ ಸನ್ಮಾನಿಸಿ ಗೌರವಿಸಲಾಯಿತು.
ಈ ಸಂದರ್ಭದಲ್ಲಿ ನವಲಗುಂದ ತಹಶೀಲ್ದಾರ ಹಾಗೂ ದಂಡಾಧಿಕಾರಿ ಸುಧೀರ ಸಾವಕಾರ, ಕಾರ್ಯ ನಿರ್ವಾಹಕ ಅಧಿಕಾರಿ ಶ್ರೀಮತಿ ಭಾಗ್ಯಶ್ರೀ ಜಾಗೀರದಾರ, ಪುರಸಭೆ ಮುಖ್ಯಾಧಿಕಾರಿ ಎಸ್.ಪಿ. ಪೂಜಾರ, ಪೊಲೀಸ್ ಇನಸ್ಪೆಕ್ಟರ್ ರವಿ ಕಪ್ಪತನವರ, ಪಿಎಸಐ ಜನಾರ್ಧನ ಬಿ., ಕ್ಷೇತ್ರ ಶಿಕ್ಷಣಾಧಿಕಾರಿ ಮಲ್ಲಾಡದ, ಲೋಕೋಪಯೋಗಿ ಸಹಾಯಕ ಕಾರ್ಯನಿರ್ವಾಹಕ ಇಂಜಿನೀಯರ ಎಸ್.ಎನ್. ಸಿದ್ದಾಪೂರ, ಪಂಚಾಯತ ರಾಜ್ ಇಲಾಖೆಯ ಸಹಾಯಕ ಕಾರ್ಯನಿರ್ವಾಹಕ ಇಂಜಿನೀಯರ ಎಮ್.ಜಿ. ಶಿಂಧೆ, ಮಹಿಳಾ ಮತ್ತು ಮಕ್ಕಳ ಕಲ್ಯಾಣಾಧಿಕಾರಿ ಗಾಯಿತ್ರಿ ಪಾಟೀಲ, ಎಡಿಎಲ್ಆರ್ ಹಿರೇಗೌಡ್ರ, ಪುರಸಭೆ ಚೇರಮನ್ ಮಹಾಂತೇಶ ಭೋವಿ, ಮಾಜಿ ಅಧ್ಯಕ್ಷರುಗಳಾದ ಮಂಜು ಜಾಧವ್, ಜೀವನ ಪವಾರ, ಅಪ್ಪಣ್ಣ ಹಳ್ಳದ, ಸದಸ್ಯರುಗಳಾದ ಮೋದಿನ ಶಿರೂರ, ಶಿವಾನಂದ ತಡಸಿ, ಸುರೇಶ ಮೇಟಿ, ಹನಮಂತ ವಾಲಿಕಾರ, ಶ್ರೀಮತಿ ಫರೀದಾಬೇಗಂ ಬಬರ್ಚಿ, ಮುದಕವ್ವ ಬೆಂಡಿಗೇರಿ, ಸುಣಗಾರ, ಪುರಸಭೆಯ ನಾಮನಿರ್ದೇಶಿತ ಸದಸ್ಯರುಗಳು, ತಾಲ್ಲೂಕು ಆಡಳಿತ ಸಿಬ್ಬಂಧಿ ವರ್ಗದವರು ಉಪಸ್ಥಿತರಿದ್ದರು.