‘ವೈಟ್ ಪೇಪರ್’ ಅಂಕಣಕಾರ, ಲೇಖಕ ಹಳ್ಳಿ ವೆಂಕಟೇಶ್ ಅವರಿಗೆ ಹಾಸನ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ
ಬೆಂಗಳೂರು: ವೈಟ್ ಪೇಪರ್ ನ ಅಂಕಣಕಾರರು, ಲೇಖಕರು ಹಾಗೂ ಉಪನ್ಯಾಸಕರಾದ ಹಳ್ಳಿ ವೆಂಕಟೇಶ್ ಅವರಿಗೆ 2024 ನೇ ಸಾಲಿನ ಹಾಸನ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಘೋಷಣೆಯಾಗಿದೆ.
ಹಾಸನ ಜಿಲ್ಲಾ ರಾಜ್ಯೋತ್ಸವ ಸಮಿತಿಯಿಂದ ಪ್ರದಾನ ಮಾಡಲಾಗುವ ಪ್ರಶಸ್ತಿಗೆ ಆಯ್ಕೆಯಾಗಿರುವ ಹಳ್ಳಿ ವೆಂಕಟೇಶ್ ಅವರು, ಬರಹಗಾರರು, ಕವಿ ಹಾಗೂ ಲೇಖಕರಾಗಿ ಪರಿಚಿತರು. ಇವರು ನಾಡಿನ ಅನೇಕ ಪ್ರತಿಷ್ಠಿತ ಪತ್ರಿಕೆಗಳಿಗೆ ಲೇಖನಗಳನ್ನು ಬರೆಯುವ ಮೂಲಕ ಪತ್ರಕರ್ತರಾಗಿಯೂ ಗುರುತಿಸಿಕೊಂಡಿದ್ದಾರೆ.
‘ವೈಟ್ ಪೇಪರ್’ ನಲ್ಲಿ ಅವರ ಅನೇಕ ಲೇಖನಗಳು ಪ್ರಕಟವಾಗಿವೆ. ‘ವಿ ಟಿವಿ’ ಯಲ್ಲಿ ಅನೇಕ ಕಾರ್ಯಕ್ರಮಗಳನ್ನು ನಡೆಸಿಕೊಟ್ಟಿದ್ದಾರೆ. ಚನ್ನರಾಯಪಟ್ಟಣ ಸರಕಾರಿ ಪ್ರಥಮ ದರ್ಜೆ ಕಾಲೇಕಿನ ಕನ್ನಡ ಉಪನ್ಯಾಸಕರಾಗಿ ಅವರು ಕಾರ್ಯನಿರ್ವಹಿಸುತ್ತಿದ್ದಾರೆ.
ವಿಶ್ವವಾಣಿ, ಉದಯಕಲಾಲ, ಜನತಾಮಾಧ್ಯಮ, ಮಿಂಚುಳ್ಳಿ ಪತ್ರಿಕೆಗಳು ಸೇರಿದಂತೆ ಅನೇಕ ಪತ್ರಿಕೆಗಳಲ್ಲಿ ಅವರ ಬರಹಗಳು ಪ್ರಕಟವಾಗಿವೆ. ಅವರ ಈ ಸೇವೆಯನ್ನು ಪರಿಗಣಿಸಿ ಹಾಸನ ಜಿಲ್ಲಾಡಳಿತ ಅವರಿಗೆ ರಾಜ್ಯೋತ್ಸವ ಪ್ರಶಸ್ತಿಯನ್ನು ಘೋಷಣೆ ಮಾಡಿದೆ.