ಬೆಂಗಳೂರು: 2025ನೇ ಸಾಲಿನ ಶ್ರೀ ಮಹರ್ಷಿ ವಾಲ್ಮೀಕಿ ಜಯಂತಿ ಪ್ರಯುಕ್ತ ಐವರು ಸಾಧಕರಿಗೆ ಶ್ರೀ ಮಹರ್ಷಿ ವಾಲ್ಮೀಕಿ ಪ್ರಶಸ್ತಿಯನ್ನು ರಾಜ್ಯ ಸರ್ಕಾರ ಘೋಷಿಸಿದೆ.
ಅ.3ರಂದು ನಡೆದ ಶ್ರೀ ಮಹರ್ಷಿ ವಾಲ್ಮೀಕಿ ಪ್ರಶಸ್ತಿ ಆಯ್ಕೆ ಸಮಿತಿ ಸಭೆಯಲ್ಲಿ ಐವರು ಸಾಧಕರನ್ನು ರಾಜ್ಯ ಮಟ್ಟದ ಶ್ರೀ ಮಹರ್ಷಿ ವಾಲ್ಮೀಕಿ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ. ಮಾಧ್ಯಮ, ರಂಗಭೂಮಿ, ಸಂಘಟನೆ, ಸಮಾಜ ಸೇವೆ ಹಾಗೂ ಸಾಮಾಜಿಕ ಕ್ಷೇತ್ರ ಸೇರಿ ಐದು ಕ್ಷೇತ್ರಗಳಿಂದ ತಲಾ ಒಬ್ಬರು ಅರ್ಹ ಸಾಧಕರನ್ನು ಈ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ.
ವಾಲ್ಮೀಕಿ ಪ್ರಶಸ್ತಿ ಪುರಸ್ಕೃತರ ಪಟ್ಟಿ
- ನಾಗರಾಜು ಗಾಣದ ಹುಣಸೆ, ಬೆಂಗಳೂರು (ಮಾಧ್ಯಮ ಕ್ಷೇತ್ರ)
- ಪಿ. ತಿಪ್ಪೇಸ್ವಾಮಿ, ಚಳ್ಳಕೆರೆ (ರಂಗಭೂಮಿ ಕ್ಷೇತ್ರ)
- ಜೆ.ಕೆ ಮುತ್ತಮ್ಮ, ಚೆನ್ನಯ್ಯನಕೋಟೆ, ವಿರಾಜಪೇಟೆ (ಸಂಘಟನೆ ಕ್ಷೇತ್ರ)
- ಮಳಸಿದ್ದ ಲಕ್ಷ್ಮಣ ನಾಯಕೋಡಿ, ವಿಜಯಪುರ (ಸಮಾಜ ಸೇವೆ)
- ಕೆ. ಉಚ್ಚಂಗಪ್ಪ, ಹರಪನಹಳ್ಳಿ (ಸಾಮಾಜಿಕ ಕ್ಷೇತ್ರ)
ಶ್ರೀ ಮಹರ್ಷಿ ವಾಲ್ಮೀಕಿ ಜಯಂತಿಯಂದು ಪರಿಶಿಷ್ಟ ವರ್ಗದ ಜನಾಂಗದ ಏಳಿಗೆಗಾಗಿ ಶ್ರಮಿಸಿದ ವ್ಯಕ್ತಿಗಳಿಗೆ ಶ್ರೀ ಮಹರ್ಷಿ ವಾಲ್ಮೀಕಿ ಪ್ರಶಸ್ತಿ ನೀಡಿ ಗೌರವಿಸಲಾಗುತ್ತದೆ.