ರಾಜಕೀಯ ಸುದ್ದಿ

ಪಾಪಿಗಳ ಲೋಕಕ್ಕೆ ಪಾದಾರ್ಪಣೆ ಮಾಡಿದ ಸೇನಾ ಪಡೆ

Share It

ನವದೆಹಲಿ: ಪಾಕಿಸ್ತಾನದ ಪಾಪಿಗಳ ಲೋಕ ಎನಿಸಿಕೊಳ್ಳುವ ಉಗ್ರರ ಅಡಗುದಾಣಗಳ ಮೇಲೆ ಭಾರತ ಏರ್ ಸ್ಟ್ರೈಕ್ ಮಾಡಿದ್ದು, ಗಡಿಯಲ್ಲಿ ಯುದ್ಧದ ವಾತಾವರಣ ಸೃಷ್ಟಿಯಾಗಿದೆ.

ಪೆಹಲ್ಗಾಮ್ ಉಗ್ರರ ದಾಳಿಗೆ ಪ್ರತೀಕಾರವಾಗಿ ಭಾರತೀಯ ಸೇನೆ ನಡೆಸಿರುವ ದಾಳಿಯಲ್ಲಿ ಲಷ್ಕರ್ ತೋಯ್ಬಾರ, ಹಾಗೂ ಜೈಷ್ ಎ ಮೊಹಮದ್ ಸಂಘಟನೆಗಳಿಗೆ ಬಂಕರ್ ಗೆ ನುಗ್ಗಿ ಸದೆಬಡಿದಿರುವ ಸೇನೆಯ ದಾಳಿಗೆ 16 ಕ್ಕೂ ಹೆಚ್ಚು ಉಗ್ರರು ಮೃತಪಟ್ಟಿರಬಹುದು ಎಂದು ಅಂದಾಜಿಸಲಾಗಿದೆ.

ಉಗ್ರರ ದಾಳಿಗೆ ನಿಯೋಜಿತ ದಾಳಿ ನಡೆಸಲು ಭಾರತೀಯ ಸೇನೆ ಕೆಲ ದಿನಗಳಿಂದ ಯೋಜನೆ ರೂಪಿಸಿತ್ತು. ಸರಕಾರವೂ ಉಗ್ರರನ್ನು ಮಟ್ಟಹಾಕಲು ಸೇನೆಗೆ ಪರಮಾಧಿಕಾರ ನೀಡಿತ್ತು. ಈ ಹಿನ್ನೆಲೆಯಲ್ಲಿ ಮಂಗಳವಾರ ರಾತ್ರಿ ಮಹತ್ವದ ದಾಳಿ ನಡೆದಿದೆ. ಆ ಮೂಲಕ ಭಾರತ ತನ್ನ ಪ್ರತೀಕಾರವನ್ನು ಪ್ರಕಟ ಮಾಡಿದೆ.

ಭಾರತೀಯ ಸೇನೆಯ ದಾಳಿಗೆ ದೇಶಾದ್ಯಂತ ಶ್ಲಾಘನೆ ವ್ಯಲ್ತವಾಗಿದೆ. ಆಪರೇಷನ್ ಸಿಂಧೂರ್ ಹೆಸರಿನ ಈ ಸಂಘಟಿತ ದಾಳಿಗೆ ಕೇಂದ್ರ ಸಚಿವರು, ವಿವಿಧ ರಾಜ್ಯಗಳ ಮುಖ್ಯಮಂತ್ರಿಗಳು ಮತ್ತು ಸಾರ್ವಜನಿಕರಿಂದ ಅಭಿನಂದನೆ ಹರಿದುಬಂದಿದೆ. ಸೇನೆಯ ಸಾಹಸವನ್ನು ಸಾಮಾಜಿಕ ಜಾಲತಾಣದಲ್ಲಿ ಕೊಂಡಾಡಲಾಗುತ್ತಿದೆ.

ದಾಳಿಗೆ ಸಂಬಂಧಿಸಿದಂತೆ ಅನೇಕ ಸಾಹಸಮಯ ಕತೆಗಳು, ರೋಚಕ ವಿದ್ಯಮಾನಗಳ ಕುರಿತು ಸಾಮಾಜಿಕ ಜಾಲತಾಣಗಳಲ್ಲಿ ಚರ್ಚೆ ನಡೆಸಲಾಗುತ್ತಿದೆ. ಸೇನೆ ದಾಳಿಯ ನಂತರ ಮುಂದೆ ನಡೆಯಬಹುದಾದ ಯುದ್ಧದ ಸಿದ್ಧತೆಗೆ ಅಣಿಯಾಗುತ್ತಿದ್ದು, ಎಲ್ಲ ರಾಜಕೀಯ ಪಕ್ಷಗಳು ಸರಕಾರದ ತೀರ್ಮಾನಕ್ಕೆ ಬದ್ಧವಾಗಿರುವುದಾಗಿ ಘೋಷಿಸಿವೆ.


Share It

You cannot copy content of this page