ಭಾರತೀಯ ಸಾರ್ವಜನಿಕ ಸಂಪರ್ಕ ಮಂಡಳಿಯ ಹಿರಿಯ ಕಾರ್ಯನಿರ್ವಾಹಕ ಉಪಾಧ್ಯಕ್ಷರಾಗಿ ಡಾ. ಟಿ.ಎಸ್. ಲತಾ ಆಯ್ಕೆ

Share It

ಬೆಂಗಳೂರು: KSRTC ಸಾರ್ವಜನಿಕ ಸಂಪರ್ಕಾಧಿಕಾರಿ ಡಾ. ಟಿ.ಎಸ್. ಲತಾ ಅವರು ಭಾರತೀಯ ಸಾರ್ವಜನಿಕ ಸಂಪರ್ಕ ಮಂಡಳಿ ಹಿರಿಯ ಕಾರ್ಯಾನಿರ್ವಾಹಕ ಉಪಾಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ. 

ಡಾ.ಲತಾ ಟಿ.ಎಸ್ ಮುಖ್ಯ ಸಾರ್ವಜನಿಕ ಸಂಪರ್ಕಾಧಿಕಾರಿ ಕೆ ಎಸ್ ಆರ್ ಟಿ ಸಿ‌ ರವರನ್ನು ಭಾರತೀಯ ಸಾರ್ವಜನಿಕ‌ ಸಂಪರ್ಕ ಮಂಡಳಿಗೆ ಹಿರಿಯ ಕಾರ್ಯನಿರ್ವಾಹಕ ಉಪಾಧ್ಯಕ್ಷರನ್ನಾಗಿ ನೇಮಿಸಲಾಗಿದೆಯೆಂದು ಎಂ.ಬಿ.ಜಯರಾಂ , ಗೌರವಾಧ್ಯಕ್ಷರು ಹಾಗೂ ಮುಖ್ಯಸ್ಥರು ಭಾರತೀಯ ಸಾರ್ವಜನಿಕ ಸಂಪರ್ಕ ಮಂಡಳಿ, ಗೀತಾ ಶಂಕರ್ ರಾಷ್ಟ್ರೀಯ ಕಾರ್ಯಕಾರಿಣಿ ಅಧ್ಯಕ್ಷರು, ಭಾರತೀಯ ಸಾರ್ವಜನಿಕ‌ ಸಂಪರ್ಕ ಮಂಡಳಿ ಅವರು ತಿಳಿಸಿರುತ್ತಾರೆ.

ಭಾರತೀಯ ಸಾರ್ವಜನಿಕ ಸಂಪರ್ಕ ಮಂಡಳಿಯು ದೇಶದ್ಯಾಂತ 85 ಶಾಖೆಗಳನ್ನು, ಅಂತರರಾಷ್ಟ್ರೀಯ ಶಾಖೆಗಳಾದ ಸಿಂಗಾಪುರ್, ಲಂಡನ್, ಶ್ರೀಲಂಕಾ, ದುಬೈ, ನೇಪಾಳ, ಆಸ್ಟ್ರೇಲಿಯಾ, ಅಮೆರಿಕಾಗಳಲ್ಲಿ ಹೊಂದಿದೆ. ಇದಲ್ಲದೆ YCC Young Communicators Club of PRCI ದೇಶದ್ಯಾಂತ 70 ಕ್ಕೂ ಹೆಚ್ಚು ಕಾಲೇಜುಗಳಲ್ಲಿ‌ ತನ್ನ ವ್ಯಾಪ್ತಿಯನ್ನು ವಿಸ್ತರಿಸಿದೆ.

ಡಾ. ಲತಾ ಅವರು KSRTC ಮುಖ್ಯ ಸಾರ್ವಜನಿಕ ಸಂಪರ್ಕ ಅಧಿಕಾರಿಯಾಗಿ ಅತ್ಯುತ್ತಮವಾಗಿ ಕಾರ್ಯನಿರ್ವಹಿಸುತ್ತಿದ್ದಾರೆ.


Share It

You May Have Missed

You cannot copy content of this page