ದಿಲ್ಜೀತ್ ಸಿಂಗ್ ಗೆ ಕನ್ನಡ ಪಾಠ ಮಾಡಿದ ದೀಪಿಕಾ ಪಡುಕೋಣೆ:ಕುಣಿದಾಡಿದ ಕನ್ನಡಿಗರು
ಬೆಂಗಳೂರು: ದೀಪಿಕಾ ಪಡುಕೋಣೆ ಅವರು ಬೆಂಗಳೂರಿನಲ್ಲಿ ನಡರದ ಸಂಗೀತ ಹಬ್ಬದಲ್ಲಿ ಖ್ಯಾತ ಖಾಯಕ ದಿಲ್ಜಿತ್‌ಗೆ ಕನ್ನಡ ಪಾಠ ಕಲಿಸುವ ಮೂಲಕ ಕನ್ನಡಿಗರ ಮನಗೆದ್ದಿದ್ದಾರೆ.
ದೀಪಿಕಾ ಪಡುಕೋಣೆ ತನ್ನ ಮಗಳು ದುವಾಗೆ ಜನ್ಮ ನೀಡಿದ ನಂತರ ದಿಲ್ಜಿತ್ ದೋಸಾಂಜ್ ಅವರ ಬೆಂಗಳೂರು ಸಂಗೀತ ಕಚೇರಿಯಲ್ಲಿ ಸಾರ್ವಜನಿಕವಾಗಿ ಕಾಣಿಸಿಕೊಂಡರು. ಅವರು ದಿಲ್ಜಿತ್‌ಗೆ ಕನ್ನಡ ನುಡಿಗಟ್ಟು ಕಲಿಸುವ ಮೂಲಕ ಅಭಿಮಾನಿಗಳನ್ನು ಸಂತೋಷಪಡಿಸಿದರು.
ವೈರಲ್ ಆಗಿರುವ ವಿಡಿಯೋದಲ್ಲಿ ದಿಲ್ಜಿತ್ ಅವರ ವಿನಂತಿಯ ನಂತರ ಕನ್ನಡ ಪಾಠ ಪ್ರಾರಂಭವಾಯಿತು. ದೀಪಿಕಾ ಅವರು ಐ ಲವ್ ಯೂ ಎಂಬುದಕ್ಕೆ ಕನ್ನಡ ದಲ್ಲಿ “ನಾನು ನಿನ್ನ ಪ್ರೀತಿಸುತ್ತೇನೆ” ಎಂಬ ಪದವನ್ನು ಕೇಳಿಕೊಳ್ಳಲು ತಿಳಿಸಿದರು. ಇದು ಇಡೀ ಸಭೆಯಲ್ಲಿ ಸಂಚಲನ ಮೂಡಿಸಿತು.
ದೀಪಿಕಾ ಬಗ್ಗೆ ಮಾತನಾಡಿದ ದಿಲ್ಜಿತ್, ದೀಪಿಕಾ ಅದ್ಭುತ ಕೆಲಸವನ್ನು ಮಾಡಿದ್ದಾಳೆ. ನಾವು ಅವಳನ್ನು ದೊಡ್ಡ ಪರದೆಯ ಮೇಲೆ ನೋಡಿದ್ದೇವೆ. ನಾನು ಆಕೆಯನ್ನು ಹತ್ತಿರದಿಂದ ನೋಡುತ್ತೇವೆ ಎಂದು ಎಂದಿಗೂ ಯೋಚಿಸಿರಲಿಲ್ಲ. ದೀಪಿಕಾ ತನ್ನ ಸೌಂದರ್ಯ ಮತ್ತು ಪ್ರತಿಭೆಯ ಮೂಲಕ ಬಾಲಿವುಡ್‌ನಲ್ಲಿ ತನ್ನದೇ ಆದ ಸ್ಥಾನವನ್ನು ಪಡೆದಿದ್ದಾರೆ ಎಂದರು.
ವೇದಿಕೆಯಿಂದ ಹೊರಡುವ ಮುನ್ನ ದೀಪಿಕಾ ಮುಗುಳ್ನಕ್ಕು, ನಮಸ್ಕರಿಸಿ ಸಭಿಕರತ್ತ ಕೈಬೀಸಿದರು. ಆರಾಮದಾಯಕ ಬಿಳಿ ಟಿ-ಶರ್ಟ್ ಮತ್ತು ಡೆನಿಮ್ ಜೀನ್ಸ್ ಧರಿಸಿ ದೀಪಿಕಾ ಕಂಗೊಳಿಸುತ್ತಿದ್ದರು. ಬೆಂಗಳೂರಿನಲ್ಲಿಯೇ ಜನಿಸಿ, ವಿದ್ಯಾಭ್ಯಾಸ ಮುಗಿಸಿದ ದೀಪಿಕಾ ಬಾಲಿವುಡ್ ಸೂಪರ್ ಸ್ಟಾರ್ ಆಗಿ ಮರೆದರು.
ಇದೀಗ ಒಂದು ಮಗುವಿಗೆ ತಾಯಿಯಾಗಿರುವ ದೀಪಿಕಾ, ಮೊದಲ ಬಾರಿಗೆ ಕನ್ನಡದಲ್ಲಿ ಸಾರ್ವಜನಿಕವಾಗಿ ಮಾತನಾಡುವ ಮೂಲಕ, ಅದರಲ್ಲೂ ಕನ್ನಡ ಕಲಿಸುವ ಮೂಲಕ ಜನಮೆಚ್ಚುಗೆ ಗಳಿಸಿದ್ದಾರೆ. ಅವರ ಮೊದಲ ಸಿನಿಮಾ ಕನ್ನಡದ ಐಶ್ವರ್ಯ ಎಂಬುದು ಗಮನಾರ್ಹ ಸಂಗತಿ.