ಉಪಯುಕ್ತ ರಾಜಕೀಯ ಸುದ್ದಿ

KSRTC ಕಾರ್ಯವೈಖರಿ ಮೆಚ್ಚಿದ ಮಹಾರಾಷ್ಟ್ರ ಸಾರಿಗೆ ಸಚಿವ: ಸಚಿವ ರಾಮಲಿಂಗ ರೆಡ್ಡಿ ಅವರ ಜತೆ ಚರ್ಚೆ

Share It

ಬೆಂಗಳೂರು:ಮಹಾರಾಷ್ಟ್ರ ಸರ್ಕಾರದ ಸಾರಿಗೆ ಸಚಿವ ಪ್ರತಾಪ್‌ ಸರ್‌ನಾಯಕ್‌ KSRTC ಕಾರ್ಯವೈಖರಿ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ್ದು, ಕರ್ನಾಟಕ ಸಾರಿಗೆ ಸಚಿಚ ರಾಮಲಿಂಗ ರೆಡ್ಡಿ ಅವರ ಜತೆಗೆ ಚರ್ಚೆ ನಡೆಸಿದರು.

ಸಚಿವ ಪ್ರತಾಪ್ ಸರ್ ನಾಯಕ್ ಜತೆಗೆ ಮಾಧವ್ ಕುಸೇಕರ್, ಎಂಎಸ್ಆರ್ ಟಿಸಿ ಉಪಾಧ್ಯಕ್ಷರು ಹಾಗೂ ವ್ಯವಸ್ಥಾಪಕ ನಿರ್ದೇಶಕರು ಹಾಗೂ ಅಧಿಕಾರಿಗಳ ತಂಡ ಕರಾರಸಾ ನಿಗಮದ, ಘಟಕ,‌ ಕಾರ್ಯಾಗಾರ ಹಾಗೂ ಕೇಂದ್ರ ಕಚೇರಿಗೆ ಭೇಟಿ ನೀಡಿದರು.

ಈ ಸಂದರ್ಭದಲ್ಲಿ ನಿಗಮದಲ್ಲಿನ ಪ್ರತಿಷ್ಠಿತ ವಾಹನಗಳ ಕಾರ್ಯಾಚರಣೆ, ಕಾರ್ಮಿಕ ಕಲ್ಯಾಣ ಉಪಕ್ರಮಗಳು, ವಾಣಿಜ್ಯ ಆದಾಯ, ಬಸ್ಸುಗಳ ಪುನಃಶ್ಚೇತನ/ ನವೀಕರಣ, ಹೆಚ್.ಆರ್.ಎಂ.ಎಸ್., ಇ-ಟೆಕೇಟಿಂಗ್, ಕೆ.ಎಸ್.ಆರ್.ಟಿ.ಸಿ. ಆರೋಗ್ಯ,  ರೂ 1 ಕೋಟಿ ಅಪಘಾತ ವಿಮೆ, ಇತರೆ ಉಪಕ್ರಮಗಳ ಬಗ್ಗೆ ಸಾರಿಗೆ ಸಚಿವ ರಾಮಲಿಂಗಾ ರೆಡ್ಡಿ, ರಿಜ್ವಾನ್ ನವಾಬ್, ಉಪಾಧ್ಯಕ್ಷರು, ಸರ್ಕಾರದ ಕಾರ್ಯದರ್ಶಿ, ಸಾರಿಗೆ ಇಲಾಖೆ, ವ್ಯವಸ್ಥಾಪಕ ನಿರ್ದೇಶಕರು, ಕರಾರಸಾ ನಿಗಮ ರವರೊಂದಿಗೆ ವಿವರವಾಗಿ ಚರ್ಚಿಸಿ ಮಾಹಿತಿ ಪಡೆದುಕೊಂಡರು.

ಮುಂದುವರೆದು, ನಿಗಮದ ಬೆಂಗಳೂರು ಕೇಂದ್ರೀಯ ವಿಭಾಗದ ಘಟಕ-2ಕ್ಕೆ ಭೇಟಿ ನೀಡಿದ ತಂಡವು ಐರಾವತ ಕ್ಲಬ್ ಕಾಸ್, ಐರಾವತ ಕ್ಲಬ್ ಕಾಸ್ 2.0, ಅಂಬಾರಿ ಡ್ರೀಮ್ ಕ್ಲಾಸ್, ಪಲ್ಲಕ್ಕಿ, ಅಂಬಾರಿ ಉತ್ಸವ, ಫ್ಲೈ ಬಸ್, ನಗರ ಸಾರಿಗೆ, ರಾಜಹಂಸ ಹಾಗೂ ಅಶ್ವಮೇಧ ವಾಹನಗಳನ್ನು ವೀಕ್ಷಿಸಿದರು. ಘಟಕ ಹಾಗೂ ಕಾರ್ಯಾಗಾರ ನಿರ್ವಹಣೆ, ವಾಹನಗಳಿಗೆ ನೀಡಿರುವ ಬ್ರಾಂಡಿಗ್ ಹಾಗೂ ವಾಹನಗಳ ಪುನಶ್ಚೇತನ ಕಾರ್ಯ ಹಾಗೂ ಹಲವು ಉಪಕ್ರಮಗಳ ಕುರಿತು ಮುಕ್ತಕಂಠದಿಂದ ಮೆಚ್ಚುಗೆ ವ್ಯಕ್ತಪಡಿಸಿದರು.

ಈ ಸಂದರ್ಭದಲ್ಲಿ ವ್ಯವಸ್ಥಾಪಕ ನಿರ್ದೇಶಕರು ಬೆಂ.ಮ.ಸಾ. ಸಂಸ್ಥೆ, ಹಾಗೂ ಮಾನ್ಯ ನಿರ್ದೇಶಕರು (ಸಿ ಮತ್ತು ಜಾ), ಅಪರ ಸಾರಿಗೆ ಆಯುಕ್ತರು, (ಪ್ರವರ್ತನ) (ದಕ್ಷಿಣ), ಹಾಗೂ ಎಂ.ಎಸ್.ಆರ್.ಟಿ.ಸಿ. ತಾಂತ್ರಿಕ, ಸಂಚಾರ ಹಾಗೂ ಕಾಮಗಾರಿ ಇಲಾಖೆಯ ಹಿರಿಯ ಅಧಿಕಾರಿಗಳು ಹಾಗೂ ಕರಾರಸಾ ನಿಗಮದ ಅಧಿಕಾರಿಗಳು ಉಪಸ್ಥಿತಿರಿದ್ದರು.


Share It

You cannot copy content of this page