ರಾಮಲಿಂಗ ರೆಡ್ಡಿ ಅರ್ಚಕರ ಕಣ್ಮಣಿ: ತಸ್ತಿಕ್ ಹೆಚ್ಚಿಸಿದ ಸಿಎಂ ಸಿದ್ದರಾಮಯ್ಯ ಅವರನ್ನು ಕೊಂಡಾಡಿದ ಅರ್ಚಕ ಸಮೂಹ
ಬೆಂಗಳೂರು: ಸರ್ಕಾರದ ಬಜೆಟ್ ನಲ್ಲಿ ತಸ್ತೀಕ್ ಮೊತ್ತವನ್ನು ರೂ.60,000 ದಿಂದ ರೂ.72,000 ಹೆಚ್ಚಳ ಮಾಡಿದ ಹಿನ್ನೆಲೆಯಲ್ಲಿ ಮುಖ್ಯಮಂತ್ರಿ ಸಿದ್ಧರಾಮಯ್ಯ ಹಾಗೂ ಮುಜರಾಯಿ ಸಚಿವ ರಾಮಲಿಂಗಾ ರೆಡ್ಡಿ ಅವರಿಗೆ ಅರ್ಚಕ ಸಮುದಾಯ ಅಭಿನಂದನೆ ತಿಳಿಸಿದೆ.
ಈ ಮೊದಲು ಕೂಡ ಅಂದರೆ 2013, 2015 ಮತ್ತು 2017 ಹಾಗೂ ಪ್ರಸ್ತುತ 2025 ರಲ್ಲಿ ಒಟ್ಟು 4 ಬಾರಿ ರೂ.48,000 ತಸ್ತೀಕ್ ಮೊತ್ತವನ್ನು ಹೆಚ್ಚಿಸಿರುವುದು ಸಿದ್ಧರಾಮಯ್ಯರವರೇ ಎಂಬುದು ಗಮನಾರ್ಹವಾದ ಸಂಗತಿ ಎಸಂದು ಅರ್ಚಕರು ಕೊಂಡಾಡಿದ್ದಾರೆ.
ಅರ್ಚಕರ, ಆಗಮಿಕರ ಹಾಗೂ ಉಪಾಧಿವಂತರ ಕಷ್ಟ ಕಾರ್ಪಣ್ಯಗಳಿಗಾಗಿ ಅವರ ದುಃಖ, ದುಮ್ಮಾನಗಳಿಗೆ ಸ್ಪಂದಿಸುವ ನಿಟ್ಟಿನಲ್ಲಿ ಧಾರ್ಮಿಕ, ಸಾಂಸ್ಕೃತಿಕ ಸಾಮಾಜಿಕ ನೆಲೆಯಲ್ಲಿ, ಇತ್ತೀಚಿನ ದಿನಗಳಲ್ಲಿ ಮುಜರಾಯಿ ಇಲಾಖೆಯಲ್ಲಿ ಅಭಿವೃದ್ಧಿಯ ಪ್ರವಾಹವೇ ಜರುಗಿದೆ ಎಂದು ಅವರು ತಿಳಿಸಿದ್ದಾರೆ.

ಸಚಿವರಾದ ರಾಮಲಿಂಗಾ ರೆಡ್ಡಿ, ಈಗಾಗಲೇ ಅರ್ಚಕರ ಕಣ್ಮಣಿ, ಕರ್ನಾಟಕದ ಬಂಗಾರದ ಮನುಷ್ಯ ಎಂದು ಅರ್ಚಕ ಸಮೂಹದಿಂದ ಮನೆಮಾತಾಗಿದ್ದಾರೆ. ಮುಜರಾಯಿ ಇಲಾಖೆಯಲ್ಲಿ ಧಾರ್ಮಿಕ ಸ್ನೇಹಿ ಯೋಜನೆ ಹಾಗೂ ಕಾರ್ಯಕ್ರಮ ರೂಪಿಸಿ, ಐತಿಹಾಸಿಕ ನಿರ್ಣಯ ಕೈಗೊಂಡು ಇತಿಹಾಸ ಸೃಷ್ಟಿಸಿರುವ ಏಕೈಕ ಮುಜರಾಯಿ ಸಚಿವರು ಎಂಬ ಕೀರ್ತಿಗೆ ಪಾತ್ರರಾಗಿದ್ದಾರೆ.
ಸಚಿವ ರಾಮಲಿಂಗಾ ರೆಡ್ಡಿ ಹಾಗೂ ಸರಕಾರದ ಕಾರ್ಯಕ್ಕೆ ದಿನೇಶ್ ಗುಂಡೂರಾವ್, ರಾಜ್ಯಾಧ್ಯಕ್ಷರು,
ಪ್ರೊ।। ಡಾ॥ ರಾಧಾಕೃಷ್ಣ ಕೆ.ಇ., ಗೌರವ ಪ್ರಧಾನ ಸಲಹೆಗಾರರು, ಡಾ। ಎಸ್.ಆರ್. ಶೇಷಾದ್ರಿ, ಭಟ್ಟರ್, ಗೌರವ ಉಪಾಧ್ಯಕ್ಷರು, ಡಾ॥ ಕೆ.ಎಸ್.ಎನ್. ದೀಕ್ಷಿತ್, ಮುಖ್ಯ ಪ್ರಧಾನ ಕಾರ್ಯದರ್ಶಿ, ಅಖಿಲ ಕರ್ನಾಟಕ ಹಿಂದೂ ದೇವಾಲಯಗಳ ಅರ್ಚಕರ, ಆಗಮಿಕರ ಮತ್ತು ಉಪಾಧಿವಂತರ ಒಕ್ಕೂಟ (ರಿ.) ಹಾಗೂ ಶ್ರೀವತ್ಸ, ರಾಜ್ಯಾಧ್ಯಕ್ಷರು, ಕರ್ನಾಟಕ ರಾಜ್ಯ ಮುಜರಾಯಿ ದೇವಾಲಯಗಳ ಅರ್ಚಕರ ಆಗಮಿಕರ ಮತ್ತು ನೌಕರರ ಸಂಘ(ರಿ)ರವರು ಹೃದಯತುಂಬಿ ಹಾರೈಸಿ ಅಭಿನಂದನೆ ಸಲ್ಲಿಸಿದ್ದಾರೆ.
ಈ ಸಂಬಂಧ ಮುಜರಾಯಿ ಸಚಿವರಿಗೆ ಸಿಹಿಯನ್ನು ತಿನ್ನಿಸಿ ಅಭಿನಂದನೆ ಸಲ್ಲಿಸಿದರು. ಡಾ.ವೆಂಕಟೇಶ್, ಆಯುಕ್ತರು ಮುಜರಾಯಿ ಇಲಾಖೆರವರಿಗೂ ಸಂಘದ ಪದಾದಿಕಾರಿಗಳು ಶುಭಕೋರಿದರು.


